Gadaga ಅಪ್ರಾಪ್ತೆಯ ಕಿಡ್ನಾಪ್ ಮಾಡಿ ಅತ್ಯಾಚಾರ, ಬಿಜೆಪಿ ಮುಖಂಡನ ವಿರುದ್ಧ ಆರೋಪ!

By Suvarna NewsFirst Published Apr 28, 2022, 3:12 PM IST
Highlights

ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿ ಅತ್ಯಾಚಾರ ಮಾಡಲಾಗಿದೆ ಎಂದು ಗದಗ ಜಿಲ್ಲಾ ಬಿಜೆಪಿ ಅಲ್ಪ ಸಂಖ್ಯಾತರ ಮೊರ್ಚಾ ಮಂಡಳಿ ಉಪಾಧ್ಯಕ್ಷ ಸಿಕಂದರ್ ಬಾಪುನವರ್ ವಿರುದ್ಧ  ಆರೋಪ ಕೇಳಿ ಬಂದಿದೆ. 

ಗದಗ (ಎ.28): ಗದಗ (Gadag) ಜಿಲ್ಲಾ ಬಿಜೆಪಿ ಅಲ್ಪ ಸಂಖ್ಯಾತರ ಮೋರ್ಚಾ (bjp minority morcha) ಮಂಡಳಿ ಉಪಾಧ್ಯಕ್ಷ ಸಿಕಂದರ್ ಬಾಪುನವರ್ ವಿರುದ್ಧ ಆತ್ಯಾಚಾರ ಆರೋಪ ಕೇಳಿ ಬಂದಿದೆ.  ಗದಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಬ್ಬಳ್ಳಿಗೆ ಕರೆದೊಯ್ದು ಸಿಕಂದರ್ ಅತ್ಯಾಚಾರ ಮಾಡಿದ್ದ ಅನ್ನೋ ಆರೋಪ ಇದೆ. 42 ವರ್ಷದ ಸಿಕಂದರ್, ತಮ್ಮ ಜಮೀನಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿ ಮೇಲೆ ಆರು ತಿಂಗಳಿಂದ ನಿರಂತರ ಅತ್ಯಾಚಾರ ಮಾಡಿದ್ದಾನಂತೆ. ಮದ್ವೆಯಾಗೋದಾಗಿಯೂ ಬಾಲಕಿಗೆ  ನಂಬಿಸಿದ್ದ ಎನ್ನಲಾಗಿದೆ. ತಂದೆ ತಾಯಿ ಇಲ್ಲದ ಅನಾಥ ಬಾಲಕಿಯನ್ನ ಪುಸಲಾಯಿಸಿ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ.

ಸಂತ್ರಸ್ತೆ ಕುಟುಂಬದವರೆದುರು ಕಾಮುಕನ ನಾಟಕ!
ಕಳೆದ ಏಪ್ರಿಲ್ 17 ತಾರೀಕು ಬಾಲಕಿ ನಾಪತ್ತೆಯಾಗಿದ್ಲು. ಹುಬ್ಬಳ್ಳಿಯ ಸಂಬಂಧಿಕರ ಮನೆಗೆ ಕರೆಯೊಯ್ದು ಸಿಕಂದರ್ ಅತ್ಯಾಚಾರ ಮಾಡಿದ್ದ. ನಂತ್ರ ಸಂತ್ರಸ್ತೆಯ ಕುಟುಂಬದೊಂದಿಗೆ ಪೊಲೀಸ್  ಸ್ಟೇಷನ್ ಗೆ ಬಂದು, ಬಾಲಕಿ ನಾಪತ್ತೆಯಾದ ಬಗ್ಗೆ ಕಂಪ್ಲೀಟ್ ಕೊಟ್ಟಿದ್ದ ಅಂತಾ ಸಂತ್ರಸ್ತೆ ಕುಟುಂಬದ ಮೂಲಗಳು ತಿಳಿಸಿವೆ. 

ಎಪ್ರಿಲ್ 17ನೇ ತಾರೀಕು ಸಂತ್ರಸ್ತೆಯ ಕುಟುಂಬಸ್ಥರನ್ನ ಭೇಟಿಯಾಗಿ ಎರಡು ದಿನ ಕಾಯಿರಿ ಬಾಲಕಿ, ಸ್ನೇಹಿತೆಯರೊಡನೇ ಎಲ್ಲೋ ಹೋಗಿರಬಹುದು ಮನೆಗೆ ಪಾವಾಸ್ ಬರುತ್ತಾಳೆ ಅಂತಾ ಹೇಳಿದ್ದ.  ಇದ್ರಿಂದ ಸಂತ್ರಸ್ತೆ ಕುಟುಂಬಸ್ಥರು ಸುಮ್ಮನಾಗಿದ್ರು. 25 ನೇ ತಾರೀಕು ಸೋಮವಾರ ಸಂತ್ರಸ್ತೆ ಸಂಬಂಧಿಕರ ಮನೆಗೆ ವಾಪಾಸ್ ಆಗಿದ್ಲು. ಬಾಲಕಿ ಹೇಳಿಕೆ ಪಡೆದಾಗಲೇ ಸಿಕಂದರ್ ಹೀನ ಕೃತ್ಯದ ಬಗ್ಗೆ ಕುಟುಂಬಸ್ಥರಿಗೆ, ಪೊಲೀಸರಿಗರ ಮಾಹಿತಿ ಸಿಕ್ಕದೆ‌. 

 ಧಾರವಾಡ L&T COMPANY ಕಂಪೆನಿ ವಿರುದ್ಧ ದೀಪಕ್ ಚಿಂಚೋರೆ ಕಿಡಿ

ಸಿಸಿ ಪಾಟೀಲರಿಗೆ ಫೋನ್ ಮಾಡ್ಲಾ ಎಂದು ಆವಾಜ್ ಹಾಕಿದ್ದ!: ಪ್ರಕರಣ ಗಂಭೀರ ರೂಪ ಪಡೆಯುತ್ತಿದ್ದಂತೆ ಸೋಮವಾರ 25 ನೇ ತಾರೀಕು ಬಾಲಕಿಯನ್ನು  ಸಿಕಂದರ್ ಬಿಟ್ಟು ಕಳುಹಿಸಿದ್ದ.  ಬಾಲಕಿಯ ಹೇಳಿಕೆ ಪಡೆದು ಪೊಲೀಸರು ಸಿಕಂದರ್ ನನ್ನ ಪೊಲೀಸ್ ಠಾಣೆಗೆ ಕರೆಸಿದ್ರು. ಠಾಣೆಯಲ್ಲಿ ಕೆಲ ಕಾಲ ಹೈಡ್ರಾಮಾ ಮಾಡಿದ್ದ ಸಿಕಂದರ್, ನನಗೆ ಸಚಿವ ಸಿಸಿ ಪಾಟೀಲರು ಗೊತ್ತು, ಫೋನ್ ಮಾಡ್ಲಾ ಅಂತಾ ರಗಳೆ ಮಾಡ್ತಿದ್ನಂತೆ. ಸಿಕಂದರ್ ಪುಂಡಾಟಿಕೆಗೆ ಸೊಪ್ಪು ಹಾಕದ ಪೊಲೀಸರು ಕೇಸ್ ಹಾಕಿ ಸಂಜೆ ವಶಕ್ಕೆ ಪಡೆದಿದ್ದಾರೆ.

Chikkamagaluru ಮತ್ತೊಬ್ಬ ಬೆಳಗಾವಿ ಮೂಲದ ಗುತ್ತಿಗೆದಾರರನ ಮೇಲ್ವಿಚಾರಕ ಲಾಡ್ಜ್ ನಲ್ಲಿ 

ಸಚಿವ ಸಿಸಿ ಪಾಟೀಲರ ಆಪ್ತನಾಗಿದ್ದ ಸಿಕಂದರ್: ತಾಲೂಕು ಪಂಚಾಯ್ತು ಚುನಾವಣೆಯಲ್ಲಿ ಸಿಕಂದರ್ ಪತ್ನಿ ಸ್ಪರ್ಧಿಸಿ ಜಯಗಳಿಸಿದ್ರು.. ನರಗುಂದ ವಲಯದಲ್ಲಿ ಸಿಕಂದರ್ ತನ್ನದೇ ಪ್ರಭಾವ ಹೊಂದಿದ್ದ.. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ವತಃ ಸ್ಪರ್ಧಿಸಿ ಸೋಲುಂಡಿದ್ದ. ಹೀಗಿದ್ರೂ ಸಚಿವರ ಆಪ್ತ ವಲಯದಲ್ಲಿ ಸಿಕಂದರ್ ಗುರುತಿಸಿಕೊಂಡಿದ್ದ. 

ಬಿಜೆಪಿ ಪ್ರಭಾವಿ ಮುಖಂಡರೊಬ್ಬರ ಪಿಎ ಪೊಲೀಸ್ ಸ್ಟೇಷನ್ ಗೆ ತೆರಳಿದ್ದ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ.. ಆದ್ರೆ, ಪೊಲೀಸರು ಈ ಬಗ್ಗೆ ಅಲ್ಲಗಳೆದಿದ್ದು, ಅಪರಾಧಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳೋದಾಗಿ ಪೊಲೀಸ್ ಮೂಲಗಳು ಹೇಳಿವೆ.

ಕಠಿಣ ಶಿಕ್ಷಗೆ ಆಗ್ರಹ:  ಸದ್ಯ ಆರೋಪಿ ಸಿಕಂದರ್ ವಿರುದ್ಧ ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಹೀನ ಕೃತ್ಯ ಮಾಡಿರೋ ಸಿಕಂದರ್ ಗೆ ಕಠಿಣ ಶಿಕ್ಷೆಯಾಗ್ಬೇಕು ಅಂತಾ ಸಂತ್ರಸ್ತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ..

click me!