Belagavi: ಕುಂದಾನಗರಿಯ ಬೆಚ್ಚಿಬೀಳಿಸಿದ ಸಾಮೂಹಿಕ ಅತ್ಯಾಚಾರ, ರೇಪಿಸ್ಟ್‌ಗಳ ಪ್ಲ್ಯಾನ್‌ಗೆ ಪೊಲೀಸರೇ ಶಾಕ್‌!

Published : Jan 15, 2025, 01:21 PM ISTUpdated : Jan 15, 2025, 01:27 PM IST
Belagavi: ಕುಂದಾನಗರಿಯ ಬೆಚ್ಚಿಬೀಳಿಸಿದ ಸಾಮೂಹಿಕ ಅತ್ಯಾಚಾರ, ರೇಪಿಸ್ಟ್‌ಗಳ ಪ್ಲ್ಯಾನ್‌ಗೆ ಪೊಲೀಸರೇ ಶಾಕ್‌!

ಸಾರಾಂಶ

ಬೆಳಗಾವಿ ಜಿಲ್ಲೆಯ ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಯು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಯುವಕರು ಜಾತ್ರೆಯಲ್ಲಿ ಭೇಟಿಯಾಗಿ ಯುವತಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದಾರೆ.

ಬೆಳಗಾವಿ (ಜ.15): ಸಾಮೂಹಿಕ ಅತ್ಯಾಚಾರ ಕೇಸ್‌ ಬೆಳಗಾವಿ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.ಇನ್ಸ್‌ಟಾಗ್ರಾಮ್‌ ಬಳಸುವಾಗ ಸಾಧ್ಯವಾದಷ್ಟು ಎಚ್ಚರಿಕೆ ಇರುವಂತೆ ಯುವತಿಯರಿಗೆ ಹೇಳಲಾಗುತ್ತದೆ. ಹಾಗಿದ್ದರೂ, ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗುವ ಯುವಕರ ಮೆಸೇಜ್‌ಗೆ ರಿಪ್ಲೈ ಮಾಡುವುದು ಮಾತ್ರವಲ್ಲ ಅವರೊಂದಿಗೆ ಪ್ರೀತಿಗೆ ಬಿದ್ದರೆ ಏನಾಗುತ್ತದೆ ಅನ್ನೋದಕ್ಕೆ ಈ ಘಟನೆ ಉದಾಹರಣೆಯಂತಿದೆ. ಬೆಳಗಾವಿ ಜಿಲ್ಲೆಯ ಹಾರೂಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪಿಯು ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್‌ ಮಾಡಿದ್ದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.  ಹಾರೂಗೇರಿ ಠಾಣಾ ವ್ಯಾಪ್ತಿಯಲ್ಲಿ ವಾಸವಿರುವ 17 ವರ್ಷದ ಅಪ್ರಾಪ್ತೆ ಮೇಲೆ ಗ್ಯಾಂಗ್‌ರೇಪ್ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಭಿಷೇಕ ದೇವನೂರು, ಆದಿಲ್ ಶಾ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಇನ್ಸ್‌ಟಾಗ್ರಾಮ್‌ನಲ್ಲಿ ಆರೋಪಿ ಅಭಿಷೇಕ್‌, ಯುವತಿ ಪರಿಚಯ ಮಾಡಿಕೊಂಡಿದ್ದ. ಬಳಿಕ ಅಥಣಿ ತಾಲೂಕಿನ ಕೊಕಟನೂರು ಜಾತ್ರೆಗೆ ಆಗಮಿಸಿದ್ದಾಗ ಭೇಟಿಯಾಗಿ ಪರಿಚಯ ಮಾಡಿಕೊಂಡಿದ್ದಾರೆ.ಜನವರಿ 3ರಂದು ಯುವತಿಯನ್ನ ಪುಸಲಾಯಿಸಿ ಅಭಿಷೇಕ್‌ ಕರೆದುಕೊಂಡು ಹೋಗಿದ್ದ. ಸವದತ್ತಿಯ ರೇಣುಕಾದೇವಿಗೆ ಹೋಗಿ ಬರೋಣ ಎಂದು ಯುವತಿಗೆ ತಿಳಿಸಿದ್ದ. ತನ್ನ ಸ್ನೇಹಿತೆ ಜೊತೆ ಅಭಿಷೇಕ ಜೊತೆ ಯುವತಿ ತೆರಳಿದ್ದಳು.
ಅಭಿಷೇಕ್‌ ಸಹ ತನ್ನ ಜೊತೆ ಆದಿಲ್ ಶಾ, ಕೌತುಕ್ ಬಾಬುಸಾಬ್ ಬಡಿಗೇರ್‌ನನ್ನು ಕರೆದುಕೊಂಡು ಬಂದಿದ್ದ. ಎರ್ಟಿಗಾ ಕಾರಿನಲ್ಲಿ ಇಬ್ಬರು ಅಪ್ರಾಪ್ತೆಯರನ್ನು ಮೂವರು ಆರೋಪಿಗಳು ಕರೆದುಕೊಂಡು ಹೋಗಿದ್ದರು. ಸವಸುದ್ದಿ ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದು ಓರ್ವಳ ಮೇಲೆ ಇಬ್ಬರಿಂದ ಅತ್ಯಾಚಾರ ಎಸಗಲಾಗಿದೆ. ಇದೇ ವೇಳೆ ಮತ್ತೋರ್ವ ಯುವತಿ ಮೇಲೆ ಕಾರಿನಲ್ಲೇ ಚಾಲಕ ಕೌತುಬ್‌ನಿಂದ ಅತ್ಯಾಚಾರವಾಗಿದೆ. ಗ್ಯಾಂಗ್ ರೇಪ್ ಹಾಗೂ ಅತ್ಯಾಚಾರ ಮಾಡಿ ಅದರ ವಿಡಿಯೋವನ್ನೂ ಕೂಡ ಮಾಡಿಕೊಂಡಿದ್ದರು

Belagavi: ಸಂಕ್ರಮಣದ ಆಪತ್ತಿನಲ್ಲಿದ್ದ ಲಕ್ಷ್ಮೀ ಹೆಬ್ಬಾಳ್ಕರ್‌ ಕಾರು ಅಪಘಾತ ಸ್ಥಳದಲ್ಲಿ ವಾಮಾಚಾರದ ಅನುಮಾನ

ವಿಡಿಯೋ ಇಟ್ಟುಕೊಂಡು ಮತ್ತೆ ನೊಂದ ಯುವತಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಮುಂದಿನ ವಾರ ನಮ್ಮ ಜೊತೆಗೆ ಗೋವಾಗೆ ಬರದಿದ್ದರೆ ವಿಡಿಯೋ ವೈರಲ್ ಮಾಡುವ ಬ್ಲ್ಯಾಕ್‌ಮೇಲ್ ಮಾಡಲಾಗಿದೆ. ಈ ವಿಷಯ ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಲಾಗಿದೆ. ಜ.13ರಂದು ಹಾರೂಗೇರಿ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಳು ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖು ಮಾಡಲಾಗಿದೆ. ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Belagavi: ಲಕ್ಷ್ಮೀ ಹೆಬ್ಬಾಳ್ಕರ್‌ ಆರೋಗ್ಯ ವಿಚಾರಿಸಿದ ಪತಿ ರವೀಂದ್ರ; ಚೇತರಿಕೆಗೆ ಹಾರೈಸಿದ ಸಿಟಿ ರವಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ