ವಿಪರೀತ ಸಿಟ್ಟು ಕೆಲವೊಮ್ಮೆ ಅನಾಹುತಗಳಿಗೆ ಕಾರಣವಾಗುತ್ತದೆ. ಇಲ್ಲಾಗಿದ್ದು ಅದೇ. ಸಹೋದರನೊಂದಿಗೆ ಜಗಳವಾಡುತ್ತಿದ್ದ ವೇಳೆ ಯುವತಿಯೊಬ್ಬಳು ಮೊಬೈಲ್‌ನ್ನೇ ನುಂಗಿಬಿಟ್ಟಿದ್ದಾಳೆ. ಮುಂದಾಗಿದ್ದೇನು ನೋಡಿ..
ಭೋಪಾಲ್: ಅಣ್ಣ-ತಮ್ಮಂದಿರ, ಅಕ್ಕ-ತಂಗಿಯರ ನಡುವೆ ಹೊಡೆದಾಟ ಆಗಿಂದಾಗೆ ನಡೆಯುತ್ತಲೇ ಇರುತ್ತದೆ. ಕೆಲವೊಮ್ಮೆ ಇದು ಸಣ್ಣಪುಟ್ಟ ಜಗಳದಲ್ಲಿ ನಿಂತು ಹೋದರೆ, ಇನ್ನು ಕೆಲವೊಮ್ಮೆ ದೊಡ್ಡ ಅವಾಂತರಕ್ಕೂ ಕಾರಣವಾಗುತ್ತದೆ. ಇಲ್ಲಾಗಿದ್ದು ಅದೇ. ಸಹೋದರನೊಂದಿಗೆ ಜಗಳವಾಡುತ್ತಿದ್ದ ವೇಳೆ 18 ವರ್ಷದ ಯುವತಿ ಮೊಬೈಲ್ ನುಂಗಿದ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಮೊಬೈಲ್ ಫೋನ್ ವಿಚಾರವಾಗಿ ಯುವತಿ ತನ್ನ ಸಹೋದರನೊಂದಿಗೆ ಜಗಳವಾಡುತ್ತಿದ್ದಳು. ಮಾತಿನಲ್ಲೇ ಆರಂಭವಾದ ಜಗಳ ತಾರಕಕ್ಕೇರಿ ಕೊನೆಗೆ ಮೊಬೈಲ್‌ನ್ನೇ ನುಂಗಿಬಿಟ್ಟಿದ್ದಾಳೆ. ಇಲ್ಲಿನ ಭಿಂಡ್ ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಸೆಲ್ ಫೋನ್ ನುಂಗಿದ ತಕ್ಷಣ ಆಕೆಗೆ ವಿಪರೀತ ಹೊಟ್ಟೆನೋವು (Stomach pain) ಮತ್ತು ನಿರಂತರ ವಾಂತಿಯಾಗತೊಡಗಿತು. ಇದು ಕುಟುಂಬ ಸದಸ್ಯರಲ್ಲಿ ಆತಂಕವನ್ನು ಉಂಟುಮಾಡಿತು ಮತ್ತು ಅವರು ಹೆಚ್ಚು ಸಮಯ ವ್ಯರ್ಥ ಮಾಡದೆ ಆಸ್ಪತ್ರೆಗೆ ಕರೆದೊಯ್ದರು. ನಂತರ ಬಾಲಕಿಯನ್ನು ತಕ್ಷಣವೇ ಗ್ವಾಲಿಯರ್ಸ್‌ನ ಜಯಆರೋಗ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆಗೆ ಶಸ್ತ್ರಚಿಕಿತ್ಸೆ (Operation) ನಡೆಸಿ ಸೆಲ್ ಫೋನ್ ಹೊರತೆಗೆಯಲಾಯಿತು.
undefined
Kodagu: ಬೆರಳಿಗೆ ಹಾಕಿದ್ದ ಉಂಗುರ ನುಂಗಿ ಸಾವನ್ನಪ್ಪಿದ 8 ತಿಂಗಳ ಮಗು: ಪಾಲಕರ ಆಕ್ರಂದನ
ಹೊಟ್ಟೆಯೊಳಗೆ ಸಿಲುಕಿಕೊಂಡಿದ್ದ ಮೊಬೈಲ್
ಯುವತಿ ಮೊಬೈಲ್ ನುಂಗಿದ ತಕ್ಷಣ ವೈದ್ಯರು ತಕ್ಷಣ ತಪಾಸಣೆ ನಡೆಸಿದ್ದಾರೆ. ಶಸ್ತ್ರ ಚಿಕಿತ್ಸೆ ವಿಭಾಗದಲ್ಲಿ ವೈದ್ಯರ ತಂಡ ತಪಾಸಣೆ ನಡೆಸಿದಾಗ ಬಾಲಕಿಯ ಹೊಟ್ಟೆಯಲ್ಲಿ ಮೊಬೈಲ್ ಸಿಕ್ಕಿಹಾಕಿಕೊಂಡಿತ್ತು. ಮೊಬೈಲ್ ತೆಗೆಯಲು ಓಪನ್ ಸರ್ಜರಿ ಒಂದೇ ಮಾರ್ಗವಾಗಿತ್ತು. ಕೊನೆಗೆ ಓಪನ್ ಸರ್ಜರಿ ಮಾಡಿ ಮೊಬೈಲ್ ತೆಗೆಯಲು ವೈದ್ಯರು (Doctors) ನಿರ್ಧರಿಸಿದರು. ಸುಮಾರು ಅರ್ಧ ಡಜನ್ ವೈದ್ಯರ ತಂಡ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ, ಸುಮಾರು ಒಂದೂವರೆ ಗಂಟೆಗಳ ಕಾಲ ಆಪರೇಷನ್ ಮಾಡಿ ಯುವತಿಯ ಹೊಟ್ಟೆಯಲ್ಲಿದ್ದ ಮೊಬೈಲ್ ಹೊರತೆಗೆದಿದ್ದಾರೆ.
ಸುಮಾರು ಎರಡು ಗಂಟೆಗಳ ಕಾಲ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಬಾಲಕಿಗೆ ಹತ್ತು ಹೊಲಿಗೆ ಹಾಕಲಾಗಿದ್ದು, ಈಗ ಆಕೆ ಸ್ಥಿರವಾಗಿದ್ದಾಳೆ ಎಂದು ಜಯರೋಗ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಈ ಘಟನೆಯನ್ನರಿತ ವೈದ್ಯರೇ ಒಂದು ಬಾರಿ ದಂಗಾಗಿದ್ದಾರೆ. ಇಬ್ಬರ ನಡುವಿನ ಜಗಳಕ್ಕೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯಯಿಂದ ಪಾರಾಗಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ.
ಅಧಿಕಾರಿಗಳ ತಪಾಸಣೆ ವೇಳೆ ಸಿಕ್ಕಿಬೀಳುವ ಭಯ: ಮೊಬೈಲ್ ನುಂಗಿದ ಕೈದಿ
ಕಳೆದ ವಾರ ಇಂದೋರ್‌ನಲ್ಲಿ 11 ತಿಂಗಳ ಬಾಲಕಿ ಆಟವಾಡುವಾಗ ಮಿನಿ ಎಲ್ಇಡಿ ಬಲ್ಬ್ ಅನ್ನು ನುಂಗಿದ ಘಟನೆ ವರದಿಯಾಗಿತ್ತು. ಸುಮಾರು 5 ಎಂಎಂ ಗಾತ್ರದ ಮಿನಿ ಎಲ್ಇಡಿ ಬಲ್ಬ್ ಅವಳ ಬಲಭಾಗದ ಶ್ವಾಸಕೋಶದ ಶ್ವಾಸನಾಳದಲ್ಲಿ ಅಂಟಿಕೊಂಡಿತ್ತು. ವೈದ್ಯರು ಅದನ್ನು ಸುರಕ್ಷಿತವಾಗಿ ತೆಗೆದುಹಾಕಿದ್ದರು.
25 ವರ್ಷದ ಯುವಕನ ಹೊಟ್ಟೆಯಿಂದ 56 ಬ್ಲೇಡ್ ತುಂಡು ತೆಗೆದ ವೈದ್ಯರು
ರಾಜಸ್ಥಾನದಲ್ಲಿ (Rajasthan) ನಡೆದ ವಿಚಿತ್ರ ಪ್ರಕರಣವೊಂದರಲ್ಲಿ 25 ವರ್ಷದ ವ್ಯಕ್ತಿಯೊಬ್ಬ ಸುಮಾರು 56 ಬ್ಲೇಡ್‌ಗಳನ್ನು ನುಂಗಿ ನೀರು ಕುಡಿದಿದ್ದಾನೆ. ಇದಾದ ಬಳಿಕ ಈತನಿಗೆ ರಕ್ತವಾಂತಿಯಾಗಲು ಶುರುವಾಗಿದ್ದು, ಕೂಡಲೇ ಗೆಳೆಯರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಯಲ್ಲಿ ಆತನನ್ನು ತಪಾಸಣೆ ಮಾಡಿದ ವೈದ್ಯರಿಗೆ ಶಾಕ್ ಕಾದಿತ್ತು. ಕೂಡಲೇ ಶಸ್ತ್ರಚಿಕಿತ್ಸೆಗೆ ಮುಂದಾದ ವೈದ್ಯರು ಆತನ ಹೊಟ್ಟೆಯಿಂದ 56 ಬ್ಲೇಡ್‌ಗಳ ತುಂಡುಗಳನ್ನು ಹೊರತೆಗೆದಿದ್ದಾರೆ.
ಸಂಚೋರ್‌ನ ಡಾಟಾ ಗ್ರಾಮದ ಯಶಪಾಲ್ ಸಿಂಗ್ (Yashpal Singh) ಎಂಬಾತನೇ ಹೀಗೆ ಬ್ಲೇಡ್ ನುಂಗಿದ ಯುವಕ. ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಈತ ನಾಲ್ವರು ಸ್ನೇಹಿತರೊಂದಿಗೆ ವಾಸಿಸುತ್ತಿದ್ದ . ಘಟನೆ ನಡೆಯುವಾಗ ಆತ ಮನೆಯಲ್ಲಿ ಒಬ್ಬನೇ ಇದ್ದು, ಕೂಡಲೇ ತನ್ನ ಸ್ನೇಹಿತರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾನೆ ಎಂದು ತಿಳಿದುಬಂದಿದೆ.