ಇತ್ತೀಚಿಗೆ ಕಾಮುಕ ಶಿಕ್ಷಕರ ಹಾವಳಿ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಮಳವಳ್ಳಿ, ಮಂಡ್ಯ ಬಳಿಕ ಪಾಂಡವಪುರ ತಾಲೂಕಿನ ಶಿಕ್ಷಕನೋರ್ವನ ಕಾಮುಕ ಚೇಷ್ಟೆ ಬಯಲಾಗಿದೆ. ಬೇಸತ್ತ ವಿದ್ಯಾರ್ಥಿನಿಯರೇ ಚಾಂಡಾಳ ಗುರುವಿಗೆ ಧರ್ಮದೇಟು ನೀಡಿ ತಕ್ಕಪಾಠ ಕಲಿಸಿದ್ದಾರೆ.
ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಡ್ಯ (ಡಿ.15): ಇತ್ತೀಚಿಗೆ ಕಾಮುಕ ಶಿಕ್ಷಕರ ಹಾವಳಿ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಮಳವಳ್ಳಿ, ಮಂಡ್ಯ ಬಳಿಕ ಪಾಂಡವಪುರ ತಾಲೂಕಿನ ಶಿಕ್ಷಕನೋರ್ವನ ಕಾಮುಕ ಚೇಷ್ಟೆ ಬಯಲಾಗಿದೆ. ಕಟ್ಟೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಲೈಂಗಿಕ ಕಿರುಕುಳ ನೀಡಿ ಸಿಕ್ಕಿಬಿದ್ದಿದ್ದು, ಬೇಸತ್ತ ವಿದ್ಯಾರ್ಥಿನಿಯರೇ ಚಾಂಡಾಳ ಗುರುವಿಗೆ ಧರ್ಮದೇಟು ನೀಡಿ ತಕ್ಕಪಾಠ ಕಲಿಸಿದ್ದಾರೆ. ಕಟ್ಟೇರಿ ಗ್ರಾಮದ RVMS ಸರ್ಕಾರಿ ಪ್ರೌಢಶಾಲೆಯ ಬಾಲಕಿಯರ ಹಾಸ್ಟೆಲ್‌ನಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ. ಶಾಲಾ ಮುಖ್ಯ ಶಿಕ್ಷಕ ಹಾಗೂ ಹಾಸ್ಟೆಲ್ ಮೇಲ್ವಿಚಾರಕ ಚಿನ್ಮಯಾನಂದ ಮೂರ್ತಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ ಸಿಕ್ಕಿಬಿದ್ದಿದ್ದಾನೆ.
ಕಳೆದ 4-5 ವರ್ಷಗಳಿಂದ ಮುಖ್ಯ ಶಿಕ್ಷಕನಾಗಿ ಕೆಲಸ ಮಾಡ್ತಿರುವ ಈತ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನಿತ್ಯ ಲೈಂಗಿಕ ಹಿಂಸೆ ನೀಡುತ್ತಿದ್ದನು. ತರಗತಿ ಮುಗಿದ ಬಳಿಕ ಹಾಸ್ಟೆಲ್‌ನಲ್ಲಿ ಠಿಕಾಣಿ ಹೂಡುತ್ತಿದ್ದ ಈ ಕಾಮುಕ. ಪ್ರತಿನಿತ್ಯ ಒಂದಲ್ಲ ಒಂದು ಕಾರಣಕ್ಕೆ ಒಬ್ಬೊಬ್ಬ ವಿದ್ಯಾರ್ಥಿನಿಯನ್ನ ತನ್ನ ಕೊಠಡಿಗೆ ಕರೆಸಿಕೊಳ್ತಿದ್ದನು. ಆ ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋ ನೋಡುವಂತೆ ಹೇಳಿದ್ದ ಚಿನ್ಮಯಾನಂದ ಅವರ ಅಂಗಾಂಗ ಮುಟ್ಟಿ ಲೈಂಗಿಕವಾಗಿ ಕಿರುಕುಳ ನೀಡ್ತಿದ್ದನು. ವಿಚಾರ ಬಹಿರಂಗ ಪಡಿಸಿದರೆ ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುವುದಾಗಿ ಹೆಸರಿಸಿದ್ದಾನೆ. ಶಿಕ್ಷಕ ಭಯದಿಂದ ಪೋಷಕರು ಬಳಿಯೂ ಹೇಳಿಕೊಳ್ಳದ ಮಕ್ಕಳು, ತಮ್ಮನ್ನು ಶಾಲೆಯಿಂದ ಬಿಡಿಸುವಂತೆ ಪೋಷಕರಿಗೆ ಒತ್ತಾಯಿಸುತ್ತಿದ್ದರಂತೆ.
ನಿನ್ನೆಯೂ ಓರ್ವ ವಿದ್ಯಾರ್ಥಿನಿಯನ್ನು ತನ್ನ ಕೊಠಡಿಗೆ ಕರೆಸಿಕೊಂಡಿದ್ದ ಶಿಕ್ಷಕ ಅಂಗಾಂಗ ಮುಟ್ಟಲು ಪ್ರಯತ್ನಿಸಿದ್ದಾನೆ. ಈ ವೇಳೆ ಕೂಗಿಕೊಂಡ ವಿದ್ಯಾರ್ಥಿನಿ ನೆರವಿಗೆ ಧಾವಿಸಿದ ಇತರೆ ವಿದ್ಯಾರ್ಥಿಗಳು ಕಾಮುಕ ಶಿಕ್ಷಕನ ವರ್ತನೆಗೆ ಬೇಸತ್ತು ಆತನನ್ನು ಮನಬಂದಂತೆ ಥಳಿಸಿದ್ರು. ದೊಣ್ಣೆ ಹಿಡಿದು ಶಿಕ್ಷಕ ಚಿನ್ಮಯಾನಂದ ಮೂರ್ತಿಗೆ ಬಡಿದ ವಿದ್ಯಾರ್ಥಿಗಳು ಆತನಿಗೆ ತಕ್ಕಪಾಠ ಕಲಿಸಿದ್ರು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು, ಆತನನ್ನು ಹಿಡಿದು ಕೆಆರ್‌ಎಸ್ ಪೊಲೀಸರ ವಶಕ್ಕೆ ಒಪ್ಪಿಸಿದರು.
ಸಿಂಧನೂರು ಬಾಲಕಿಗೆ ಮದ್ಯ ಕುಡಿಸಿ ಲೈಂಗಿಕ ಕಿರುಕುಳ
2018ರಲ್ಲೇ ದೂರು, ಆಗದ ಕ್ರಮ: ಕಾಮುಕ ಶಿಕ್ಷಕ ಚಿನ್ಮಯಾನಂದ ಮೂರ್ತಿ ಕುಚಿಷ್ಠೆ ಇದೆ ಮೊದಲಲ್ಲ. ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲೇ ಶಿಕ್ಷಕ ಚಿನ್ಮಯಾನಂದ ಮೂರ್ತಿ ವಿರುದ್ಧ ದೂರು ನೀಡಲಾಗಿತ್ತು. ನಾಲ್ಕು ವರ್ಷಗಳ ಹಿಂದೆಯೇ ಕಾಮುಕನ ವಿರುದ್ದ ಅಂದಿನ ಎಸ್‌ಡಿಎಂಸಿ ಸಮಿತಿಯಿಂದ ದೂರು ದಾಖಲಿಸಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳದೆ ಮೌನವಹಿಸಿದ ಶಿಕ್ಷಣ ಇಲಾಖೆಯೇ ಇಂದಿನ ಘಟನೆಗೆ ಹೊಣೆ ಎಂದು ಪೋಷಕರು ಆರೋಪಿಸಿದ್ದಾರೆ. ದೂರು ಕೊಟ್ಟಾಗಲೇ ಕ್ರಮವಹಿಸಿದ್ರೆ ಆತನ ನೀಚ ಬುದ್ದಿಯನ್ನು ತಡೆಗಟ್ಟಬಹುದಿತ್ತು. ನಾಲ್ಕು ವರ್ಷಗಳಿಂಸ ಸಾಕಷ್ಟು ವಿದ್ಯಾರ್ಥಿನಿಯರು ನೊಂದಿದ್ದಾರೆ ಎಂದು ಅಧಿಕಾರಿಗಳ ನಿರ್ಲಕ್ಷದ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
Mumbai News: ಮಹಿಳೆಯ ಖಾಸಗಿ ಅಂಗವನ್ನು ಸಿಗರೇಟ್‌ನಿಂದ ಸುಟ್ಟು, ಕಾಮುಕರಿಂದ ಗ್ಯಾಂಗ್‌ರೇಪ್..!
ಸ್ಥಳಕ್ಕೆ ಬಂದ ಡಿಡಿಪಿಐಗೆ ತರಾಟೆ: ಘಟನೆ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಡಿಡಿಪಿಐ ಜವರೇಗೌಡ ಅವರನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡರು. 2018ರಲ್ಲಿ ದೂರು ನೀಡಿದಾಗ ಎಲ್ಲಿಗೆ ಹೋಗಿದ್ರಿ. ಈಗ ಕಾಮುಕ ಶಿಕ್ಷಕನಿಗೆ ಹೊಡೆದ ತಕ್ಷಣ ಬಂದಿದ್ದೀರಾ. ಆಗಲೇ ಅವನನ್ನು ತೆಗೆದು ಹಾಕಿದ್ರೆ ಹೆಣ್ಣುಮಕ್ಕಳು ತೊಂದರೆ ಆಗುತ್ತಿರಲಿಲ್ಲ. ಈಗ ನೀವು ಎಮ್ಮೆ ಕಾಯಲು ಬಂದಿದ್ದೀರಾ. ನಿಮ್ಮ ಮನೆ ಮಕ್ಕಳಿಗೆ ಹೀಗೆ ಆಗಿದ್ರೆ ಸುಮ್ಮನೆ ಇರುತ್ತಿದ್ರಾ. ಕಾಮುಕನ್ನು ಹೆಡ್ ಮಾಸ್ಟರ್ ಮಾಡಿದ್ದೀರಾ. ನಾಚಿಕೆ ಆಗಲ್ವಾ ಇಷ್ಟು ದಿನ ಅವನನ್ನು ಇಟ್ಟುಕೊಳ್ಳಲು ಎಂದು ಡಿಡಿಪಿಐಗೆ ಕ್ಲಾಸ್ ತೆಗೆದುಕೊಂಡರು.