ಗಂಗಾವತಿ: ವಿವಾಹಿತ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ

By Kannadaprabha News  |  First Published Jun 28, 2021, 9:22 AM IST

* ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ನಡೆದ ಘಟನೆ
* 30 ವರ್ಷದ ವಿವಾಹಿತ ಮಹಿಳೆ ಅತ್ಯಾಚಾರಕ್ಕೆ ಯತ್ಯ
* ಆರೋಪಿಯನ್ನ ಬಂಧಿಸಿದ ಪೊಲೀಸರು


ಗಂಗಾವತಿ(ಜೂ.28): ವಿವಾಹಿತ ಮಹಿಳೆ ಮೇಲೆ ಯುವಕನೋರ್ವ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ನಡೆದಿದೆ. 

30 ವರ್ಷದ ವಿವಾಹಿತ ಮಹಿಳೆ ಗುಂತಕಲ್‌ ಕ್ಯಾಂಪಿನ ಬಳಿ ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ ಅದೇ ಗ್ರಾಮದ ದುರ್ಗಾರಾವ್‌ ನಾಗೇಶ್ವರರಾವ (37) ಎನ್ನುವಾತ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

Tap to resize

Latest Videos

15 ವರ್ಷದ ಬಾಲಕಿ ಮೇಲೆ ಹಲವಾರು ಸಾರಿ ಎರಗಿದ ಕಾಮುಕ ಇನ್ಸ್‌ಪೆಕ್ಟರ್‌

ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ ಸಂದರ್ಭದಲ್ಲಿ ಮಹಿಳೆ ಕೂಗಿದ್ದರಿಂದ ಜನರು ಬಂದು ಯುವಕನನ್ನು ಥಳಿಸಿದ್ದಾರೆ. ಯುವಕನನ್ನು , ಗಂಗಾವತಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ  ಎಂದು ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ತಿಳಿಸಿದ್ದಾರೆ.
 

click me!