ರಾಯಚೂರು: ಫೋನ್ ಪೇ ಮಾಡಿಸಿಕೊಂಡು ಲೋಕಾಯುಕ್ತ ಬಲೆಗೆ ಬಿದ್ದ ಜೆಸ್ಕಾಂ ಎಇಇ!

By Ravi Janekal  |  First Published Jan 22, 2024, 10:38 PM IST

ಗುತ್ತಿಗೆದಾರನ ಬಳಿ 10,000 ರೂ. ಲಂಚಕ್ಕೆ ಬೇಡಿಕೆಯಿಟ್ಟು, ಅದರಲ್ಲಿ 5000 ರೂಪಾಯಿ ಹಣವನ್ನು ಫೋನ್‌ಪೇ ಮೂಲಕ ಪಡೆಯುತ್ತಿದ್ದ ಲಿಂಗಸೂಗೂರು ಜೆಸ್ಕಾಂ ಎಇಇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.


ರಾಯಚೂರು (ಜ.22): ಗುತ್ತಿಗೆದಾರನ ಬಳಿ 10,000 ರೂ. ಲಂಚಕ್ಕೆ ಬೇಡಿಕೆಯಿಟ್ಟು, 5000 ರೂಪಾಯಿ ಹಣವನ್ನು ಫೋನ್‌ಪೇ ಮೂಲಕ ಪಡೆಯುತ್ತಿದ್ದ ವೇಳೆ ಲಿಂಗಸೂಗೂರು ಜೆಸ್ಕಾಂ ಎಇಇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಕೆಂಚಪ್ಪ AEE ಲೋಕಾ ಬಲೆಗೆ ಬಿದ್ದ ಅಧಿಕಾರಿ. ಜೆಸ್ಕಾಂ ಗುತ್ತಿಗೆದಾರ ನಾಯಕ್‌ ಎಂಬುವವರ ಬಳಿ 10,000 ರೂ. ಲಂಚಕ್ಕೆ ಬೇಡಿಕೆ ಭ್ರಷ್ಟ ಅಧಿಕಾರಿ ಕೆಂಚಪ್ಪ. ಬೇಡಿಕೆಯಂತೆ 5000 ರೂಪಾಯಿ ಫೋನ್ ಪೇ ಮಾಡಿಸಿಕೊಂಡಿದ್ದ ಕೆಂಚಪ್ಪ. ಉಳಿದ 5000 ರೂಪಾಯಿ ಹಣ ತೆಗೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿ.

Tap to resize

Latest Videos

ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಅಧಿಕಾರಿಗಳು

ವಿಚಾರಣೆ ವೇಳೆ ಆರೋಗ್ಯದಲ್ಲಿ ಏರುಪೇರು:

ಲಂಚ ಪಡೆಯುವಾಗ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಎಇಇ ಅಧಿಕಾರಿ ಕೆಂಚಪ್ಪರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಇದ್ದಕ್ಕಿದ್ದಹಾಗೆ ಎಇಇ ಆರೋಗ್ಯದಲ್ಲಿ ಏರುಪೇರಾಗಿದೆ. ವಿಚಾರಣೆ ಮೊಟಕುಗೊಳಿಸಿ ಲಿಂಗಸೂರು ತಾಲೂಕು ಆಸ್ಪತ್ರೆಗೆ ಶಿಫ್ಟ್‌ ಮಾಡಿ ಚಿಕಿತ್ಸೆ ಕೊಡಿಸಿದ ಅಧಿಕಾರಿಗಳು. ತೀವ್ರ ವಾಂತಿಯಿಂದ ಬಳಲುತ್ತಿರುವ ಭ್ರಷ್ಟ ಅಧಿಕಾರಿ ಕೆಂಚಪ್ಪ. ಲಿಂಗಸೂಗೂರಿನ ಜೆಸ್ಕಾಂ ಕಚೇರಿಯಲ್ಲಿ ತನಿಖೆ ಮುಂದುವರಿಸಿರುವ ಲೋಕಾಯುಕ್ತ ಅಧಿಕಾರಿಗಳು.

ಭ್ರಷ್ಟಾಚಾರದಿಂದ ನೆಮ್ಮದಿಯ ಬದುಕಿಲ್ಲ: ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

click me!