ಮಂಗಳೂರು: ಕೆಲಸವಿಲ್ಲದೆ ನೊಂದ ಕೂಲಿ ಕಾರ್ಮಿಕ ನೇಣಿಗೆ ಶರಣು

By Kannadaprabha NewsFirst Published Jun 7, 2021, 1:45 PM IST
Highlights

* ದಕ್ಷಿಣ ಕನ್ನಡ ಜಿಲ್ಲೆ ಕಿನ್ನಿಗೋಳಿ ಸಮೀಪದ ನಡೆದ ಘಟನೆ
* ಕೆಲಸವಿಲ್ಲದೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ
* ಲಾಕ್ಡೌನ್‌ ಬಳಿಕ ಕೆಲಸ ಕಳೆದುಕೊಂಡಿದ್ದ ಆತ್ಮಹತ್ಯೆಗೆ ಶರಣಾದ ಮೋನಪ್ಪ

ಮೂಲ್ಕಿ(ಜೂ.07): ಕೊರೋನಾ ಲಾಕ್ಡೌನ್‌ನಿಂದ ಕೆಲಸವಿಲ್ಲದೆ ನೊಂದ ಕೂಲಿ ರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಿನ್ನಿಗೋಳಿ ಸಮೀಪದ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. 

ಇಲ್ಲಿನ ಜಲ್ಲಿಗುಡ್ಡೆ ನಿವಾಸಿ ಮೋನಪ್ಪ ದೇವಾಡಿಗ (64) ಕಿನ್ನಿಗೋಳಿ ಪರಿಸರದಲ್ಲಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ಲಾಕ್ಡೌನ್‌ ಬಳಿಕ ಕೆಲಸವಿಲ್ಲದೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಶನಿವಾರ ರಾತ್ರಿ 10 ಗಂಟೆ ಬಳಿಕ ಮನೆಯ ಸಮೀಪದ ತೋಟದ ಮಾವಿನಮರಕ್ಕೆ ಪ್ಲಾಸ್ಟಿಕ್‌ ವಯರ್‌ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಗಂಗಾವತಿ: 2ನೇ ಬಾರಿ ಕೊರೋನಾ, ಮಹಿಳೆ ಆತ್ಮಹತ್ಯೆ

ರಾತ್ರಿಯಿಂದ ಬೆಳಗ್ಗೆವರೆಗೆ ಮನೆಯಲ್ಲಿ ಮೋನಪ್ಪ ದೇವಾಡಿಗ ನಾಪತ್ತೆಯಾಗಿರುವುದರಿಂದ ಆತಂಕಗೊಂಡು ಮನೆಯವರು ಹುಡುಕಾಟ ನಡೆಸಿದಾಗ ತೋಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!