
ಬಾಗಲಕೋಟೆ (ಮಾ.17): ಬಾಗಲಕೋಟೆ ತಾಲ್ಲೂಕಿನ ಕದಾಂಪುರ ಗ್ರಾಮದಲ್ಲಿ 8ನೇ ತರಗತಿ ಬಾಲಕಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಳ್ಳತನ ಆರೋಪದ ಶಂಕೆ ವ್ಯಕ್ತವಾಗಿದೆ. ಮೃತ ವಿದ್ಯಾರ್ಥಿನಿಯನ್ನು ದಿವ್ಯಾ ಬಾರಕೇರ (14) ಎಂದು ಗುರುತಿಸಲಾಗಿದ್ದು, ಅನುಮಾನಾಸ್ಪವಾಗಿ ಸಾವಿಗೀಡಾಗಿದ್ದಾಳೆ.
ಬಾಗಲಕೋಟೆ ತಾಲ್ಲೂಕಿನ ಕದಾಂಪುರ ಗ್ರಾಮದಲ್ಲಿ ತಡವಾಗಿ ಘಟನೆ ಬೆಳಕಿಗೆ ಬಂದಿದೆ. ಪ್ರೌಢಶಾಲಾ ವಿದ್ಯಾರ್ಥಿನಿ ದಿವ್ಯಾ ಬಾರಕೇರ ಮೇಲೆ ಶಾಲಾ ಶಿಕ್ಷಕಿಯರು ಸಂಶಯ ಪಟ್ಟಿದ್ರಾ ಎಂಬ ಅನುಮಾನ ಮೂಡಿದೆ.
ಸ್ವರ್ಗದಂತೆ ಎಲ್ಲಾ ಭೋಗ ಅನುಭವಿಸುತ್ತಿದ್ದೇನೆ, ಜೈಲಿನಿಂದ ಕೊಲೆ ಆರೋಪಿಯ ಫೇಸ್‌ಬುಕ್ ಲೈವ್!
ಏಕೆಂದರೆ ಮಾರ್ಚ್ 14 ರಂದು ಶಿಕ್ಷಕಿಯೊಬ್ಬರ 2 ಸಾವಿರ ಹಣ ಕಳೆದು ಹೋಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಕರು ಐವರು ವಿದ್ಯಾರ್ಥಿಗಳ ಮೇಲೆ ಸಂಶಯ ಬಂದು ದೇವರ ಮೇಲೆ ಪ್ರಮಾಣ ಮಾಡಿಸಿದ್ದರು. ನಂತರ ಕೊಠಡಿಯೊಂದರಲ್ಲಿ ಶಾಲಾ ಸಮವಸ್ತ್ರ ಸಹಿತ ಬಿಚ್ಚಿಸಿ ಚೆಕ್ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಹೋಟೆಲ್ ನಲ್ಲಿ ಉಜ್ಬೇಕಿಸ್ತಾನ ಯುವತಿಯ ಕೊಲೆ ಪ್ರಕರಣ - ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ
ಹೀಗಾಗಿ ಕಳ್ಳತನದ ಅನುಮಾನ ವ್ಯಕ್ತಪಡಿಸಿ ಅವಮಾನವಾದ ಹಿನ್ನೆಲೆಯಲ್ಲಿ ಮನನೊಂದು ನಿನ್ನೆ ಮಾರ್ಚ್ 16 ರಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಬಾಲಕಿ ಕುಟುಂಬಸ್ಥರಿಂದ ದೂರು ದಾಖಲು ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ