ರಾಜ್ಯದ ಖ್ಯಾತ ಫುಟ್‌ಬಾಲ್ ಆಟಗಾರ ಅಪಘಾತದಲ್ಲಿ ದುರ್ಮರಣ: ಸಿಎಂ ತೀವ್ರ ಸಂತಾಪ

By Ravi JanekalFirst Published Jan 21, 2024, 11:05 PM IST
Highlights

ಭೀಕರ ರಸ್ತೆ ಅಪಘಾತದಲ್ಲಿ ರಾಜ್ಯದ ಖ್ಯಾತ ಫುಟ್‌ಬಾಲ್‌ ಆಟಗಾರ ದುರ್ಮರಣಕ್ಕೀಡಾದ ಘಟನೆ ನಿನ್ನೆ ತಡರಾತ್ರಿ ಕೆಆರ್‌ ಪುರ ಸಂಚಾರಿ ಠಾಣಾ ವ್ಯಾಪ್ತಿಯ ರಾಮಮೂರ್ತಿ ನಗರ ಫ್ಲೈ ಓವರ್ ಮೇಲೆ ನಡೆದಿದೆ. ಘಟನೆ ಮಾಹಿತಿ ತಿಳಿದು ಸಿಎಂ ಸಿದ್ದರಾಮಯ್ಯ ಅಧಿಕೃತ ಟ್ವಿಟ್ಟರ್ ಎಕ್ಸ್ ಮೂಲಕ ತೀವ್ರ ಸಂತಾಪ ಸೂಚಿಸಿದ್ದಾರೆ.

ಬೆಂಗಳೂರು (ಜ.21): ಭೀಕರ ರಸ್ತೆ ಅಪಘಾತದಲ್ಲಿ ರಾಜ್ಯದ ಖ್ಯಾತ ಫುಟ್‌ಬಾಲ್‌ ಆಟಗಾರ ದುರ್ಮರಣಕ್ಕೀಡಾದ ಘಟನೆ ನಿನ್ನೆ ತಡರಾತ್ರಿ ಕೆಆರ್‌ ಪುರ ಸಂಚಾರಿ ಠಾಣಾ ವ್ಯಾಪ್ತಿಯ ರಾಮಮೂರ್ತಿ ನಗರ ಫ್ಲೈ ಓವರ್ ಮೇಲೆ ನಡೆದಿದೆ. ಘಟನೆ ಮಾಹಿತಿ ತಿಳಿದು ಸಿಎಂ ಸಿದ್ದರಾಮಯ್ಯ ಅಧಿಕೃತ ಟ್ವಿಟ್ಟರ್ ಎಕ್ಸ್ ಮೂಲಕ ತೀವ್ರ ಸಂತಾಪ ಸೂಚಿಸಿದ್ದಾರೆ.

ಮೊನೀಶ್ ಕೆ (27) ಮೃತ ದುರ್ದೈವಿ. ರಾಜ್ಯದ ಉದಯೋನ್ಮುಖ ಫುಟ್‌ಬಾಲ್ ಆಟಗಾರರಾಗಿರುವ ಮೊನೀಶ್.

ಶಿವಮೊಗ್ಗ ಯುವತಿಯರ ಸರಣಿ ಆತ್ಮಹತ್ಯೆ: ಮದುವೆಗೆ 13 ದಿನವಿರುವಾಗ ನೇಣಿಗೆ ಶರಣಾದ ಮದುಮಗಳು

ಘಟನೆ ಹಿನ್ನೆಲೆ:
ನಿನ್ನೆ ತಡರಾತ್ರಿ ಸುಮಾರು 2ಗಂಟೆ ಸಮಯದಲ್ಲಿ ಬೈಕ್‌ನಲ್ಲಿ ಹೊರಟಿಇದ್ದ ಮೋನಿಶ್. ಈ ವೇಳೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ತೀವ್ರವಾಗಿ ಗಾಯಗೊಂಡು ರಸ್ತೆಮೇಲೆ ಬಿದ್ದಿದ್ದ ಮೋನಿಸ್. ಕೂಡಲೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ಸಂತಾಪ ಸೂಚಿಸಿದ ಸಿಎಂ

ಮೊನೀಶ್​ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಟ್ವಿಟ್ಟರ್ ಎಕ್ಸ್‌ನಲ್ಲಿ ಸಂತಾಪ ಸೂಚಿಸಿರುವ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯದ ಖ್ಯಾತ ಫುಟ್‌ಬಾಲ್‌ ಆಟಗಾರ ಮೊನೀಶ್.ಕೆ ಅವರ ನಿಧನದ ಸುದ್ದಿ ಕೇಳಿ ಬೇಸರವಾಯಿತು. ನಿನ್ನೆ ರಾತ್ರಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುಣಮುಖರಾಗುತ್ತಾರೆಂದು ನಂಬಿದ್ದೆ, ಆದರೆ ಈಗ ನಂಬಿಕೆ ಹುಸಿಯಾಗಿದೆ.

ಚಿತ್ರದುರ್ಗ: ಹೋಟೆಲ್‌ಗೆ ಬೆಂಕಿ; ಘಟನೆ ನೋಡಲು ಹೋದ ಮಹಿಳೆ ಸಿಲಿಂಡರ್ ಸ್ಫೋಟಕ್ಕೆ ಬಲಿ!

ಕ್ರೀಡಾ ಬದುಕಿನಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಿದ್ದ ಯುವ ಪ್ರತಿಭೆಯೊಂದು ಹೀಗೆ ಆರಂಭದಲ್ಲೇ ಅಂತ್ಯ ಕಂಡಿದ್ದು ಅತ್ಯಂತ ದುಃಖದ ವಿಚಾರವಾಗಿದೆ ಮೃತ ಯುವಕನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. 

ರಾಜ್ಯದ ಖ್ಯಾತ ಫುಟ್‌ಬಾಲ್‌ ಆಟಗಾರ ಮೊನೀಶ್.ಕೆ ಅವರ ನಿಧನದ ಸುದ್ದಿ ಕೇಳಿ ಬೇಸರವಾಯಿತು. ನಿನ್ನೆ ರಾತ್ರಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುಣಮುಖರಾಗುತ್ತಾರೆಂದು ನಂಬಿದ್ದೆ, ಈಗ ಆ ನಂಬಿಕೆ ಹುಸಿಯಾಗಿದೆ.
ಕ್ರೀಡಾ ಬದುಕಿನಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಿದ್ದ ಯುವ… pic.twitter.com/TgL33npzEH

— CM of Karnataka (@CMofKarnataka)
click me!