ಗ್ಯಾಸ್ ಗೀಸರ್ ನ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಿಂದ ತಾಯಿ ಮಗ ದುರಂತ ಸಾವು ಕಂಡಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿಯ ಜ್ಯೋತಿ ನಗರದಲ್ಲಿ ನಡೆದಿದೆ.
ಮಾಗಡಿ (ಜು.22): ಗ್ಯಾಸ್ ಗೀಸರ್ ನಿಂದ ನೀರು ಕಾಯಿಸಿ ಸ್ನಾನ ಮಾಡಲು ತೆರಳುವಾಗ ಎಚ್ಚರವಿರಲಿ. ಗ್ಯಾಸ್ ಗೀಸರ್ ನ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಿಂದ ತಾಯಿ ಮಗ ದುರಂತ ಸಾವು ಕಂಡಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿಯ ಜ್ಯೋತಿ ನಗರದಲ್ಲಿ ನಡೆದಿದೆ.
ಶೋಭ( 40 ) ದಿಲೀಪ್ (17). ಮೃತ ದುರ್ದೈವಿಗಳಾಗಿದ್ದಾರೆ. ಬಿಸಿ ನೀರು ಕಾಯಿಸಲು ಪುತ್ರ ದಿಲೀಪ್ ಗ್ಯಾಸ್ ಗೀಜರ್ ಆನ್ ಮಾಡಿದ್ದ. ಈ ವೇಳೆ ಅನಿಲ ಸೋರಿಕೆಯಾಗಿದೆ. ಉಸಿರು ಕಟ್ಟಿ ದಿಲೀಪ್ ಸಾವು ಕಂಡಿದ್ದಾನೆ.
ಇನ್ಸ್ಟಾಗ್ರಾಮ್ ನಲ್ಲಿ ರೌಡಿ ಶೀಟರ್‌ಗಳ ರೀಲ್ಸ್ , ಅಪ್ರಾಪ್ತರೇ ಟಾರ್ಗೆಟ್, 60ಕ್ಕೂ ಹೆಚ್ಚು ಅಕೌಂಟ್ ಪತ್ತೆ!
ಮಗನನ್ನು ನೋಡಲು ಸ್ನಾನ ಗೃಹಕ್ಕೆ ತೆರಳಿದ ತಾಯಿ ಕೂಡ ಗ್ಯಾಸ್ ಗೀಸರ್ ವಿಷಾನಿಲ ಸೇವಿಸಿ ಪ್ರಜ್ಞೆ ತಪ್ಪಿ ಸಾವು ಕಂಡಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಇಬ್ಬರು ಸಾವನ್ನಪ್ಪಿರುವುದು ದೃಢಪಟ್ಟಿದೆ. ಭಾನುವಾರ ಸಂಜೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.