ಬಸ್ ನಲ್ಲಿ ಮಹಿಳೆಯ‌ ಚಿನ್ನದ ಸರ ಕಳವು; ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರ ಬ್ಯಾಗ್ ತಪಾಸಣೆ!

Published : Feb 25, 2024, 07:28 AM IST
ಬಸ್ ನಲ್ಲಿ ಮಹಿಳೆಯ‌ ಚಿನ್ನದ ಸರ ಕಳವು; ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರ ಬ್ಯಾಗ್ ತಪಾಸಣೆ!

ಸಾರಾಂಶ

ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಮಹಿಳೆ ಕೊರಳಲ್ಲಿದ್ದ ಚಿನ್ನದ ಸರ ಕಳವು ಮಾಡಿದ ಘಟನೆ ನಡೆದಿದ್ದು, ಚಿನ್ನದ ಸರಕ್ಕಾಗಿ ಇಡೀ ಬಸ್ ಪ್ರಯಾಣಿಕರ ಬ್ಯಾಗ್ ತಪಾಸಣೆ ಮಾಡಿದ ಪೊಲೀಸರು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಬಸ್‌ ನಿಲ್ದಾಣದಲ್ಲಿ ನಡೆದಿರುವ ಘಟನೆ.

ರಾಯಚೂರು (ಫೆ.25) ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಮಹಿಳೆ ಕೊರಳಲ್ಲಿದ್ದ ಚಿನ್ನದ ಸರ ಕಳವು ಮಾಡಿದ ಘಟನೆ ನಡೆದಿದ್ದು, ಚಿನ್ನದ ಸರಕ್ಕಾಗಿ ಇಡೀ ಬಸ್ ಪ್ರಯಾಣಿಕರ ಬ್ಯಾಗ್ ತಪಾಸಣೆ ಮಾಡಿದ ಪೊಲೀಸರು.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಬಸ್‌ ನಿಲ್ದಾಣದಲ್ಲಿ ನಡೆದಿರುವ ಘಟನೆ. ತಿಂಥಣಿ ಬ್ರಿಜ್ ನಿಂದ ದೇವದುರ್ಗ ಕಡೆ ಬರುವ ವೇಳೆ ಚಿನ್ನದ ಸರ ಕಳ್ಳತನ. ಸುಮಾರು 50 ಗ್ರಾಂನ ಎರಡು ಚಿನ್ನದ ಸರ ಹೊಂದಿದ್ದ ಮಹಿಳೆ. ಮಹಿಳೆಯ ಗಮನ ಬೇರೆಡೆ ಸೆಳೆದು ಚಿನ್ನ ಎಗರಿಸಿರುವ ಖದೀಮರು. 

ಬಳಿಕ ಚಿನ್ನದ ಸರ ಕಾಣದಿದ್ದರಿಂದ ಗಾಬರಿಗೊಂಡು ಪತಿಗೆ ತಿಳಿಸಿರುವ ಮಹಿಳೆ. ಜಾಲಹಳ್ಳಿ ಬಸ್ ನಿಲ್ದಾಣಕ್ಕೆ ಬರುತ್ತಲೇ ಬಸ್ ನಿಲ್ಲಿಸಿ ಪೊಲೀಸರನ್ನು ಕರೆಸಿ ಬ್ಯಾಗ್ ತಪಾಸಣೆ ಮಾಡಿಸಿದರು. ಬಸ್ ನಲ್ಲಿ ಕುಳಿತಿದ್ದ ಎಲ್ಲ ಪ್ರಯಾಣಿಕರನ್ನು ಬ್ಯಾಗ್ ಸಮೇತ ಕೆಳಗಿಳಿಸಿ ತಪಾಸನೆ ಮಾಡಿದ ಪೊಲೀಸರು. ತಪಾಸಣೆ ನಡೆಸಿದ್ರೂ ಚಿನ್ನದ ಸರ ಪತ್ತೆಯಾಗಿಲ್ಲ. ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

ನಕಲಿ‌ ದಾಖಲೆ ಸೃಷ್ಟಿಸಿ ಭೂಮಿ ಕಬಳಿಕೆ ಯತ್ನ: ಅಧಿಕಾರಿಗಳ ಕಣ್ಣಮುಚ್ಚಾಲೆ ಆಟಕ್ಕೆ ಪರದಾಡ್ತಿರೋ‌ ಮಹಿಳೆ!

ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್ ಗಳಲ್ಲಿ ಮಹಿಳೆಯರ ಪ್ರಯಾಣ ಹೆಚ್ಚಾಗಿದೆ. ಕಿಕ್ಕಿರಿದು ತುಂಬಿರುವ ಬಸ್ ಗಳೇ ಖದೀಮರಿಗೆ ಸರಗಳ್ಳತನ ಮಾಡಲು ವರದಾನ ಆಗಿದೆ.  ಈ ಹಿಂದೆಯೂ ಹಲವು ಸರಗಳ್ಳತನ ಘಟನೆ ನಡೆದಿದ್ದರೂ ಪ್ರಯಾಣದಲ್ಲಿ ಮಹಿಳೆಯರು ಚಿನ್ನದ ಸರ ಧರಿಸಿ ಪ್ರಯಾಣಿಸುವುದು ಕಡಿಮೆಯಾಗಿಲ್ಲ. ಇದೀಗ ಮತ್ತೊಮ್ಮೆ ಚಿನ್ನದ ಸರ ಕಳ್ಳತನವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ
The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್