* ಹಗಲಿನಲ್ಲಿ ಸೆಕ್ಯೂರಿಟಿ ಗಾರ್ಡ್ಸ್,ಕತ್ತಲಾಗ್ತಿದ್ದಂತೆ ಅದೇ ಅಪಾರ್ಟ್ಮೆಂಟ್ ಫ್ಲಾಟ್ ಗಳಲ್ಲಿ ಕಳವು..!
* ಅಪಾರ್ಟ್ ಮೆಂಟ್ ಗಳಲ್ಲಿ ಸೆಕ್ಯೂರಿಟಿ ಕೆಲಸ ಮಾಡುವ ಜತೆಗೆ ಮನೆ ಲಾಕ್ ಆಗಿದ್ದ ಫ್ಲಾಟ್ ಗಳನ್ನ ಮ್ಯಾಪಿಂಗ್
* ಲಾಕ್ ಡೌನ್ ನನ್ನೇ ಬಂಡವಾಳ ಮಾಡಿಕೊಂಡಿದ್ದ ಐನಾತಿ ನೇಪಾಳಿ ಗ್ಯಾಂಗ್
* ರಾಮೂರ್ತಿನಗರ ಪೊಲೀಸರಿಂದ ಆರು ಜನ ನೇಪಾಳಿ ಗ್ಯಾಂಗ್ ಅರೆಸ್ಟ್
ಬೆಂಗಳೂರು(ಜೂ. 07) ಇವರು ಹಗಲಿನಲ್ಲಿ ಸೆಕ್ಯೂರಿಟಿ ಗಾರ್ಡ್ಸ್, ಕತ್ತಲಾಗ್ತಿದ್ದಂತೆ ಅದೇ ಅಪಾರ್ಟ್ಮೆಂಟ್ ಫ್ಲಾಟ್ ಗಳಲ್ಲಿ ಕಳ್ಳತನ ಮಾಡುವ ಖದೀಮರು! ಅಪಾರ್ಟ್ ಮೆಂಟ್ ಗಳಲ್ಲಿ ಸೆಕ್ಯೂರಿಟಿ ಕೆಲಸ ಮಾಡುವ ಜತೆಗೆ ಮನೆ ಲಾಕ್ ಆಗಿದ್ದ ಫ್ಲಾಟ್ ಗಳನ್ನ ಮ್ಯಾಪಿಂಗ್ ಮಾಡಿ ಕಳ್ಳತನ ಎಸಗುತ್ತಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.
ಕೆಲಸಕ್ಕೆ ಹೋಗುವಾಗ ಮತ್ತು ವಾಪಸ್ ಬರುವಾಗ ಲಾಕ್ ಹಾಕಿದ್ದ ಮನೆಗಳನ್ನು ಗುರುತು ಮಾಡಿಕೊಳ್ಳುತ್ತಿದ್ದರು. ಲಾಕ್ ಡೌನ್ ನನ್ನೇ ಬಂಡವಾಳ ಮಾಡಿಕೊಂಡಿದ್ದ ಐನಾತಿ ನೇಪಾಳಿ ಗ್ಯಾಂಗ್ ಸೆರೆಸಿಕ್ಕಿದೆ.
ಬೇಕಾಬಿಟ್ಟಿ ಓಡಾಡುತ್ತಿದ್ದವರ ಬಂಧಿಸಿದಾಗ ಬಯಲಾದ ಬೈಕ್ ರಾಬರಿ
ರಾಮೂರ್ತಿನಗರ ಪೊಲೀಸರು ಆರು ಜನ ನೇಪಾಳಿ ಮೂಲದವರನ್ನು ಬಂಧಿಸಿದ್ದಾರೆ. ರಾಜೇಶ್ ಖಡಕ, ಸಚಿನ್ ಕುಮಾರ ಬೋರಾ, ಸೇರಿದಂತೆ ಆರುಜನ ಆರೋಪಿಗಳ ಬಂಧಿಸಿದ್ದು 17 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ರಾಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ಐದು ಕನ್ನ ಕಳವು, ಆರ್ ಆರ್ ನಗರ ಠಾಣಾ ವ್ಯಾಪ್ತಿಯಲ್ಲಿ ಕೈಚಳಕ ತೋರಿಸಿದ್ದ ಆರೋಪಿಗಳು ಸೆರೆ ಸಿಕ್ಕಿದ್ದಾರೆ.