
ಮೈಸೂರು(ಆ. 23) ಸಾಂಸ್ಕ್ರತಿಕ ನಗರಿಯಲ್ಲಿ ಗುಂಡಿನ ಸದ್ದು ಕೇಳಿದೆ ಚಿನ್ನಾಭರಣ ಅಂಗಡಿ ಒಳಗೆ ಫೈರಿಂಗ್ ಆಗಿದೆ. ಗುಂಡೇಟು ತಗುಲಿ ಒಬ್ಬರು ಸಾವನ್ನಪ್ಪಿದ್ದಾರೆ.
ದರೋಡೆ ಮಾಡಲು ಯತ್ನಿಸಿದ ಗುಂಪು ತಪ್ಪಿಸಿಕೊಳ್ಳಲು ಮುಂದಾದವರ ಮೇಲೆ ಗುಂಡಿನ ದಾಳಿ ಮಾಡಿದೆ. ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಘಟನೆ ನಡೆದಿದೆ.
ಎಣ್ಣೆ ಏಟಲ್ಲಿ ಎಟಿಎಂ ಕದಿಯಲು ಬಂದು ತಗ್ಲಾಕೊಂಡ
ಅಮೃತ್ ಗೋಲ್ಡ್ ಆ್ಯಂಡ್ ಸಿಲ್ವರ್ ಯಲ್ಲಿ ಗುಂಡಿನ ಸದ್ದು ಕೇಳಿದೆ. ಮುಖ್ಯರಸ್ತೆಯಲ್ಲಿರುವ ಅಂಗಡಿಗೆ ನುಗ್ಗಿದ ಮೂವರು ದರೋಡೆಕೋರರು ಚಿನ್ನ, ಬೆಳ್ಳಿ ಕದಿಯಲು ಯತ್ನಿಸಿದ್ದಾರೆ. ಇದನ್ನು ತಡೆಯಲು ಯತ್ನಿಸಿದ ಅಂಗಡಿ ಮಾಲೀಕ ಧರ್ಮೇಂದ್ರ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.ದಾಳಿಯ ವೇಳೆ ಅಂಗಡಿ ಒಳಗೆ ಇದ್ದ ದಡದಹಳ್ಳಿ ಚಂದ್ರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ