* ಭ್ರಷ್ಟ ಅಧಿಕಾರಿಗಳ ಬೆನ್ನಿಗೆ ನಿಂತಿತಾ ಸರ್ಕಾರ?
* ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಸರ್ಕಾರದಿಂದಲೇ ತೊಡಕು
* ಲಂಚ ಸ್ವೀಕಾರ ,ಭ್ರಷ್ಟಚಾರ ,ಟ್ರ್ಯಾಪ್ ಕಾರ್ಯಾಚರಣೆ, ಅಕ್ರಮ ಆಸ್ತಿ ಪ್ರಕರಣಗಳು
* ಹಲ್ಲು ಕಿತ್ತ ಹಾವಾಯಿತೆ ಎಸಿಬಿ?
ವರದಿ: ಕಿರಣ್ ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಮಾ. 29) ಭ್ರಷ್ಟ ಅಧಿಕಾರಿಗಳ ಬೆನ್ನಿಗೆ ನಿಲ್ತಾ ರಾಜ್ಯ ಸರ್ಕಾರ (Karnataka Govt) ಎಂಬ ಆರೋಪ ಕೇಳಿ ಬಂದಿದೆ. ಎಸಿಬಿ (ACB)ಬರೋಬ್ಬರಿ 128 ಮಂದಿ ಸರ್ಕಾರಿ ಅಧಿಕಾರಿಗಳು ಆರೋಪಿತರಾಗಿದ್ದು, 128 ಮಂದಿ ವಿಚಾರಣೆ ನಡೆಸಲು ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಎಸಿಬಿ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ ಇದುವರೆಗೂ ಸರ್ಕಾರ ಅನುಮತಿ ನೀಡಿರೋದು 8 ಮಂದಿಗೆ ಮಾತ್ರ ಎಂದು ಎಸಿಬಿ ಉನ್ನತ ಮೂಲಗಳಿಂದ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಾಹಿತಿ ದೊರತಿದೆ..
ಇನ್ನು ಹೆಸರಿಗೆ ಮಾತ್ರ ಭ್ರಷ್ಟಚಾರ ನಿಗ್ರಹ ದಳ ಆದರೆ ಯಾವುದೇ ಅಧಿಕಾರ ಮಾತ್ರ ಎಸಿಬಿಗೆ (Anti Corruption Bureau) ಇಲ್ಲ. ಎಸಿಬಿಯನ್ನು ಹಲ್ಲು ಕಿತ್ತು ಹಾವಿನಂತೆ ಮಾಡಿ ಕುರಿಸಿದ್ದಾರೆ. ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಎಸಿಬಿ ಆದರೆ ಸರ್ಕಾರ ಮಾತ್ರ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಲು ಮೀನಾಮೇಷ ಎಣಿಸುತ್ತಿದೆ. ಎಸಿಬಿ ಅಧಿಕಾರಿಗಳ ತನಿಖೆ ತಾರ್ಕಿಕ್ ಅಂತ್ಯ ಆಗ್ತಿಲ್ಲ.
ಭ್ರಷ್ಟರ ರಕ್ಷಣೆಗೆ ನಿಂತಿದ್ಯಾ ಸರ್ಕಾರ? ಭ್ರಷ್ಟರ ವಿರುದ್ಧ ಸಮರ ಎನ್ನುವ ಸಿಎಂ ಇಲ್ನೋಡಿ
ಇಡೀ ರಾಜ್ಯದಾದ್ಯಂತ ಎಸಿಬಿ ಕಾರ್ಯ ನಿರ್ವಹಿಸುತ್ತಿದೆ. ಆದಾಯ ಮೀರಿದ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮೇಲೆ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಪ್ರಾಮಾಣಿಕವಾಗಿ ತನಿಖೆ ನಡೆಸಿದ ಅಧಿಕಾರಿಗಳ ಕೆಲಸಕ್ಕೆ ನ್ಯಾಯ ಸಿಗ್ತಿಲ್ಲ. ಕೋಟ್ಯಾಂತರ ರೂಪಾಯಿ ಅಕ್ರಮ ಆಸ್ತಿಗಳಿಸಿದ್ರೂ ಅಂತಹವರು ಆರಾಮಾಗಿದ್ದಾರೆ. ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಸರ್ಕಾರದಿಂದಲೇ ತೊಡಕಾಗುತ್ತಿದೆ. ಹಲವು ವರ್ಷಗಳಿಂದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುತ್ತಿಲ್ಲ.
ಒಂದು ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿ ಆರೋಪಿತನಾದ್ರೇ, ಆ ಕೇಸ್ ಸಂಪೂರ್ಣ ದಾಖಲೆಗಳನ್ನು ಸರ್ಕಾರಕ್ಕೆ ಕಳಿಸಲಾಗುತ್ತೆ. ಆ ಸರ್ಕಾರಿ ಅಧಿಕಾರಿ ಕಾರ್ಯ ನಿರ್ವಹಿಸುವ ಸಕ್ಷಮ ಪ್ರಾದಿಕಾರಕ್ಕೆ ಕಳಿಸಲಾಗುತ್ತೆ. ಸಕ್ಷಮ ಪ್ರಾದಿಕಾರ ಎಸಿಬಿ ನೀಡಿರುವ ವರದಿ ಆಧರಿಸಿ ಮತ್ತೊಂದು ಬಾರಿ ತನಿಖೆ ಸಕ್ಷಮ ಪ್ರಾದಿಕಾರದ ಅಧಿಕಾರಿಗಳು ಗುಪ್ತವಾಗಿ ತನಿಖೆ ನಡೆಸುತ್ತಾರೆ. ಎಸಿಬಿ ಕೊಟ್ಟ ದಾಖಲೆಗಳು,ಸರ್ಕಾರದಲ್ಲಿನ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತೆ. ಎರಡು ಹೊಂದಾಣೆಕೆಯಾದಾಗ ಸಕ್ಷಮ ಪ್ರಾದಿಕಾರ ಎಸಿಬಿಗೆ ಮುಂದುವರೆಯಲು ಅನುಮತಿ ನೀಡುತ್ತೆ..
ಲಂಚ ಸ್ವೀಕಾರ ,ಭ್ರಷ್ಟಚಾರ ,ಟ್ರ್ಯಾಪ್ ಕಾರ್ಯಾಚರಣೆ, ಅಕ್ರಮ ಆಸ್ತಿ ,ಆದಾಯಕ್ಕೆ ಮೀರಿದ ಆಸ್ತಿಗಳಿಕೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ಇದುವರೆಗೂ 128 ಅಧಿಕಾರಿಗಳಲ್ಲಿ ಪ್ರಮುಖರ ಹೆಸ್ರು ಈ ರೀತಿ ಇವೆ. ಬಿಡಿಎ ಮಾಜಿ ಆಯುಕ್ತ ಶ್ಯಾಮ್ ಭಟ್ ,ಕೆಎಎಸ್ ಅಧಿಕಾರಿಗಳು, ಎಸಿಯಾಗಿದ್ದ ಎಲ್ ಸಿ ನಾಗರಾಜ್ , ಇಂಜಿನಿಯರ್ ಗಳು ,ಪಿಡಿಓ ಗಳು ,ಪೊಲೀಸ್ ಇನ್ಸ್ ಪೆಕ್ಟರ್ ಗಳು, ಇಂತಹ ಭ್ರಷ್ಟ ಅಧಿಕಾರಿಗಳ ಬಗ್ಗೆ ಅನುಮತಿ ಕೇಳಿದ್ರೂ ಇದುವರೆಗೂ ಪ್ರಾಸಿಕ್ಯೂಷನ್ ಗೆ ಅನುಮತಿ ಸಿಕ್ಕಿಲ್ಲ.