
ಕೊಪ್ಪಳ (ಅ.26): ಹಳೇ ವೈಷಮ್ಯ ಹಿನ್ನೆಲೆ ಗಂಗಾವತಿ ಪಟ್ಟಣದಲ್ಲಿ ನಡೆದಿದ್ದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರ ಹತ್ಯೆ ಪ್ರಕರಣದ ಕೇಸಿನ ಮಾಸ್ತರ್ ಮೈಂಡ್ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರವಿ ಹಾಗೂ ಗೌಳಿ ಗಂಗಾಧರ ಬಂಧಿತ ಆರೋಪಿಗಳು. ಕೊಲೆ ನಡೆದು ಬರೋಬ್ಬರಿ 19 ದಿನಗಳ ಬಳಿಕ ಸೆರೆಸಿಕ್ಕ ಆರೋಪಿಗಳು.
ಇದನ್ನೂ ಓದಿ: Gangavati BJP Leader Murder Case: ಕೊಂದು ಪೊಲೀಸರಿಗೆ ಶರಣಾದ ನಾಲ್ವರು ಆರೋಪಿಗಳು
ವೆಂಕಟೇಶ್ ಕುರುಬರ ಕೊಲೆ ಕೇಸ್‌ನ ಎ1 ಆರೋಪಿಯಾಗಿದ್ದ ರವಿ ಅಕ್ಟೋಬರ್ 8 ರಂದು ಗಂಗಾವತಿ ನಗರದಲ್ಲಿ ನಡೆದ ಕೊಲೆಗೆ ಸಂಚು ರೂಪಿಸಿದ್ದ. ಹಳೇ ವೈಷಮ್ಯಕ್ಕೆ ವೆಂಕಟೇಶ್‌ನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು.ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನು ಬಂಧಿಸಿದ್ದ ಪೊಲೀಸರು, ಇದೀಗ ಪ್ರಮುಖ ಆರೋಪಿ ರವಿ ಹಾಗೂ ಗೌಳಿ ಗಂಗಾಧರ್ ಅವರನ್ನು ಬಂಧಿಸಿದ್ದಾರೆ.
ರವಿ ಬಂಧನಕ್ಕೆ ಕೊಪ್ಪಳ ಎಸ್‌ಪಿ ವಿಶೇಷ ತಂಡ ರಚಿಸಿದ್ದರು. ರವಿಗಾಗಿ ಹೊರ ರಾಜ್ಯದಲ್ಲಿ ಹುಡುಕಾಡಿದ್ದ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ