ನದೆವಹಲಿಯ 35 ಪೀಸ್ ಮರ್ಡರ್ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆ ಆಗಿದೆ. ಶ್ರದ್ಧಾ ವಾಕರ್‌ಳ ದೇಹವನ್ನು 35 ತುಂಡಗಳಾಗಿ ಕತ್ತರಿಸಿ ನಗರದ ವಿವಿಧ ಭಾಗಗಳಲ್ಲಿ ಅಫ್ತಾಬ್ ಎಸೆದಿದ್ದ. ಈ ವೇಳೆ ಮೆಹ್ರುಲಿ ಅರಣ್ಯದಲ್ಲೂ ಕೆಲ ಭಾಗಗಳನ್ನು ಆತ ಎಸೆದಿದ್ದ. ಅಲ್ಲಿ ಸಿಕ್ಕ ಮೂಳೆಗಳು ಶ್ರದ್ಧಾ ವಾಕರ್‌ದು ಎನ್ನುವುದಕ್ಕೆ ಸಾಕ್ಷ್ಯ ಲಭಿಸಿದೆ. ಮೂಳೆಗಳು, ಶ್ರದ್ಧಾಳ ತಂದೆಯ ಡಿಎನ್‌ಎಗೆ ಮ್ಯಾಚ್ ಆಗಿರುವ ವರದಿ ಸಿಕ್ಕಿದೆ.
ನವದೆಹಲಿ (ಡಿ.15): ಶ್ರದ್ಧಾ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಮೆಹ್ರೌಲಿ ಅರಣ್ಯದಿಂದ ಮೂಳೆಗಳ ರೂಪದಲ್ಲಿ ಪೊಲೀಸರಿಗೆ ದೊರೆತ ಶವದ ತುಂಡುಗಳು ಶ್ರದ್ಧಾ ಅವರ ತಂದೆಯ ಡಿಎನ್‌ಎಗೆ ಹೊಂದಿಕೆಯಾಗಿವೆ. ಇದು ಸಿಎಫ್‌ಎಸ್‌ಎಲ್ ವರದಿಯಲ್ಲಿ ದೃಢಪಟ್ಟಿದೆ. ದೆಹಲಿ ಪೊಲೀಸರು ಅಫ್ತಾಬ್‌ನನ್ನು ಬಂಧಿಸಿ ವಿಚಾರಣೆ ಈಗಾಗಲೇ ಹಲವು ಸುತ್ತಿನ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ವೇಳೆಯೇ, ಮೆಹ್ರೌಲಿ ಅರಣ್ಯ ಮತ್ತು ಗುರುಗ್ರಾಮ್‌ನಲ್ಲಿ ಅವರು ಹೇಳಿದ ಸ್ಥಳದಿಂದ ಪೊಲೀಸರು ಮೃತದೇಹದ ಹಲವಾರು ತುಂಡುಗಳನ್ನು ಮೂಳೆಗಳ ರೂಪದಲ್ಲಿ ವಶಪಡಿಸಿಕೊಂಡರು. ಪೊಲೀಸರಿಗೆ ಮಾನವ ದೇಹದ ದವಡೆಯೂ ಪತ್ತೆಯಾಗಿದೆ. ಈ ಎಲ್ಲದರ ಬಗ್ಗೆ ತನಿಖೆ ನಡೆಸಲು ಪೊಲೀಸರು ಸಿಎಫ್‌ಎಸ್‌ಎಲ್ ಲ್ಯಾಬ್‌ಗೆ ಕಳುಹಿಸಿದ್ದರು. ಅಷ್ಟೇ ಅಲ್ಲ ಶ್ರದ್ಧಾ ವಾಕರ್ ತಂದೆಯ ಮಾದರಿಯನ್ನೂ ಡಿಎನ್ ಎ ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು.
ಮೇ. 18 ರಂದು ನಡೆದಿದ್ದ ಕೊಲೆ: ಪೊಲೀಸ್ ವಿಚಾರಣೆ ವೇಳೆ ಅಫ್ತಾಬ್ ತಾನು ಶ್ರದ್ಧಾಳನ್ನು ಕೊಂದಿದ್ದಾಗಿ ತಿಳಿಸಿದ್ದ. ಅಫ್ತಾಬ್ ಹಾಗೂ ಶ್ರದ್ಧಾ ಇಬ್ಬರೂ ಮುಂಬೈ ನಿವಾಸಿಗಳಾಗಿದ್ದು, ಲಿವ್ ಇನ್ ರಿಲೇಷನ್‌ಷಿಪ್‌ನಲ್ಲಿದ್ದರು. ಕೊಲೆಯಾಗುವ ಕೆಲ ದಿನಗಳ ಹಿಂದೆಯಷ್ಟೇ ಅವರು ದೆಹಲಿಗೆ ತೆರಳಿದ್ದರು. ಇಬ್ಬರೂ ಮೆಹ್ರುಲಿ ಪ್ರದೇಶದಲ್ಲಿ ಫ್ಲಾಟ್‌ಅನ್ನು ಬಾಡಿಗೆಗೆ ತೆಗೆದುಕೊಂಡು ಲಿವ್ ಇನ್ ರಿಲೇಷನ್‌ಷಿಪ್‌ನಲ್ಲಿ ವಾಸ ಮಾಡುತ್ತಿದ್ದರು. ಮೇ. 18 ರಂದು ಶ್ರದ್ಧಾಳ ಜೊತೆ ಜಗಳವಾಡಿದ್ದೆ ಎಂದು ಅಫ್ತಾಭ್ ಹೇಳಿದ್ದ. ಇದಾದ ಬಳಿಕ ಆಕೆಯನ್ನು ತಾನು ಕತ್ತು ಹಿಸುಕಿ ಕೊಲೆ ಮಾಡಿದ್ದೆ ಎಂದು ಅಫ್ತಾಬ್ ತಿಳಿಸಿದ್ದ. ಆ ಬಳಿಕ ಅವಳ ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಯಾರಿಗೂ ಅನುಮಾನ ಬರದೇ ಇರಲು ಫ್ರಿಜ್‌ನಲ್ಲಿಟ್ಟಿದ್ದೆ ಎಂದು ಹೇಳಿದ್ದ. ಪ್ರತಿ ದಿನ ರಾತ್ರಿ ಬ್ಯಾಗ್‌ನಲ್ಲಿ ಆಕೆಯ ದೇಹದ ಒಂದೊಂದು ತುಂಡುಗಳನ್ನು ತುಂಬಿಕೊಂಡು, ನಗರದ ವಿವಿಧ ಪ್ರದೇಶಗಳಲ್ಲಿ ಅಫ್ತಾಬ್ ಎಸೆದು ಬರುತ್ತಿದ್ದ.
ನವೆಂಬರ್ 12 ರಂದು ಅಫ್ತಾಬ್ ಬಂಧನ: ಶ್ರದ್ಧಾ ಹತ್ಯೆಯ ನಂತರವೂ ಅದೇ ಫ್ಲಾಟ್‌ನಲ್ಲಿ ಅಫ್ತಾಬ್ ವಾಸ ಮಾಡುತ್ತಿದ್ದ. ಈ ಅವಧಿಯಲ್ಲಿ ಶ್ರದ್ಧಾ ಬದುಕಿದ್ದಾಳೆ ಎಂದು ಗೊತ್ತಾಗುವ ಸಲುವಾಗಿ ಆಕೆಯ ಸೋಶಿಯಲ್ ಮೀಡಿಯಾ ಮಾಧ್ಯಮಗಳನ್ನು ಬಳಸುತ್ತಿದ್ದರು. ಇದರಿಂದಾಗಿ ಯಾರಿಗೂ ಕೂಡ ಶ್ರದ್ಧಾ ವಾಕರ್ ಕೊಲೆಯಾಗಿದ್ದಾಳೆ ಎನ್ನುವ ಅನುಮಾನವೇ ಬಂದಿರಲಿಲ್ಲ. ಈ ನಡುವೆ ಶ್ರದ್ಧಾ ಖಾತೆಯಿಂದ ಅಫ್ತಾಬ್ 54 ಸಾವಿರ ರೂಪಾಯಿ ತೆಗೆದಿದ್ದರು. ಇದನ್ನು ಫ್ರಿಜ್ ಖರೀದಿ ಮಾಡಲು ಬಳಸಿದ್ದರು ಎಂದು ಆರೋಪಿಸಲಾಗಿದೆ. ಮೊಬೈಲ್ ಲೊಕೇಷನ್ ಹಾಗೂ ಬ್ಯಾಂಗ್ ಖಾತೆಗಳ ವಿವರಗಳ ಸಹಾಯದಿಂದ ಪೊಲೀಸರು ಅಫ್ತಾಬ್‌ನ ಬಳಿ ಆಗಮಿಸಿ ವಿಚಾರಣೆ ಮಾಡಿ, ನವೆಂಬರ್ 12 ರಂದು ಪೊಲೀಸರನ್ನು ಬಂಧಿಸಿದ್ದರು.
Shraddha Walker Murder: ಅಫ್ತಾಬ್ ಮಂಪರು ಪರೀಕ್ಷೆ ಮುಕ್ತಾಯ, 2 ಗಂಟೆ ಪ್ರಶ್ನೆಗಳ ಸುರಿಮಳೆ!
ಅಫ್ತಾಬ್ ಶ್ರದ್ಧಾಳನ್ನು ಕೊಂದಿದ್ದೇಕೆ: ಪೊಲೀಸ್ ವಿಚಾರಣೆಯ ವೇಳೆ ಶ್ರದ್ಧಾ, ಅಫ್ತಾಬ್‌ನಿಂದ ದೂರ ಹೋಗಲು ನಿರ್ಧಾರ ಮಾಡಿದ್ದರು. ಅಫ್ತಾಬ್‌ನ ಕ್ರೌರ್ಯದಿಂದ ಆಕೆ ಕಂಗೆಟ್ಟಿದ್ದಳು. ನಿರಂತರವಾಗಿ ಆತನ ಹಿಂಸೆಯಿಂದ ಆಕೆ ರೋಸಿ ಹೋಗಿದ್ದಳು. ಈ ಪರಿಸ್ಥಿತಿಯಲ್ಲಿ ಆತನಿಂದ ದೂರ ಹೋಗಲು ಶ್ರದ್ಧಾ ತೀರ್ಮಾನ ಮಾಡಿದ್ದಳು. ಆದರ, ಇದು ಅಫ್ತಾಭ್‌ಗೆ ಇಷ್ಟವಿದ್ದಿರಲಿಲ್ಲ. ಅದಕ್ಕಾಗಿ ಶ್ರದ್ಧಾಳನ್ನು ಒಪ್ಪಿಸುವ ಭರದಲ್ಲಿ ಕೊಲೆ ಮಾಡಿದ್ದರು. ಮದುವೆಯಾಗುವಂತೆ ಆಕೆ ಒತ್ತಾಯ ಮಾಡುತ್ತಿದ್ದ ಕಾರಣಕ್ಕೆ ಕೊಲೆ ಮಾಡಿದ್ದಾಗಿ ಅಫ್ತಾಬ್ ಪೊಲೀಸರಿಗೆ ತಿಳಿಸಿದ್ದ.
Shraddha Walker Murder case: ಶ್ರದ್ಧಾ ಕೊಲೆಗೆ ಗಲ್ಲಿಗೇರಿಸಿದರೂ ಪಶ್ಚಾತಾಪವಿಲ್ಲ: ಅಫ್ತಾಬ್
ಪೊಲೀಸ್ ವಿಚಾರಣೆ ವೇಳೆ ಶ್ರದ್ಧಾ ಅಫ್ತಾಬ್ ಜೊತೆ ಬ್ರೇಕ್ ಅಪ್ ಮಾಡಲು ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ. ಅಫ್ತಾಬ್ ನ ಕ್ರೌರ್ಯದಿಂದ ಆಕೆ ಕಂಗೆಟ್ಟಿದ್ದಳು. ಅಂತಹ ಪರಿಸ್ಥಿತಿಯಲ್ಲಿ, ಅವರು ಪ್ರತ್ಯೇಕಗೊಳ್ಳಲು ನಿರ್ಧರಿಸಿದರು. ಆದರೆ ಅಫ್ತಾಬ್‌ಗೆ ಇದು ಇಷ್ಟವಾಗಲಿಲ್ಲ. ಅವನು ಶ್ರದ್ಧಾಳನ್ನು ಕೊಂದನು. ಆದರೆ, ಶ್ರದ್ಧಾ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು ಎಂದು ಅಫ್ತಾಬ್ ಪೊಲೀಸರ ವಿಚಾರಣೆಯಲ್ಲಿ ಆರಂಭದಲ್ಲಿ ಹೇಳಿದ್ದ. ಈ ವಿಚಾರವಾಗಿ ಮೇ 18ರಂದು ಇಬ್ಬರ ನಡುವೆ ಜಗಳವಾಗಿತ್ತು. ಇದಾದ ಬಳಿಕ ಶ್ರದ್ಧಾಳನ್ನು ಕೊಂದಿದ್ದಾನೆ. ಈ ವಿಚಾರವಾಗಿ ಮೇ 18ರಂದು ಇಬ್ಬರ ನಡುವೆ ಜಗಳವಾಗಿತ್ತು. ಇದಾದ ಬಳಿಕ ಶ್ರದ್ಧಾಳನ್ನು ಕೊಂದಿದ್ದಾಗಿ ಹೇಳಿದ್ದ.