ದಾವಣಗೆರೆ ಶಾಂತಿ ನಗರ ಬಡಾವಣೆಯಲ್ಲಿ ನಡೆದ ಘಟನೆ
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ
ದಾವಣಗೆರೆ(ಅ.21): ಪ್ರೀತಿ ಪ್ರೇಮ ಸ್ನೇಹ ತನ್ನ ಮಿತಿ ದಾಟಿದ್ರೆ ಏನು ಬೇಕಾದ್ರು ಆಗಬಹುದು ಎಂಬುದಕ್ಕೆ ಇಲ್ಲೊಂದು ಪ್ರಕರಣ ಸಾಕ್ಷಿಯಾಗಿದೆ. ಪದವಿ ಓದುತ್ತಿದ್ದ ಇಬ್ಬರು ಯುವತಿಯರ ನಡುವಿನ ಗಾಢ ಸ್ನೇಹ ಎಲ್ಲೆ ಮೀರಿ ಚಾಕು ಹಾಕುವ ಹಂತ ತಲುಪಿದೆ. ದಾವಣಗೆರೆ ಶಾಂತಿ ನಗರ ಬಡಾವಣೆಯಲ್ಲಿ ನಿನ್ನೆ(ಗುರುವಾರ) ರೂಪ ಎಂಬ ಯುವತಿಗೆ ಸುಧಾ ಎಂಬ ಯುವತಿ ರೇಡಿಯಂ ಕಟರ್ ನಿಂದ ಚುಚ್ಚಿ ಗಾಯಗೊಳಿಸಿ ತಾನು ಕೈಗೆ ಚಾಕು ಹಾಕಿಕೊಂಡ ಘಟನೆ ನಡೆದಿದೆ.
ಸ್ನೇಹ ಮತ್ತು ಲಾಸ್ಯ ಖಾಸಗಿ ಕಾಲೇಜ್ ಪದವಿ ವ್ಯಾಸಂಗ ಮಾಡುತ್ತಿದ್ದರು. ಇಬ್ಬರದು ಅನೋನ್ಯ ಸಂಬಂಧ. ಎಲ್ಲೇ ಹೋದರು ನಿಂತರು, ಕುಂತರು ಒಬ್ಬರನ್ನೊಬ್ಬರು ಬಿಟ್ಟಿಲಾರದಷ್ಟು ಗಾಢ ಸ್ನೇಹ ಇವರಿಬ್ಬರ ಮಧ್ಯೆ ಇತ್ತು. ಸುಧಾ(ಹೆಸರು ಬದಲಾಯಿಸಲಾಗಿದೆ). ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದ ಹುಡುಗಿ. ಬಿಎಸ್ಸಿ ಓದುತ್ತಿದ್ದ ಸುಧಾ ಪದವಿ ಮುಗಿಸಿ ಒಂದು ವರ್ಷ ಆಗಿತ್ತು. ಒಂದು ಸಬ್ಜಕ್ಟ್ ಬ್ಯಾಕ್ ಇದ್ದುದರಿಂದ ಎಕ್ಸಾಂ ಬರೆಯುವುದಕ್ಕೆ ಬಂದು ಇಲ್ಲೇ ಪಿಜಿಯಲ್ಲಿ ಉಳಿದುಕೊಂಡಿದ್ದಳು.ಇನ್ನು ರೂಪಾ(ಹೆಸರು ಬದಲಾಯಿಸಲಾಗಿದೆ).ಪದವಿ ಪರೀಕ್ಷೆಯ ಅಂತಿಮ ಪೇಪರ್ ಮುಗಿಸಿದ್ರೆ ಪದವೀಧರಳಾದೆ ಎಂಬ ಖುಷಿಯಲ್ಲಿದ್ದಳು.
ಯಾದಗಿರಿ: ಕಾಲುವೆಯಲ್ಲಿ ಯುವಕನ ಶವ ಪತ್ತೆ, ಸಂಶಯಾಸ್ಪದ ಸಾವು
ನಿನ್ನೆ ಅದ್ಹೆನಾಯಿತೋ ಏನೋ ಯುವತಿ ಸುಧಾ ರೂಪಾ ಎನ್ನುವ ಯುವತಿಗೆ ರೇಡಿಯಂ ಕಟರ್ ನಿಂದ ಹಲ್ಲೆ ನಡೆಸಿ ತಾನು ಕೈ ಕೊಯ್ದುಕೊಂಡಿದ್ದಾಳೆ. ಶಾಂತಿನಗರದಲ್ಲಿ ಘಟನೆ ನಡೆದಿದ್ದು ಸ್ನೇಹ ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ.
ಸುಧಾ ಹಾಗೂ ರೂಪಾ ಇಬ್ಬರು ಯುವತಿಯರನ್ನು ನೋಡಿ ಕುಟುಂಬಸ್ಥರು ಸಾರ್ವಜನಿಕರು ಒಂದು ಕ್ಷಣ ದಂಗ್ ಆಗಿ ಹೋಗಿದ್ದರು. ಇಬ್ಬರು ಯುವತಿಯರನ್ನು ಸ್ಥಳೀಯರು ಹಾಗೂ ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಿದ್ದಾರೆ.
ಹಲ್ಲೆಗೊಳಗಾದ ಯುವತಿ ರೂಪಾ ಇತ್ತೀಚೆಗೆ ಸುಧಾಳನ್ನು ಅವಾಯ್ಡ್ ಮಾಡುತ್ತಿದ್ದಳು. ಫೋನ್ ಬಂದ್ರು ಮಾತನಾಡುತ್ತಿರಲಿಲ್ಲ. ಅವಳ ಜೊತೆ ತಿರುಗಾಡುವುದನ್ನು ನಿಲ್ಲಿಸಿದ್ದಳು. ಇನ್ನೊಬ್ಬ ಯುವತಿಯ ಸ್ನೇಹ ಬೆಳೆಸಿದ್ದಳು. ಇದರಿಂದ ಕ್ರೋಧಕೊಂಡ ಸುಧಾ ರೇಡಿಯಂ ಕಟರ್ ನಿಂದ ಮುಖ ಕುತ್ತಿಗೆ ಭಾಗಕ್ಕೆ ಚುಚ್ಚಿದ್ದಾಳೆ. ತಾನು ಕೈ ಕುಯ್ದುಕೊಂಡು ಆಸ್ಪತ್ರೆ ಸೇರಿದ್ದಾಳೆ. ಈ ಬಗ್ಗೆ ರೂಪಾ ಮನೆಯವರು ದಾವಣಗೆರೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನೆಯಿಂದ ಚೇತರಿಸಿಕೊಂಡಿರುವ ಸುಧಾಳನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಹೆಂಡತಿ, ಮಗುವನ್ನು ಕೊಂದ ಮೆಂಟಲ್ ಗಂಡ: ದೇವರ ಹಣ ಕದ್ದಿದ್ದಕ್ಕೆ ಕುಟುಂಬ ಬಲಿಯಾಯ್ತಾ?
ಕೊಲೆ ಮಾಡುವ ಹಂತಕ್ಕೆ ತಲುಪಿದ ಲವ್: ಎಸ್ಪಿ ರಿಷ್ಯಂತ್
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ದಾವಣಗೆರೆ ಎಸ್ಪಿ ಸಿಬಿ ರಿಷ್ಯಂತ್ ನಿನ್ನೆ ಸಂಜೆ 5:30 ಕ್ಕೆ ಈ ಘಟನೆ ಜರುಗಿದ್ದು, ಸುಧಾ ಹಾಗೂ ರೂಪಾ ಇಬ್ಬರ ನಡುವೆ ಪ್ರೀತಿಯಿತ್ತು. ಒಂದು ರೀತಿಯ ಲವ್ ಇರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಬೇರೆ ಯುವತಿ ಜೊತೆಗೆ ರೂಪಾ ಮಾತನಾಡಿದ್ಸಕ್ಕಾಗಿ ಸುಧಾ ಹಲ್ಲೆ ಮಾಡಿದ್ದು, ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಹಲ್ಲೆ ಮಾಡಿ ಜೈಲು ಸೇರಿರುವ ಆರೋಪಿ ಸುಧಾ ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದವಳೆಂದು ತಿಳಿದು ಬಂದಿದ್ದು ಈ ಸಂಬಂದ ವಿದ್ಯಾನಗರ ಠಾಣೆಯಲ್ಲಿ 307 ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ಚಾಕು ಹಾಕಿಸಿಕೊಂಡ ಯುವತಿ ರೂಪಾ ಇಂದು ಖಾಸಗಿ ಕಾಲೇಜ್ ನ ಪರೀಕ್ಷಾ ಕೆಂದ್ರಕ್ಕೆ ತೆರಳಿ ಪರೀಕ್ಷೆ ಬರೆದಿದ್ದಾಳೆ. ಪದವಿ ಕೊನೆ ಪೇಪರ್ ಇದ್ದುದರಿಂದ ನಿನ್ನೇ ಆಸ್ಪತ್ರೆ ಬೆಡ್ ಮೇಲೆ ಓದಿಕೊಂಡು ನೋವಿನಲ್ಲೂ ಮೂರು ಗಂಟೆ ಕೂತು ಪರೀಕ್ಷೆ ಬರೆದಿದ್ದಾಳೆ.