ವರದಿ : ಆಲ್ದೂರು ಕಿರಣ್ , ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಎ.28): ರಾಜ್ಯಾದ್ಯಂತ ಸದ್ದು ಮಾಡಿದ್ದ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ (santhosh patil) ಆತ್ಮಹತ್ಯೆ ಬೆನ್ನಲ್ಲೇ ಕಾಫಿನಾಡು ಚಿಕ್ಕಮಗಳೂರು (Chikkamagalauru) ಜಿಲ್ಲೆಯಲ್ಲಿ ಬೆಳಗಾವಿ ಮೂಲದ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾವಿಗೆ ಶರಣಾಗಿರುವ ವ್ಯಕ್ತಿ ಗುತ್ತಿಗೆದಾರನ ಮೇಲ್ವಿಚಾರಕ ಎಂದು ತಿಳಿದುಬಂದಿದ್ದು ಸಾಲಬಾದೆ, ಸರಿಯಾದ ಸಮಯಕ್ಕೆ ಸಂಬಳ ಬಾರದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
undefined
ಬೆಳಗಾವಿ ಮೂಲದ ಮೇಲ್ವಿಚಾರಕ ಕಾಫಿನಾಡಿನಲ್ಲಿ ಆತ್ಮಹತ್ಯೆ: ಬೆಳಗಾವಿ (Belagavi) ಮೂಲದ ಗುತ್ತಿಗೆದಾರನ ಬಳಿ ಕಾಮಗಾರಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುನವಳ್ಳಿ ಗ್ರಾಮದ ಬಸವರಾಜ್ ಲಿಂಗಪ್ಪ (47) (Lingappa) ಮೃತ ದುರ್ದೈವಿ ಬಾಳೆಹೊನ್ನೂರಿನಲ್ಲಿ ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿದ್ದಾನೆ. ಲಾಡ್ಜ್ ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಸ್ಥಳಕ್ಕೆ ಬಾಳೆಹೊನ್ನೂರಿನ ಪೊಲೀಸ್ರು ಭೇಟಿ ಪರಿಶೀಲನೆ ನಡೆಸಿದ್ದಾರೆ.
MAN FACED SHIELD BUG ಉಡುಪಿಯಲ್ಲಿ ಮಾನವ ಮುಖದ ಹಾರುವ ಕೀಟ ಪತ್ತೆ!
ಬೆಳಗಾವಿ ಮೂಲದ ಗುತ್ತಿಗೆದಾರರ ಬಳಿ ಮೇಲ್ವಿಚಾರಕನಾಗಿ ಕಳೆದ 6 ವರ್ಷಗಳ ಕಾಲ ಕೆಲಸ ಮಾಡಿದ ಬಳಿಕ ಬಾಳೆಹೊನ್ನೂರಿಗೆ ಆಗಮಿಸಿದ್ದರು. ಬಾಳೆಹೊನ್ನೂರಿಗೆ ಕಳೆದ 6 ತಿಂಗಳ ಹಿಂದೆ ಆಗಮಿಸಿ ಇಲ್ಲಿಯೂ ಗುತ್ತಿಗೆದಾರರ ಬಳಿ ಮೇಲೆಚಾರಕನಾಗಿ ಕೆಲಸ ಮಾಡುತ್ತಿದ್ದರು. ಕಳೆದ 6 ತಿಂಗಳಿನಿಂದ ಬಾಳೆಹೊನ್ನೂರಿನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಬೆಳೆಗಾವಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಕೈ ಸಾಲದ ಜೊತೆಗೆ ಹಲವು ಬ್ಯಾಂಕಿನಲ್ಲಿ ಸಾಲ ಮಾಡಿಕೊಂಡಿದ್ದರು.ಅಲ್ಲದೆ ಬೆಳೆಗಾವಿ ಗುತ್ತಿಗೆದಾರರು ಆರು ವರ್ಷದ ಸಂಬಳ ನೀಡದ ಹಿನ್ನಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.
ಆತ್ಮಹತ್ಯೆಗೂ ಮುನ್ನ ಡೆತ್ ನೋಟ್: ಬಸವರಾಜ ಲಿಂಗಪ್ಪ ಆತ್ಮಹತ್ಯೆಗೆ ಶರಣಾಗುವ ಮುನ್ನ ಸಾವಿನ ಬಗ್ಗೆ ಡೆತ್ ನೋಟ್ ಬರೆದಿಟ್ಟಿದ್ದಾರೆ. ಡೆತ್ ನೋಟ್ ನಲ್ಲಿ ಕೈ ಸಾಲದ ಜೊತೆಗೆ ಸಂಬಳವನ್ನು ನೀಡದೆ ಇರುವ ಬಗ್ಗೆ ನೋವಿನ ಮಾತುಗಳನ್ನು ಆಡಿದಿದ್ದಾರೆ. ಡೆತ್ ನೋಟ್ ನ್ನು ವಶಕ್ಕೆ ಪಡೆದಿರುವ ಬಾಳೆಹೊನ್ನೂರು ಪೊಲೀಸ್ರು ತನಿಖೆ ಆರಂಭಿಸಿದ್ದಾರೆ. ಡೆತ್ ನಲ್ಲಿ ಪತ್ನಿ ರತ್ನ, ಮಕ್ಕಳಾದ ಸಾಯಿಕುಮಾರ್ , ಹೇಮಂತ್ ಕುಮಾರ್ ಗೆ ನೋವಿನ ವಿವಾದವನ್ನು ಹೇಳಿದ್ದಾರೆ.
KEA Exam Paper Leak ರಿಜಿಸ್ಟ್ರಾರ್ ರನ್ನು ಕೆವಿವಿಯಿಂದ ಕೈಬಿಡಲು ಎಬಿವಿಪಿ ಆಗ್ರಹ
ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ: ಮೃತ ಬಸವರಾಜದ ಕುಟುಂಬ ಬೆಳಗಾವಿಯಿಂದ ಆಗಮಿಸಿದ ಬಳಿಕ ಬಾಳೆಹೊನ್ನೂರಿನ ಖಾಸಗಿ ಲಾಡ್ಜ್ ನಲ್ಲಿ ಇದ್ದ ಶವವನ್ನು ಬಾಳೆಹೊನ್ನೂರಿನ ಆಸ್ಪತ್ರೆಗೆ ಸಾಗಿಸಿ ಶವಪರೀಕ್ಷೆಯನ್ನು ನಡೆಸಲಾಯಿತು. ತದನಂತರ ಮೃತದೇಹವನ್ನು ಪೊಲೀಸರು ಕುಟುಂಬದವರಿಗೆ ಹಸ್ತಾಂತರ ಮಾಡಿದರು. ಪ್ರಕರಣ ದಾಖಲು ಮಾಡಿಕೊಂಡಿರುವ ಬಾಳೆಹೊನ್ನೂರಿನ ಪೊಲೀಸರು ತನಿಖೆ ಆರಂಭಿಸಿದ್ದಾರೆ.