ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ರೌಡಿ ಶೀಟರ್‌ವೊಬ್ಬ ಅಪ್ಲಿಕೇಷನ್‌ವೊಂದರ ಮೂಲಕ ಸಲಿಂಗಕಾಮಿಗಳನ್ನು ತನ್ನ ರೂಮಿಗೆ ಕರೆಸಿಕೊಂಡು ಬಟ್ಟೆ ಬಿಚ್ಚುವಂತೆ ಒತ್ತಾಯಿಸುತ್ತಾನೆ. ನಂತರ, ಬೆತ್ತಲೆ ವಿಡಿಯೋಗಳನ್ನು ಚಿತ್ರೀಕರಿಸಿ ಚಾಕುವಿನಿಂದ ದರೋಡೆ ಮಾಡ್ತಿದ್ದ ಎಂದು ತಿಳಿದುಬಂದಿದೆ.
ಹೈದರಾಬಾದ್ (ಆಗಸ್ಟ್ 4, 2023): ಸುಲಿಗೆಗಾಗಿ ಈ ಹಿಂದೆ ಪ್ರಿವೆಂಟಿವ್ ಡಿಟೆನ್ಶನ್ (ಪಿಡಿ) ಕಾಯ್ದೆಯಡಿ ಬಂಧಿತನಾಗಿದ್ದ ರೌಡಿ ಶೀಟರ್‌ವೊಬ್ಬ ಜೈಲಿನಿಂದ ಬಿಡುಗಡೆಯಾದ ಬಳಿಕ ತನ್ನ ಸುಲಿಗೆ ಮಾಡುವ ವಿಧಾನವನ್ನೇ ಮುಂದುವರಿಸಿದ್ರೂ ಬೇರೆ ರೀತಿಯಲ್ಲಿ ಮಾಡ್ತಿದ್ದಾನೆ. ಅಪ್ಲಿಕೇಷನ್‌ವೊಂದರ ಮೂಲಕ ಸಲಿಂಗಕಾಮಿಗಳನ್ನು ತನ್ನ ಮನೆಗೆ ಆಮಿಷವೊಡ್ಡಿ ಕರೆಸಿಕೊಂಡು ಸುಲಿಗೆ ಮಾಡ್ತಿದ್ದಾನೆ ಎಂದು ಹೇಳಲಾಗ್ತಿದೆ.
ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಬಂಜಾರಾ ಹಿಲ್ಸ್ ಪೊಲೀಸರು ಈ ರೌಡಿಶೀಟರ್‌ನನ್ನು ಹಿಡಿಯಲು ಹುಡುಕಾಟ ನಡೆಸ್ತಿದ್ದಾರೆ ಎಂದು ತಿಳಿದುಬಂದಿದೆ. ಈತ ಅಪ್ಲಿಕೇಷನ್‌ವೊಂದರ ಮೂಲಕ ಸಲಿಂಗಕಾಮಿಗಳನ್ನು ತನ್ನ ರೂಮಿಗೆ ಕರೆಸಿಕೊಂಡು ಬಟ್ಟೆ ಬಿಚ್ಚುವಂತೆ ಒತ್ತಾಯಿಸುತ್ತಾನೆ. ನಂತರ, ಬೆತ್ತಲೆ ವಿಡಿಯೋಗಳನ್ನು ಚಿತ್ರೀಕರಿಸಿ ಚಾಕುವಿನಿಂದ ದರೋಡೆ ಮಾಡ್ತಿದ್ದ ಎಂದು ತಿಳಿದುಬಂದಿದೆ.
ಇದನ್ನು ಓದಿ: 2ನೇ ಮದ್ವೆಯಾಗಿದ್ಕೆ ಸತ್ತ ಮೇಲೂ ಸವತಿ ಕಾಡಿದ ಮೊದಲ ಹೆಂಡ್ತಿ: ‘ಆತ್ಮ’ದ ಕಿರುಕುಳಕ್ಕೆ ಬೇಸತ್ತ ಮಹಿಳೆ ಆತ್ಮಹತ್ಯೆ
ಈ ಶಂಕಿತ ವ್ಯಕ್ತಿಯನ್ನು ಬಂಜಾರಾ ಹಿಲ್ಸ್‌ನ ಭೋಲಾ ನಗರದ ಅಫ್ರಿದಿ (24) ಎಂದು ಸಂತ್ರಸ್ತರು ಮತ್ತು ಪೊಲೀಸರು ಗುರುತಿಸಿದ್ದು, 2020 ರಿಂದ ಎರಡು ಬಾರಿ ಈತನ ವಿರುದ್ಧ PD ಕಾಯ್ದೆ ದಾಕಲಿಸಲಾಗಿರುವುದು ತಿಳಿದುಬಂದಿದೆ. ಬುಧವಾರ ಇಬ್ಬರು ಯುವಕರು ಈತನ ವಿರುದ್ಧ ದೂರು ದಾಖಲಿಸಿದ್ದು, ಈತ ಮತ್ತೆ ಪೊಲೀಸರ ಕಣ್ಗಾವಲಿನಲ್ಲಿದ್ದಾನೆ ಎಂದು ತಿಳಿದುಬಂದಿದೆ.
ಬುಧವಾರ ಮಧ್ಯಾಹ್ನ, ಮಾದಾಪುರದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ 23 ವರ್ಷದ ಟೆಕ್ಕಿಯೊಬ್ಬರು ಮಂಗಳವಾರ ಮನೆಗೆ ಹಿಂದಿರುಗುವಾಗ ತಮ್ಮ ಫೋನ್‌ನಲ್ಲಿ Grindr ಅಪ್ಲಿಕೇಶನ್ ಅನ್ನು ನೋಡುತ್ತಿದ್ದೆ. ಬಂಜಾರಾ ಹಿಲ್ಸ್‌ನಲ್ಲಿದ್ದಾಗ ಅಫ್ರಿದಿ ಎಂಬುವರು ತನ್ನನ್ನು ಸಂಪರ್ಕಿಸಿದರು. ನಂತರ, ದೂರುದಾರರು ಬಂಜಾರಾ ಹಿಲ್ಸ್‌ನ ಭೋಲಾ ನಗರದಲ್ಲಿ ಅಫ್ರಿದಿ ಕಳುಹಿಸಿದ ಸ್ಥಳಕ್ಕೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. "ನಾನು ಅಫ್ರಿದಿ ಅವರ ಕೋಣೆಗೆ ಪ್ರವೇಶಿಸಿದಾಗ, ಅವರು ನನ್ನತ್ತ ಚಾಕು ತೋರಿಸಿ, ಬಟ್ಟೆ ಬಿಚ್ಚುವಂತೆ ಹೇಳಿದರು. ಅವರು ನನ್ನ ನಗ್ನ ವಿಡಿಯೋಗಳನ್ನು ತೆಗೆದುಕೊಂಡರು ಮತ್ತು ನನ್ನ ಬೆಳ್ಳಿ ಬಳೆ, ಚೈನ್ ಮತ್ತು 2,000 ರೂ. ನಗದನ್ನು ಕಿತ್ತುಕೊಂಡರು," ಎಂದು ದೂರುದಾರರು ಹೇಳಿದ್ದಾರೆ.
ಇದನ್ನೂ ಓದಿ: ಬಾಲಕಿ ರೇಪ್ ಮಾಡಿ ಸಾಕ್ಷ್ಯ ನಾಶ ಮಾಡಲು ಕಲ್ಲಿದ್ದಲು ಕುಲುಮೆಯಲ್ಲಿ ಸುಟ್ಟು ಕೊಂದ ಪಾಪಿಗಳು!
ಪೊಲೀಸರು ಮೊದಲ ದೂರನ್ನು ಪರಿಶೀಲಿಸುತ್ತಿರುವಾಗ, ಖೈರತಾಬಾದ್‌ನ 27 ವರ್ಷದ ಖಾಸಗಿ ಉದ್ಯೋಗಿ ಸಹ ಇದೇ ರೀತಿ ದೂರನ್ನು ನೀಡಿದ್ದಾರೆ. ಎರಡನೇ ಬಲಿಪಶು ಬುಧವಾರ ರಾತ್ರಿ ಅದೇ Grindr ಅಪ್ಲಿಕೇಶನ್ ಅನ್ನು ಬ್ರೌಸ್ ಮಾಡುವಾಗ ಅಫ್ರಿದಿಯ ಪ್ರೊಫೈಲ್ ಅನ್ನು ನೋಡಿದರು. ಅಫ್ರಿದಿ ಭೋಲಾ ನಗರದಲ್ಲಿನ ತನ್ನ ರೂಮ್‌ನ ಸ್ಥಳವನ್ನು ಹಂಚಿಕೊಂಡಿಡನು ಮತ್ತು ತಾನು ಅಲ್ಲಿಗೆ ಹೋದ ಬಳಿಕ ತನ್ನ ನಗ್ನ ವೀಡಿಯೊವನ್ನು ರೆಕಾರ್ಡ್ ಮಾಡಿ ಚಾಕುವಿನಿಂದ ದರೋಡೆ ಮಾಡಿದನು ಎಂದು ದೂರಿನಲ್ಲಿ ಹೇಳಲಾಗಿದೆ.
"ನಗ್ನ ವಿಡಿಯೋ ರೆಕಾರ್ಡ್ ಮಾಡಬೇಡಿ ಎಂದು ನಾನು ಅಫ್ರಿದಿಯನ್ನು ಕೇಳಿಕೊಂಡಾಗ ಅವನು ಕೋಣೆಯ ಹೊರಗೆ ಇದ್ದ ತನ್ನ ಸ್ನೇಹಿತ ಹರೂನ್‌ಗೆ ಕರೆ ಮಾಡಿದನು. ಇಬ್ಬರೂ ನನ್ನನ್ನು ಚಾಕು ಮತ್ತು ಸುತ್ತಿಗೆಯಿಂದ ಬೆದರಿಸಿ ನನ್ನ ಚಿನ್ನದ ಉಂಗುರ, 7,000 ರೂ. ನಗದನ್ನು ಕಸಿದುಕೊಂಡರು ಮತ್ತು 20,000 ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡರು. ಫೋನ್‌ಪೇ ಅಪ್ಲಿಕೇಶನ್ ಮೂಲಕ ಮೊಹಮ್ಮದ್ ಓಮರ್ ಮೊಹಿಯುದ್ದೀನ್’ ಎಂಬ ಖಾತೆಗೆ ಟ್ರಾನ್ಸ್‌ಫರ್ ಮಾಡಿಸಿಕೊಂಡರು’’ ಎಂದೂ ಎರಡನೇ ದೂರುದಾರ ಆರೋಪಿಸಿದ್ದಾನೆ.
ಇದನ್ನೂ ಓದಿ: Bengaluru Crime: ಯುವತಿ ಜತೆ ಲವ್ವಿಡವ್ವಿ: ಫ್ರೆಂಡ್ಸ್ ಜತೆ ಡ್ಯಾನ್ಸ್ ಟೀಚರ್‌ನಿಂದ ಗ್ಯಾಂಗ್‌ರೇಪ್!