ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿರುವ ಪೊಲೀಸರಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಲಿದೆ. ಇದೀಗ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮತ್ತೊಂದು ಅಚ್ಚರಿ ಬೆಳಕಿಗೆ ಬಂದಿದೆ. ಕೊಲೆ ನಡೆದ ದಿನ ಪ್ಲಾನ್ ಮಾಡಿದ್ದೇನೆ ಬೇರೆ ನಡೆದಿದ್ದೇ ಬೇರೆ!
ಬೆಂಗಳೂರು (ಜು.22) ಪ್ರೇಯಸಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದನೆಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಬರ್ಬರವಾಗಿ ಹತ್ಯೆ ಮಾಡಿರುವ ಆರೋಪದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿ ತಿಂಗಳುಗಳೇ ಕಳೆದಿವೆ. ಕೊಲೆ ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿರುವ ಪೊಲೀಸರಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಲಿದೆ. ಇದೀಗ ಮತ್ತೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮತ್ತೊಂದು ಅಚ್ಚರಿ ಬೆಳಕಿಗೆ ಬಂದಿದೆ.
ಅಂದು ರೇಣುಕಾಸ್ವಾಮಿ ಮೇಲೆ ದರ್ಶನ್ ಗ್ಯಾಂಗ್ ಮನಸೋ ಇಚ್ಛೆ ಹಲ್ಲೆ ನಡೆಸಿದ ಬಳಿಕ ಅಫಾಲಜಿ ವಿಡಿಯೋ ಮಾಡಲು ಯತ್ನಿಸಿದ್ದ ವಿಚಾರ ಬೆಳಕಿಗೆ ಬಂದಿದೆ ಅಂದರೆ ರೇಣುಕಾಸ್ವಾಮಿಗೆ ಹಿಗ್ಗಾಮಗ್ಗಾ ಥಳಿಸಿ ಬಳಿಕ ಘಟನೆ ಬಗ್ಗೆ ಅವನಿಂದಲೇ ಕ್ಷಮಾಪಣೆ ಕೇಳಿಸಲು ದರ್ಶನ್ ಅಂಡ್ ಗ್ಯಾಂಗ್ ಪ್ರಯತ್ನಿಸಿದ್ದರು. ಕ್ಷಮಾಪಣೆ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಲು ಪ್ಲಾನ್ ಮಾಡಿದ್ದ ಗ್ಯಾಂಗ್. ಆದರೆ ಆಗಿದ್ದೇ ಬೇರೆ! ರೇಣುಕಾಸ್ವಾಮಿ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದರು. ಮನಸೋಇಚ್ಛೆ ಥಳಿಸಿದ್ದರು ಇದರಿಂದ ಅಸ್ವಸ್ಥನಾಗಿ ಕುಸಿದುಬಿದ್ದಿದ್ದ ರೇಣುಕಾಸ್ವಾಮಿ. ಮನಬಂದಂತೆ ಬಡಿದು ಕೊನೆ ಕ್ಷಮಾಪಣೆ ಕೇಳುವ ವಿಡಿಯೋ ಮಾಡುವ ಪ್ಲಾನ್ ಮಾಡಿದ್ದ ಗ್ಯಾಂಗ್.
ಎತ್ತುಗಳ ಮೇಲೆ ದರ್ಶನ ಕೈದಿ ಸಂಖ್ಯೆ, ಡಿ ಬಾಸ್ ಬರೆದು ಕಾರಹುಣ್ಣಿಮೆ ಆಚರಿಸಿದ ಅಭಿಮಾನಿಗಳು!
ಹಲ್ಲೆ ನಡೆಸುವ ವೇಳೆ ಇಬ್ಬರು ರೇಣುಕಾಸ್ವಾಮಿಯನ್ನು ಹಿಡಿದು ಕುಳಿತಿದ್ರು. ಎದುರುಗಡೆ ಮೊಬೈಲ್ ಫೋನ್ ಹಿಡಿದು ವಿಡಿಯೋ ಮಾಡಲು ನಿಂತಿದ್ದ ಇನ್ನೊರ್ವ ಆರೋಪಿ. 'ಇನ್ಮುಂದೆ ಈ ರೀತಿ ಮಾಡೊಲ್ಲ, ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜಾಗಲಿ, ಫೋಟೊಗಳಾಗಲಿ ಕಳಿಸುವುದಿಲ್ಲ ನನ್ನ ಕ್ಷಮಿಸಿ' ಎಂದು ಕ್ಷಮಾಪಣೆ ಕೇಳುವಂತೆ ಒತ್ತಾಯ ಮಾಡಿದ್ದ ಗ್ಯಾಂಗ್. ಆದರೆ ಅಷ್ಟೊತ್ತಿಗಾಗಲೇ ನಿಲ್ಲಲು, ಕೂರಲು ಆದಷ್ಟು ಮನಬಂದಂತೆ ಬಡಿದಿದ್ದರಿಂದ ರೇಣುಕಾಸ್ವಾಮಿ ಮಾತಾಡುವ ಸ್ಥಿತಿಯಲ್ಲಿರಲಿಲ್ಲ. ಬಳಿಕ ನಾಳೆ ಹೇಳಿಸೋಣ ಬಿಡ್ರೋ ಅಂತಾ ಸುಮ್ಮನಾಗಿದ್ದ ದರ್ಶನ್.
ದರ್ಶನ್ ತೂಗುದೀಪಗೆ ಮನೆ ಊಟ ಸಿಗ್ಲಿಲ್ಲ, ಮತ್ತೊಂದು ವಾರ ಸೆಂಟ್ರಲ್ ಜೈಲಿನ ಊಟವೇ ಗತಿ.!
ತೀವ್ರ ಅಸ್ವಸ್ಥನಾಗಿ ಬಿದ್ದಿದ್ದ ರೇಣುಕಾಸ್ವಾಮಿಯನ್ನ ಸೆಕ್ಯೂರಿಟಿ ರೂಂಗೆ ತಂದು ಹಾಕಿದ್ದ ಗ್ಯಾಂಗ್. ನಂತರ ಕೆಲವೇ ಕ್ಷಣಗಳಲ್ಲಿ ರೇಣುಕಾಸ್ವಾಮಿ ಪ್ರಾಣಪಕ್ಷಿ ಹಾರಿಹೋಗಿತ್ತು. ಇದರಿಂದ ಗಾಬರಿಗೊಂಡ ಗ್ಯಾಂಗ್. ಅಷ್ಟೊತ್ತಿಗಾಗಲಿ ದರ್ಶನ್ ಹೊರಹೋಗಿದ್ದರಿಂದ ಫೋನ್ ಮಾಡಿ ವಿಚಾರ ತಿಳಿಸಿದ್ದ ಆರೋಪಿಗಳು. ಪೊಲೀಸರ ತನಿಖೆ ವೇಳೆ ಅಫಾಲಜಿ ಪ್ಲಾನ್ ಬಯಲಾಗಿದೆ. ಸದ್ಯ ಆರೋಪಿಗಳ ಮೊಬೈಲ್ ಪರಿಶೀಲನೆಗೆ ರಿಟ್ರೀವ್ ಗೆ ಕಳಿಸಿರುವ ಪೊಲೀಸರು.