ಇನ್ಸ್ಟಾಗ್ರಾಮ್ ನಲ್ಲಿ ರೌಡಿ ಶೀಟರ್‌ಗಳ ರೀಲ್ಸ್ , ಅಪ್ರಾಪ್ತರೇ ಟಾರ್ಗೆಟ್‌, 60ಕ್ಕೂ ಹೆಚ್ಚು ಅಕೌಂಟ್‌ ಪತ್ತೆ!

By Gowthami K  |  First Published Jul 22, 2024, 2:28 PM IST

ಇನ್ಸ್ಟಾಗ್ರಾಮ್ ನಲ್ಲಿ ರೌಡಿಗಳ ರೀಲ್ಸ್ ವಿಚಾರವಾಗಿ ಸಿಸಿಬಿಯ OCW  ವಿಭಾಗದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ.


ಇನ್ಸ್ಟಾಗ್ರಾಮ್ ನಲ್ಲಿ ರೌಡಿಗಳ ರೀಲ್ಸ್ ವಿಚಾರವಾಗಿ ಸಿಸಿಬಿಯ OCW  ವಿಭಾಗದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ. ಸುಮಾರು 60 ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಅಕೌಂಟ್ ಗಳನ್ನು ಸಿಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಸಿಸಿಬಿ ಜಂಟಿ ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಸೂಚನೆ ಮೇರೆಗೆ ಪತ್ತೆ ಮಾಡಿದ ಅಧಿಕಾರಿಗಳು ಪೇಜ್ ಗಳ ಅಡ್ಮಿನ್ ಗಳನ್ನು ವಿಚಾರಣೆಗೆ ಕರೆಸಿದ್ದಾರೆ. ಈ ವೇಳೆ ರೋಚಕ ವಿಚಾರ ಬಯಲಾಗಿದೆ. ಪೇಜ್ ಅಡ್ಮಿನ್ ಗಳು ಬಹುಪಾಲು ಅಪ್ರಾಪ್ತ ಬಾಲಕರು ಎಂದು ತಿಳಿದುಬಂದಿದ್ದು, ಪೇಜ್ ಅಡ್ಮಿನ್ ಗಳಿಗೆ ರೌಡಿಗಳ ಸಹಚರರಿಂದ ಸಂಪರ್ಕ ಇರುವುದು ಬೆಳಕಿಗೆ ಬಂದಿದೆ. ರೌಡಿಗಳ ಶಿಷ್ಯಂದಿರು ಅನ್ಲೈನ್ ಮೂಲಕವೇ ಸಂಪರ್ಕ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ನಾದಬ್ರಹ್ಮನ ಸುತ್ತ ವಿವಾದಗಳ ಹುತ್ತ: ಪ್ರೇಮಲೋಕದ ಹಾಡುಗಾರ ಹಂಸಲೇಖನಿಗೆ ...

Tap to resize

Latest Videos

undefined

ವಿಲ್ಸನ್ ಗಾರ್ಡನ್ ನಾಗ, ಮಾರತ್ ಹಳ್ಳಿ ರೋಹಿತ್, ಸೈಲೆಂಟ್ ಸುನಿಲ್, ಕುಣಿಗಲ್ ಗಿರಿ ಸೇರಿ ಹಲವಾರು ರೌಡಿಗಳ ಶಿಷ್ಯರಿಂದ ಅಪ್ರಾಪ್ತರ ಸಂಪರ್ಕ ನಡೆದಿದೆ. ವಿಡಿಯೋಗಳನ್ನು ನೀಡಿ ಎಡಿಟ್ ಮಾಡಿ ಪೇಜ್ ನಲ್ಲಿ ಹಾಕುವಂತೆ ಸೂಚನೆ ಮಾಡಿರುವ ರೌಡಿಗ್ಯಾಂಗ್‌ ನ ಸಹಚರರು. ಸಾಮಾಜದಲ್ಲಿ ರೌಡಿಗಳ ಹವಾ ತೋರಿಸಬೇಕು ಎನ್ನೋ ಕಾರಣಕ್ಕೆ ಹೀಗೆ ಮಾಡಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಒಂದು ವಿಡಿಯೋ ಎಡಿಟ್ ಮಾಡಿ ಪೋಸ್ಟ್ ಮಾಡಲು ರೌಡಿ ಶಿಷ್ಯಂದಿರು 500 ರೂ  ಹಣ ನೀಡುತ್ತಿದ್ದರು.

ಈ ಹಿನ್ನೆಲೆಯಲ್ಲಿ ಸದ್ಯ ಅಪ್ರಾಪ್ತ ಬಾಲಕರ ಪೋಷಕರನ್ನು ಕರೆಸಿ  ಸಿಸಿಬಿ ವಾರ್ನಿಂಗ್ ಮಾಡಿ ಕಳುಹಿಸಿದೆ. ಮಾತ್ರವಲ್ಲ ಸುಮಾರು 60 ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣದ ಅಕೌಂಟ್ ಗಳನ್ನು ಬಂದ್ ಮಾಡಿಸಿದೆ. ಜೊತೆಗೆ ಹಣ ಕೊಟ್ಟು ವಿಡಿಯೋ ಮಾಡಿಸುತಿದ್ದವರಿಗೆ ಸಿಸಿಬಿ ಹುಡುಕಾಟ ನಡೆಸಿದೆ. 60 ಅಕೌಂಟ್ ನಿಂದ ಐದು ನೂರಕ್ಕು ಹೆಚ್ಚು ವಿಡಿಯೋ ಗಳನ್ನು ಸಿಸಿಬಿ ಡಿಲೀಟ್ ಮಾಡಿಸಿದೆ.

ಅಂಬಾನಿ ಮದುವೆಯ ಸುಂದರ ಕ್ಷಣಗಳನ್ನು ಸೆರೆ ಹಿಡಿದ ಛಾಯಾಗ್ರಾಹಕ ಇವರೇ, ಸಂಭಾವನೆ ಪಡೆದಿದ್ದೆಷ್ಟು?

ಇದರ ಬೆನ್ನಲ್ಲೇ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಹೇಳಿಕೆ ನೀಡಿ, ಸೋಷಿಯಲ್ ಮೀಡಿಯಾ ತುಂಬಾ ಆಕ್ಟೀವ್ ಇರುವ ಹಿನ್ನೆಲೆ ರೌಡಿ ಗ್ಯಾಂಗ್ ಗಳು ಕೆಲವು ಹುಡುಗರನ್ನು ಬಳಸಿಕೊಂಡು ಬಿಲ್ಡಪ್ ಪಡೆದುಕೊಳ್ಳುತ್ತಿದ್ದರು. ಇನ್ಸ್ಟಾ ಗ್ರಾಂ ನಲ್ಲಿ ಫ್ಯಾನ್ ಪೇಜ್ ಕ್ರಿಯೇಟ್ ಮಾಡಿ ಫಾಲೋವರ್ಸ್ ಮಾಡಿಕೊಳ್ತಿದ್ರು, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಇರುವಿಕೆ ಬಗ್ಗೆ ಸಣ್ಣ ವಯಸ್ಸಿನವರ ಬ್ರೈನ್ ವಾಶ್ ರೀಲ್ಸ್ ಮಾಡಿಸುತ್ತಿದ್ದರು. ಹಣ ಕೊಟ್ಟು ರೀಲ್ಸ್ ಎಡಿಟ್ ಮಾಡಿಸುವ ಕೆಲಸ ಮಾಡಿಸುತ್ತಿದ್ದರು. ಇದ್ರಿಂದ ಇನ್ಸ್ಟಾಗ್ರಾಮ್ ಫ್ಯಾನ್ ಪೇಜ್ ಫಾಲೋ ಮಾಡುತ್ತಿದ್ದರು.

ಈ ರೀತಿ ಫ್ಯಾನ್ ಪೇಜ್ ಕ್ರಿಯೆಟ್ ಮಾಡುತ್ತಿದ್ದ ಯುವಕರ ಪೊಷಕರನ್ನ ಕರೆಸಿ ವಾರ್ನ್ ಮಾಡಲಾಗಿದೆ. ಇಂಥಹ ರೀಲ್ಸ್ ನಿಂದ ರೌಡಿ ಆಕ್ಟಿವಿಟಿ ಇರುವಂತವರು ಯುವಕರನ್ನ ಸೆಳೆದು ಫ್ಯಾನ್ ಫಾಲೋವರ್ಸ್ ತೋರಿಸುತ್ತಿದ್ರು. ಫಾಲೋಯಿಂಗ್ ತೋರಿಸಿ ಸಂಬಂಧ ಪಟ್ಟವರಿಗೆ ಬೆದರಿಸಿ  ಕೆಲಸ ಮಾಡುತ್ತಿದ್ದರು. ಸದ್ಯ ಇವಾಗ 60 ಕ್ಕೂ ಹೆಚ್ಚು ಇನ್ಸ್ಟಾಗ್ರಾಂ ರೀಲ್ಸ್ ಗಳನ್ನ ಡಿಲೀಟ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಕೆಲಸ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

click me!