ಆಫ್ರಿಕನ್ನನ ಹೊಟ್ಟೆಯಲ್ಲಿತ್ತು 11 ಕೋಟಿ ರು. ಮೌಲ್ಯದ ಡ್ರಗ್ಸ್

Kannadaprabha News   | Asianet News
Published : Aug 22, 2021, 03:56 PM IST
ಆಫ್ರಿಕನ್ನನ ಹೊಟ್ಟೆಯಲ್ಲಿತ್ತು 11 ಕೋಟಿ ರು. ಮೌಲ್ಯದ ಡ್ರಗ್ಸ್

ಸಾರಾಂಶ

11 ಕೋಟಿ ರು. ಮೌಲ್ಯದ ಡ್ರಗ್ಸ್ ಗುಳಿಗೆ  ರೂಪದಲ್ಲಿ ನುಂಗಿ ಸಿನಿಮೀಯ ಶೈಲಿಯಲ್ಲಿ ಸಾಗಿಸಲು ಯತ್ನ ಚಾಲಾಕಿ ವಿದೇಶಿ ಪ್ರಜೆಯೊಬ್ಬ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಗುಪ್ತದಳದ ಅಧಿಕಾರಿಗಳ ಬಲೆಗೆ 

 ಬೆಂಗಳೂರು (ಆ.22): ಸುಮಾರು 11 ಕೋಟಿ ರು. ಮೌಲ್ಯದ ಡ್ರಗ್ಸ್ ಗುಳಿಗೆ  ರೂಪದಲ್ಲಿ ನುಂಗಿ ಸಿನಿಮೀಯ ಶೈಲಿಯಲ್ಲಿ ಸಾಗಿಸಲು ಯತ್ನಿಸಿದ ಚಾಲಾಕಿ ವಿದೇಶಿ ಪ್ರಜೆಯೊಬ್ಬ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಗುಪ್ತದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. 

ನೈಜೀರಿಯಾ ಪ್ರಜೆ ಬಂಧಿತನಾಗಿದ್ದು ಎರಡು ದಿನಗಳ ಹಿಂದೆ ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನಿಂದ ನಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಸಿಕ್ಕಿ ಬಿದ್ದಿದ್ದಾನೆ. ವೈದ್ಯಕೀಯ ತಪಾಸಣೆ ಬಳಿಕ ಅತನ ಹೊಟ್ಟೆಯಲ್ಲಿದ್ದ 11 ಕೊಟಿ ರು. ಮೌಲ್ಯದ 1.25 ಕೆಜಿ ಆಫ್ರಿಕಾ ಕೊಕೇನ್ ಜಪ್ತಿ ಮಾಡಲಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ಹೇಳಿದ್ದಾರೆ. 

ಬೆಂಗಳೂರಲ್ಲಿ ಆಫ್ರಿಕನ್ನರ ಡ್ರಗ್‌ ಮಾಫಿಯಾ!

ಹೊಟ್ಟೆಯಲ್ಲಿದ್ದ 1.25 ಕೆಜಿ ಕೊಕೇನ್ : ದಕ್ಷಿಣ ಅಫ್ರಿಕಾದ ವಿಮಾನದಲ್ಲಿ ಡ್ರಗ್ಸ್ ಸಾಗಾಣಿಕೆ ನಡೆದಿದೆ ಎಂಬ ಮಾಹಿತಿ ಡಿಅರ್‌ಐ ಅಧಿಕಾರಿಗಳಿಗೆ ಲಭ್ಯವಾಯಿತು. ಕೂಡಲೆ ಎಚ್ಚೆತ್ತ ಅಧಿಕಾರಿಗಳು ಆ.19 ರಂದು ದಕ್ಷಿಣ ಆಪ್ರಿಕಾದ ಜೊಹೇನ್ಸ್‌ ಬರ್ಗ್‌ನಿಂದ  ಕೆಐಎಗೆ ಬಂದಿಳಿದ ವಿಮಾನದ ಪ್ರಯಾಣಿಕರನ್ನು  ತೀವ್ರವಾಗಿ ತಪಾಸಣೆ ಮಾಡಿದಾಗ ಈತ ಸಹ ಇದ್ದ. 

ಇನ್ನು ಬೆಂಗಳೂರಿಗೆ ಬುಕ್ ಮಾಡಿದ್ದ ಟಿಕೆಟ್‌ನಲ್ಲಿ ಆರೋಪಿಗೆ ಪ್ರಯಾಣದ ವೇಳೆ ವಿಮಾನದಲ್ಲಿ ಉಚಿತ ಆಹಾರ ಸೌಲಭ್ಯ ಇತ್ತು. ಆದರೆ ಪ್ರಯಾಣದ ಸಂದರ್ಭದಲ್ಲಿ ಆತ ಗುಟುಕು ನೀರು ಸಹ ಕುಡಿದಿಲ್ಲ ಎಂಬ ಸಂಗತಿ ಗೊತ್ತಾಯಿತು. ಈ ಹಿನ್ನೆಯೆಲ್ಲಿ ಆತನನ್ನು ವಶಕ್ಕೆ ಪಡೆದು ಆರೋಪಿ ಬ್ಯಾಗ್ ತಪಾಸಣೆ ನಡೆಸಿದಾಗ ಡ್ರಗ್ಸ್ ಸಿಗಲಿಲ್ಲ. ಕೊನೆಗೆ ಆತನ ಇಡೀ ದೇಹ ಸ್ಕ್ಯಾನ್ ಮಾಡಿದಾಗ ಹೊಟ್ಟೆಯಲ್ಲಿ ಅನುಮಾನಾಸ್ಪದ ರೂಪದ ಗುಳಿಗೆಗಳು ಪತ್ತೆಯಾದವು. 

ಕೂಡಲೇ ಆರೋಪಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಆಗ ಆತನ ಹೊಟ್ಟೆಯಲ್ಲಿದ್ದ 11 ಕೊಟಿ ರು. ಮೌಲ್ಯದ  1.25 ಕೆಜಿ ಕೊಕೇನ್ ಅನ್ನು ವೈದ್ಯರು ಹೊರ ತೆಗೆದರು. 

ದಕ್ಷಿಣ ಆಫ್ರಿಕಾದ ಪೆಡ್ಲರ್  ಇದಕ್ಕೆ ಸಹಕರಿಸಿದ್ದ ಎನ್ನಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ