ಶಿರಸಿ: ಕೊರೋನಾಗೆ ಅಳಿಯ ಬಲಿ, ವಿಷ ಸೇವಿಸಿ ಮಾವ ಆತ್ಮಹತ್ಯೆ

By Kannadaprabha News  |  First Published Jun 28, 2021, 10:04 AM IST

* ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಂಕನಾಳದಲ್ಲಿ ನಡೆದ ಘಟನೆ
* ತಿಂಗಳ ಹಿಂದೆ ಕೊರೋನಾಕ್ಕೆ ಬಲಿಯಾಗಿದ್ದ ಅಳಿಯ
* ಮದ್ಯದೊಂದಿಗೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮಾವ
 


ಶಿರಸಿ(ಜೂ.28): ಅಳಿಯ ಕೊರೋನಾದಿಂದ ಮೃತಪಟ್ಟಿದ್ದು ಮುಂದೆ ತನ್ನ ಮಗಳ ಜೀವನ ಹೇಗೆ ಎಂದು ಮನನೊಂದು ಮಾವ ಮನೆಯಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಕನಾಳದಲ್ಲಿ ನಡೆದಿದೆ.

ನಿಂಗಪ್ಪ ಕೆರಿಯಾ ನಾಯ್ಕ (67) ಆತ್ಮಹತ್ಯೆ ಮಾಡಿಕೊಂಡವರು. ತನ್ನ ಅಳಿಯ ತಿಂಗಳ ಹಿಂದೆ ಕೊರೋನಾಕ್ಕೆ ಬಲಿಯಾಗಿದ್ದರು. ಇದನ್ನು ಮನಸ್ಸಿಗೆ ಹಚ್ಚಿಕೊಂಡಿದ್ದ ಮಾವ ನಿಂಗಪ್ಪ ವಿಪರೀತ ಕುಡಿತದ ದಾಸನಾಗಿದ್ದ. ಅದೇ ರೀತಿ ಶನಿವಾರ ಸಂಜೆ ಎಲ್ಲರೂ ಊಟ ಮಾಡುತ್ತಿರುವ ವೇಳೆ ಮನೆ ಹಿಂದೇ ಹೋಗಿ ಮದ್ಯದೊಂದಿಗೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

Tap to resize

Latest Videos

undefined

ಶಿವಮೊಗ್ಗ: ಅಧಿಕಾರಿಯ ಕಿರುಕುಳಕ್ಕೆ ಬೇಸತ್ತು ಅರಣ್ಯ ಇಲಾಖೆ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

ಈ ಕುರಿತು ಬನವಾಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್‌ಐ ಹನುಮಂತ ಬಿರಾದಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
 

click me!