'ಮದ್ವೆ ಅಂತ ಬಂದಾಗ ಜಾತಿ, ಧರ್ಮದವರನ್ನೇ ಆಯ್ಕೆ ಮಾಡ್ಕೊಳ್ಳಿ, ಇಲ್ಲಂದ್ರೆ ನನಗಾದ ಸ್ಥಿತಿ ನಿಮ್ಗೂ ಆಗುತ್ತೆ'

By Suvarna News  |  First Published Mar 19, 2022, 5:02 PM IST

* ಮದುವೆ ಅಂತ ಬಂದಾಗ ನಮ್ಮ ಜಾತಿ, ಧರ್ಮದವರನ್ನೇ ಮದುವೆಯಾಗುವುದು ಸುರಕ್ಷಿತ
* ಹಿಂದೂ ಯುವತಿಯರಿಗೆ ಅಪೂರ್ವಾ ಪುರಾಣಿಕ್ ಸಲಹೆ ನೀಡಿದ 
* ಮುಸ್ಲಿಂ ವ್ಯಕ್ತಿ ಜತೆ ಮದ್ವೆಯಾಗಿ ಹಲ್ಲೆಗೊಳಗಾಗಿರುವ ಗದಗನ ಅಪೂರ್ವ


ಗದಗ, (ಮಾ.19) : ಪತಿಯಿಂದ ಅಮಾನವೀಯವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದ ಅಪೂರ್ವಾ ಪುರಾಣಿಕ್ ಅವರು ಹಿಂದೂ ಯುವತಿಯರಿಗೆ ಸಂದೇಶ ನೀಡಿರೋ ವಿಡಿಯೋ ಭಾರೀ ವೈರಲ್ ಆಗಿದೆ.ಲವ್ ಜಿಹಾದ್ ಹಿನ್ನೆಲೆಯಲ್ಲಿ ಕೊಲೆಯತ್ನ ನಡೆದಿದೆ ಅನ್ನೋ ಬಗ್ಗೆ ಅಪೂರ್ವಾ ಈ ಹಿಂದೆ ಸ್ಪೋಟಕ ಹೇಳಿಕೆ ನೀಡಿದ್ರು.

 ಸದ್ಯ, 1 ನಿಮಿಷ 10 ಸೆಕೆಂಡ್ ನ ವಿಡಿಯೋ ತುಣುಕೊಂದು ಇಂಟರ್ ನೆಟ್ ನಲ್ಲಿ ವೈರಲ್ ಆಗಿದ್ದು, ಹಿಂದೂ ಸಮಾಜದ ಮಹಿಳೆಯರಿಗೆ, ಯುವತಿಯರಿಗೆ ಅಪೂರ್ವಾ ಪುರಾಣಿಕ್ ಈ ವಿಡಿಯೋ ಮೂಲಕ ಸಲಹೆ ನೀಡಿದ್ದಾರೆ.‌.

Tap to resize

Latest Videos

ಲವ್ ಮ್ಯಾರೇಜ್, 23 ಸಲ ಮಚ್ಚು ಬೀಸಿ ಕೊಲ್ಲಲೆತ್ನಿಸಿದ ಪತಿಯ ಮುಖವಾಡ ಬಿಚ್ಚಿಟ್ಟ ಪತ್ನಿ

ತಂದೆ ತಾಯಿ ಮಾತು ಕೇಳಬೇಕು ಅಂತಾ ಹೇಳಿಕೊಂಡಿರುವ ಅಪೂರ್ವಾ, ಮದುವೆ, ಸಂಗಾತಿಯ ವಿಷಯ ತೆಲೆಯಲ್ಲಿ ಬಂದಾಗ, ಜೀವನದ ನಿರ್ಧಾರ ತೆಗೆದುಕೊಳ್ಳುವ ಮುನ್ನ ತಂದೆ ತಾಯಿ ಜೊತೆ ಚರ್ಚಿಸಿ..  ನಿಮ್ಮಲ್ಲಿ ಸಣ್ಣ ಬದಲಾವಣೆ ಕಂಡುಬಂದರೂ ಪೋಷಕರಿಗೆ ತಿಳಿಸಿ. ಇಂಥ ವಿಷಯ ಮನೆಯಲ್ಲಿ ಹೇಳಿದಾಗ ಕಾಲೇಜು ಬಿಡಿಸುತ್ತಾರೆ. ಮನೆಯಲ್ಲಿ ಕೂರಿಸುತ್ತಾರೆ ಅನ್ನೋದನ್ನ ತಲೆಯಿಂದ ತೆಗೆಯಬೇಕು..

ಒಂದುವೇಳೆ ಯಾರಿಗೂ ಹೇಳದೇ ತಪ್ಪು ನಿರ್ಧಾರ ತೆಗೆದುಕೊಂಡಲ್ಲಿ ನನಗಾದ ಪರಿಸ್ಥಿತಿ ನಿಮಗೂ ಆಗುತ್ತೆ ಅನ್ನೋ ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ.‌. 

ಹಿಂದೂ ಧರ್ಮದವಳಾಗಿ ಹೇಳ್ತೀನಿ. ಬೇರೆ ಧರ್ಮವನ್ನ ದ್ವೇಷಿಸುವ ಅಗತ್ಯ ಇಲ್ಲ. ಆದ್ರೆ, ಮದ್ವೆ ಅಂತಾ ಬಂದಾಗ ಜಾತಿ, ಧರ್ಮದವರನ್ನೇ ಆಯ್ಕೆ ಮಾಡಿಕೊಳ್ಳುವುದು ಸುರಕ್ಷಿತ ಎಂದಿದ್ದಾರೆ.

Love Jihad: ಗದಗದ  ಅಪೂರ್ವ ಪುರಾಣಿಕ್ ಅಲಿಯಾಸ್ ಅರ್ಫಾ ಬಾನು ಕಣ್ಣೀರ ಗೋಳು

 ಅನ್ಯಧರ್ಮೀಯರನ್ನ ಆಯ್ಕೆ ಮಾಡಿಕೊಂಡಲ್ಲಿ ಅವರ ಸಂಸ್ಕಾರ, ನಮ್ಮ ಸಂಸ್ಕಾರ ಬೇರೆ ಬೇರೆಯಾಗಿರುತ್ತೆ.. ಹೊಂದಿಕೊಳ್ಳುವುದು ಕಷ್ಟ ಆಗುತ್ತೆ ಅಂತಾ ಹೇಳಿದ್ದಾರೆ.. 'ಹಿಂದೂ ಧರ್ಮ ಬೆಳೆಸಲು ನಮ್ಮ ಜಾತಿಯವರನ್ನೇ ಮದ್ವೆಯಾಗ್ಬೇಕೆಂದು ಅವರು ಹೇಳಿಕೊಂಡಿದ್ದಾರೆ..  

ಅಪೂರ್ವಾ ಮೇಲೆ ಹಲ್ಲೆಯಾಗಿದ್ದ ಯಾವಾಗ ಎಲ್ಲಿ..?
ನಗರದ ಲಾಯನ್ಸ್ ಸ್ಕೂಲ್ ಮೈದಾನದಲ್ಲಿ ಸ್ಕೂಟಿ ಕಲೆಯುವ ಸಂಧರ್ಬದಲ್ಲಿ ಮಾರ್ಚ್ 10 ರ ಬೆಳಗ್ಗೆ 6:30 ರ ಸುಮಾರಿ ಪತಿಯಿಂದ ಹಲ್ಲೆಗೊಳಗಾಗಿ ಅಪೂರ್ವಾ ಆಸ್ಪತ್ರೆ ಸೇರಿದ್ರು.. 

ಗಂಡ ಇಜಾಜ್ ಆಕೆಯನ್ನ ಮಚ್ಚಿನಿಂದ 23 ಬಾರಿ ಕೊಚ್ಚಿ ಕೊಲ್ಲಲು ಯತ್ನಿಸಿದ್ದ.. ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಪ್ರಾರ್ಥಮಿಕ ಚಿಕಿತ್ಸೆಯ ನಂತ್ರ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಸದ್ಯ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಅಪೂರ್ವಾ ಚಿಕಿತ್ಸೆ ಪಡೀತಿದ್ದಾರೆ.‌

ಇನ್ನು ಅಪೂರ್ವ ಇಂದು(ಭಾಣುವಾರ) ಆಸ್ಪತ್ರೆಯಲ್ಲೇ ಮಹಿಳಾ ಸಂಘಟನೆ ಮುಂದೆ ತಮ್ಮ ನೋವು ತೋಡಿಕೊಂಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದೆವು. ಅವನಿಗೆ ಮೊದಲೇ ಮದುವೆಯಾಗಿದ್ದು, ನನಗೆ ಗೊತ್ತಿರಲಿಲ್ಲ. ನನಗೂ ಮೋಸ ಮಾಡಿ, ಅವನ ಹೆಂಡತಿಗೂ ಮೋಸ ಮಾಡಿದ್ದಾನೆ. ಅವನು ಬದುಕಲು ಯೋಗ್ಯನಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನೆಯಲ್ಲಿ ನಮ್ಮ ತಾಯಿ ಅವನಿಗೆ ಮದುವೆಯಾಗಿದೆ ಎಂದು ಹೇಳಿದ್ದರು. ಆ ನಡುವೆ ಆತನ ಹೆಂಡತಿ ಬಂದು ಭೇಟಿಯಾಗಿದ್ದಳು. ಆದರೆ, ಆಕೆ ನನ್ನ ಹೆಂಡತಿ ಅಲ್ಲ. ಆಕೆ ಸುಳ್ಳು ಹೇಳಿದ್ದಾಳೆ ಎಂದು ನಂಬಿಸಿದ್ದ.ಸಣ್ಣ ಕಾರಣಕ್ಕೂ ನನ್ನನ್ನು ಹೊಡೆಯುವುದು, ಬಡಿದು ಮಾನಸಿಕ ಕಿರುಕುಳ ನೀಡುತ್ತಿದ್ದ.

ಕೆಟ್ಟ ಕೆಟ್ಟ ಪದಗಳಿಂದ ಬೈಯ್ಯುತ್ತಿದ್ದು, ಈಕೆಗೆ ಯಾರೂ ಗತಿ ಇಲ್ಲ ಎಂದು ಕಿರುಕುಳ ನೀಡುತ್ತಿದ್ದ ಎಂದು ಸಂತ್ರಸ್ತೆ ಅಳಲು ತೋಡಿಕೊಂಡರು. ನನಗೆ ಅಷ್ಟ ಪ್ರಪಂಚ ಜ್ಞಾನ ಇರಲಿಲ್ಲ. ಹೀಗಾಗಿ ಇಂತ ನೀಚನನ್ನು ಮದುವೆಯಾಗಬೇಕಾಯಿತು. ಈಗ ಅದರ ಅರಿವಾಗಿದೆ ಎಂದು ಅಪೂರ್ವ ನೋವು ತೋಡಿಕೊಂಡಿದ್ದಾರೆ.

click me!