ಬೆಂಗಳೂರು; ಫುಲ್ ಟೈಟಾಗಿ ಸರಗಳ್ಳತನಕ್ಕೆ ಇಳಿಯುತ್ತಿದ್ದ ಕಿಲಾಡಿ ಅರೆಸ್ಟ್

By Suvarna News  |  First Published Jun 29, 2021, 5:11 PM IST

* ಅನ್ ಲಾಕ್ ನಂತರ ಹೆಚ್ಚಿದ ಸರಗಳ್ಳತನ ಪ್ರಕರಣ
* ಕಿಡಕಿ ಪಕ್ಕ ನಿದ್ರಿಸುವ ಹಾಗೆ ಇಲ್ಲ
* ಫುಲ್ ಟೈಟಾಗಿ ಬಂದು ಕಳ್ಳತನಕ್ಕೆ ಇಳಿಯುತ್ತಿದ್ದ
* ಕುಡುಕ ಕಳ್ಳ ಪೊಲೀಸರ ಬಲೆಗೆ 


ಬೆಂಗಳೂರು( ಜೂ. 29)   ಬೆಂಗಳೂರಿಗೆ ನಿಮ್ಮ ಮನೆ ಕಿಟಕಿ ಪಕ್ಕ ಮಲಗುವ ಮುನ್ನ ಎಚ್ಚರ.. ಕಿಟಕಿ ಪಕ್ಕಾ ಮಲಗಿದ್ರೆ ನಿಮ್ಮ ಸರ ಕ್ಷಣಾರ್ಧದಲ್ಲಿ ಮಂಗಮಾಯವಾಗುತ್ತದೆ. ಕಿಟಕಿ ಪಕ್ಕಾ ಮಲಗಿದ್ರೆ ಅಷ್ಟೆ ಕತೆ.

ಕಿಟಕಿ ಪಕ್ಕಾ ಮಲಗಿರುವರನ್ನು ಟಾರ್ಗೆಟ್ ಮಾಡಿ ಸರ ಅಪರಹಣ ಮಾಡುತ್ತಿದ್ದ ಚಾಲಾಕಿಯನ್ನು ಬಂಧಿಸಲಾಗಿದೆ. ರಾತ್ರಿ 3 ಗಂಟೆಗೆ ಕಾರ್ಯಾಚರಣೆಗೆ ಇಳಿಯುತ್ತಿದ್ದ ಕಳ್ಳ ಸೆರೆಸಿಕ್ಕಿದ್ದಾನೆ ಹೆಸರು ಸೈಯದ್ ರಫಿ ಅಲಿಯಾಸ್ ಚೋರ್ ರಫಿ!

Tap to resize

Latest Videos

ರೇಖಾ ಕದಿರೇಶ್ ಕೊಲೆ ಹಿಂದೆ ಮಹಿಳೆಯ ಕೈವಾಡ

ಮಾಗಡಿರೋಡ್, ಬಸವೇಶ್ವರ ನಗರ ಸೇರಿದಂತೆ ಬೆಂಗಳೂರಿನ ಹಲವೆಡೆ ಇದೇ ರೀತಿ ಕಳ್ಳತನ ಮಾಡಿದ ಆರೋಪಿ ಸೆರೆಸಿಕ್ಕಿದ್ದಾನೆ.  ಒಂದು ವೇಳೆ ಸಿಕ್ಕಿಹಾಕ್ಕೊಂಡ್ರೇ ಜನರಿಗೆ ಅನುಮಾನ ಬರಬಾದು ಅಂತಾ  ಕಂಠಪೂರ್ತಿ ಕುಡಿದು ಕಳ್ಳತನಕ್ಕೆ ಇಳಿಯುತ್ತಿದ್ದ.

 ಕುಡಿದು ಬಂದ್ರೆ ಜನರಿಗೆ ಅನುಮಾನ ಬರಲ್ಲ..ಕುಡಿದ ಮತ್ತಿನಲ್ಲಿ ಬದ್ದಿದ್ದಾನೆ ಅಂತಾ ಹಾಗೇ ಬಿಟ್ಟುಬಿಡ್ತಾರೆ ಅನ್ನೋದು ಇವನ ಮಾಸ್ಟರ್ ಪ್ಲಾನ್. ಇದೀಗ ಕರ್ತನಾಕ್ ಕಳ್ಳನನ್ನು ಬಂಧಿಸಿದ ಮಾಗಡಿ ರೋಡ್ ಪೊಲೀಸರು ಬಂಧಿತನಿಂದ 7 ಲಕ್ಷ ಮೌಲ್ಯ ದ ಚಿನ್ನಾಭರಣ ಹಾಗೂ ಎರಡು‌ ಕೆಜಿ ಬೆಳ್ಳಿ ವಶಕ್ಕೆ ಪಡೆದುಕೊಂಡಿದ್ದಾರೆ.

click me!