
ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಜೂನ್ 10): ಮಾಡಿದ ಸಾಲ ತೀರಿಸಲು ಅಜ್ಜನೊಬ್ಬ ಮೊಮ್ಮಗನನ್ನೇ ಮಾರಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ಶಾಮನೂರು ಬಡಾವಣೆ ಬಸಣ್ಣ ಎಂಬ ವೃದ್ಧ ತನ್ನ ಮಗ ಜನಿಸಿದ ನವಜಾತ ಶಿಶುವನ್ನು 60 ಸಾವಿರಕ್ಕೆ ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಮಹಿಳಾ ಠಾಣೆ ಪೊಲೀಸರು 24 ಗಂಟೆಯಲ್ಲಿ ಮಗುವನ್ನು ಹುಡುಕಿ ತಾಯಿ ಮಡಿಲು ಸೇರಿಸಿದ್ದಾರೆ.
ದಾವಣಗೆರೆ ನಗರದ ಸೇರಿದಂತೆ ಜಿಲ್ಲೆಯಲ್ಲಿ ಮಗು ಮಾರಾಟ ಜಾಲ ಸಕ್ರೀಯವಾಗಿದೆ ಎಂಬುದಕ್ಕೆ ಮತ್ತೊಂದು ಪ್ರಕರಣ ಸಾಕ್ಷಿಯಾಗಿದೆ. ದಾವಣಗೆರೆ ನಾಗಮ್ಮ ಕೇಶವ ಮೂರ್ತಿ ಬಡಾವಣೆಯಲ್ಲಿ ಅಜ್ಜನೊಬ್ಬ ತನ್ನ ಮಗಳಿಗೆ ಜನಿಸಿದ ಮಗುವನ್ನೇ ಮಾರಾಟ ಮಾಡಿ ಕಂಬಿ ಎಣಿಸುವ ಪ್ರಸಂಗ ತಂದುಕೊಂಡಿದ್ದಾನೆ. ನಾಗಮ್ಮ ಕೇಶವಮೂರ್ತಿ ಬಸಪ್ಪ ಎಂಬ 60 ವರ್ಷದ ವೃದ್ಧ ಬಸಣ್ಣ ತನ್ನ ಮಗಳಿಗೆ ಜನಿಸಿದ ಗಂಡು ಮಗುವನ್ನು ಮೂರು ದಿನಗಳ ಹಿಂದೆ 60 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾನೆ.
ಮಲ್ಪೆ ಬೀಚ್ ಗೆ ಬೇಲಿ ಅಳವಡಿಕೆ, ನೀರಿಗಿಳಿದರೆ ಹುಷಾರ್!
ಕುಡಿತದ ಚಟ ಹಾಗು ದುರಬ್ಯಾಸಕ್ಕೆ ದಾಸನಾಗಿದ್ದ ಬಸಪ್ಪ ಸಾಲಸೂಲ ಮಾಡಿದ್ದ. ಕಳೆದ ಮೂರು ದಿನದ ಹಿಂದೆ ಜೇಬಿನಲ್ಲಿ ಸಾವಿರ ಗಟ್ಟಲೇ ನೋಟು ಇಟ್ಟುಕೊಂಡಿದ್ದರಿಂದ ಮಕ್ಕಳಿಗೆ ಅನುಮಾನ ಬಂದು ದುಡ್ಡು ಎಲ್ಲಿಂದ ಬಂತು ಎಂದು ಬೆದರಿ ಕೇಳಿದ್ದಾರೆ. ಆಗ ಮಗಳಿಗೆ ಮೂರು ದಿನಗಳ ಹಿಂದೆ ಜನಿಸಿದ ಗಂಡು ಮಗುವನ್ನು ವಿಜಯನಗರ ಜಿಲ್ಲೆ ಹಡಗಲಿ ಬಳಿ ನವೀಲೆ ಗ್ರಾಮದ ದಂಪತಿ ಗೆ ಸ್ಥಳೀಯ ವ್ಯಕ್ತಿಯೊಬ್ಬನ ಸಲಹೆ ಮೇರೆಗೆ ಮಾರಾಟ ಮಾಡಿದ್ದಾರೆ.
ಬಸಪ್ಪನ ಮಗಳು ಸುಜಾತ್ ಸ್ವಲ್ಪ ಬುದ್ದಿ ಮಾಂದ್ಯ ಹೆಣ್ಣು ಮಗಳಾಗಿದ್ದ ಆ ಮಗುವನನ್ನು ಪಾಲನೆ ಪೋಷಣೆ ಮಾಡುವುದು ಕಷ್ಟ ಎಂದು ಭಾವಿಸಿದ ಬಸಪ್ಪ ಸ್ಥಳೀಯ ಬ್ರೋಕರ್ ಎಗ್ ರೈಸ್ ಪರುಶರಾಮ್ ಎಂಬುವರ ಮೂಲಕ ಹಡಗಲಿಯ ಹಾಲೇಶಪ್ಪನಿಗೆ ಮಗುವನ್ನು ನೀಡಿ 60 ಸಾವಿರ ಹಣ ಪಡೆದಿದ್ದಾನೆ.
Chikkamagaluru ; ಅಕ್ರಮ ಗೋಮಾಂಸ ಮಾರಾಟ ಶೆಡ್ ತೆರವು
ಇದು ಮನೆಯಲ್ಲಿ ಗೊತ್ತಾದ ತಕ್ಷಣ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಿನ್ನೆ ಕಾರ್ಯಪ್ರವೃತ್ತರಾದ ಮಹಿಳಾ ಠಾಣೆ ಸಿಬ್ಬಂದಿ ಬಸಪ್ಪನನ್ನು ವಶಕ್ಕೆ ಪಡೆದು ಮಗು ಇರುವ ಮನೆಯನ್ನ ಪತ್ತೆಹಚ್ಚಿದ್ದಾರೆ. ಹಡಗಲಿ ,ಮೂಲದ ಹಾಲೆಶಪ್ಪ ನ ಕುಟುಂಭಕ್ಕೆ ಹಲವು ವರ್ಷ ಕಳೆದ್ರು ಮಕ್ಕಳಿರಲಿಲ್ಲ. ಏನಾದ್ರು ಒಂದು ಮಗು ಪಡೆಯಲೇಬೇಕೆಂದು ಪರುಶರಾಮ್ ನನ್ನು ಸಂರ್ಕಿಸಿದಾಗ ಬಸಪ್ಪನಿಗೆ ಪರಿಚಯ ಮಾಡಿಸಿ ವ್ಯವಹಾರ ಮಾಡಿದ್ದಾನೆ.
ಮಗುವನ್ನು ಕಳೆದುಕೊಂಡ ತಾಯಿಗೆ ಮಗು ಸಾವನ್ನಪ್ಪಿದೆ ಎಂದು ತಂದೆ ಬಸಪ್ಪ ತನ್ನ ಮಗಳಿಗೆ ಸುಳ್ಳು ಹೇಳಿದ್ದಾರೆ. ಮಗುವಿನ ತಾಯಿ ಕಳೆದ ಮೂರು ದಿನಗಳಿಂದ ಅತೀವ ಸಂಕಟಪಟ್ಟಿದ್ದಾಳೆ. ದುಡ್ಡಿನ ದುರಾಸೆಗೆ ಬಿದ್ದು ಮಗು ಮಾರಾಟ ಮಾಡಿದ ಎಲ್ಲಾ ಅರೋಪಿಗಳನ್ನು ದಾವಣಗೆರೆ ಮಹಿಳಾ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಖಾಲಿ ಬ್ಯಾಲೆಟ್ ಪೇಪರ್ ಹಾಕಿದ್ದರೆ ರಾಜಕೀಯದಿಂದ ನಿವೃತ್ತಿ ಹೊಂದುವೆ : Gubbi Srinivas
ವಾರದ ಹಿಂದೆ ಜನಿಸಿದ ಮಗು ಆರೋಗ್ಯವಾಗಿದ್ದು ಇದೀಗ ತಾಯಿಯ ಮಡಿಲು ಸೇರಿರುವುದಕ್ಕೆ ಇಡೀ ಕುಟುಂಬ ಹೋದ ಜೀವ ಬಂದಂತಾಗಿದೆ. ಮಗುವನ್ನು ಮಾರಾಟ ಮಾಡಿದ ಇಬ್ಬರು, ಮಗುವನ್ನು ಸುದ್ದುದ್ದೇಶದಿಂದ ತೆಗೆದುಕೊಂಡ ಇಬ್ಬರನ್ನು ಪೊಲೀಸರು ಬಂಧಿಸಿದ್ದು ಅನ್ಯರ ಮಕ್ಕಳನ್ನು ಪಡೆಯುವ ಮಾರಾಟ ಮಾಡುವವರೇ ಎಚ್ಚರ ಎಂಬ ಸಂದೇಶ ರವಾನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ