ಮಂಗಳೂರು To ಬಿಹಾರ್: ಲವ್ ಜರ್ನಿಗೆ ಹಿಂದೂ ಸಂಘಟನೆ ಬ್ರೇಕ್!

Published : Mar 19, 2022, 04:43 PM IST
ಮಂಗಳೂರು To ಬಿಹಾರ್: ಲವ್ ಜರ್ನಿಗೆ ಹಿಂದೂ ಸಂಘಟನೆ ಬ್ರೇಕ್!

ಸಾರಾಂಶ

* ಮಂಗಳೂರು To ಬಿಹಾರ್ ಲವ್ ಕಹಾನಿ * ಲವ್ ಜರ್ನಿಗೆ ಹಿಂದೂ ಸಂಘಟನೆ ಬ್ರೇಕ್ * ಸಂಶಯಾಸ್ಪದ ರೀತಿಯಲ್ಲಿ ಮಂಗಳೂರಿನತ್ತ ಹೊರಟ್ಟಿದ್ದ ಯುವಕ ಮತ್ತು ವಿವಾಹಿತ ಯುವತಿ

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ‌ಮಂಗಳೂರು


ಮಂಗಳೂರು, (ಮಾ.19): ಬಿಹಾರ ಮೂಲದ ಯುವಕನ ಜೊತೆ ಮಂಗಳೂರಿನ ಮಿಜಾರಿನ ಹಿಂದೂ ವಿವಾಹಿತ ಮಹಿಳೆಯೋರ್ವಳು  ಪ್ರಯಾಣಿಸುತ್ತಿದ್ದ ವೇಳೆ ಯುವಕ ಅನ್ಯಕೋಮಿಗೆ ಸೇರಿದವನೆಂಬ ಅನುಮಾನದ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರು ಬಸ್ ತಡೆದು ಜೋಡಿಗಳನ್ನು ಕೆಳಗಿಸಿದ ಘಟನೆ ಮಂಗಳೂರಿನ ಗುರುಪುರ ಬಳಿ ನಡೆದಿದೆ.

ಖಾಸಗಿ ಬಸ್ಸೊಂದರಲ್ಲಿ ಮೂಡಬಿದ್ರಿಯಿಂದ ಮಂಗಳೂರಿನತ್ತ ಸಂಶಯಾಸ್ಪದ ರೀತಿಯಲ್ಲಿ  ಯುವಕ ಮತ್ತು ವಿವಾಹಿತ ಯುವತಿ ಪ್ರಯಾಣಿಸುತ್ತಿರುವ ಬಗ್ಗೆ ಗುರುಪುರದ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ರವಾನೆಯಗಿದೆ. ಅದರಂತೆ  ಗುರುಪುರ ಅಲೈಗುಡ್ಡೆಯಲ್ಲಿ ಬಸ್‍ನಿಂದ ಜೋಡಿಯನ್ನು ಕೆಳಗಿಳಿಸಿದ ಗುರುಪುರದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಯುವಕನ ಪೂರ್ವಾಪರವನ್ನು ವಿಚಾರಿಸಿದಾಗ ಸಮರ್ಪಕ ಮಾಹಿತಿ ಸಿಗಲಿಲ್ಲ.

ಶಿವಮೊಗ್ಗ :  ಆರೈಕೆ ಇಲ್ಲ.. ಅನ್ಯ ಕೋಮಿನ ಯುವಕನ ಮದುವೆ... ಮಗುವಿಗೆ ಜನ್ಮ ನೀಡಿ ಸಾವು

ಆತ ವಿಳಾಸ ಕೂಡ ನೀಡದೆ ಅನುಮಾನಾಸ್ಪದವಾಗಿ ವರ್ತಿಸಿದ್ದು, ಈ ಬಗ್ಗೆ ಬಜಪೆ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.  ಸ್ಥಳಕ್ಕೆ ಆಗಮಿಸಿದ ಪೊಲೀಸರು ಜೋಡಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಈ ಮಧ್ಯೆ ಯುವತಿ ನೀಡಿದ ಹೇಳಿಕೆಯಂತೆ ಆಕೆಯ ಪತಿ ಹಾಗೂ ಮನೆಯವರಿಗೆ ಮಾಹಿತಿ ನೀಡಲಾಗಿದೆ.

ಮುಂಬೈಯಲ್ಲಿದ್ದ ಯುವತಿಗೆ ಬಿಹಾರದ ಲವ್!
ಈ ಹಿಂದೆ ಮುಂಬೈನಲ್ಲಿದ್ದ ಯುವತಿಗೆ ಬಿಹಾರದ ಪ್ರಮೋದ್ ಯಾದವ್ ಎಂಬುವನೊಂದಿಗೆ ಪ್ರೀತಿ ಬೆಳೆದಿತ್ತು. ಆನಂತರದಲ್ಲಿ ಯುವತಿಗೆ ಬೆಂಗಳೂರಿನ ಯುವಕನೊಂದಿಗೆ ವಿವಾಹವಾಗಿದ್ದು, ಆತ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಯುವತಿ ಮಂಗಳೂರು ತಾಲೂಕಿನ ಮಿಜಾರು ಎಂಬಲ್ಲಿಯವಳಾಗಿದ್ದು, ವಿವಾಹದ ಬಳಿಕವೂ ಬಿಹಾರದ ಯುವಕ ಮತ್ತು  ಯುವತಿಯ ಪ್ರೇಮ್ ಕಹಾನಿ ಮುಂದುವರಿದಿತ್ತು. 

ಲವ್ ಮ್ಯಾರೇಜ್, 23 ಸಲ ಮಚ್ಚು ಬೀಸಿ ಕೊಲ್ಲಲೆತ್ನಿಸಿದ ಪತಿಯ ಮುಖವಾಡ ಬಿಚ್ಚಿಟ್ಟ ಪತ್ನಿ

ಇದರ ಫಲವಾಗಿ ಯುವಕ ಮೂಡಬಿದ್ರಿಗೆ ಆಗಮಿಸಿ ಯುವತಿಯೊಂದಿಗೆ ಸುತ್ತಾಟಕ್ಕೆ ಮಂಗಳೂರಿನ ಬಸ್ಸನ್ನೇರಿದ್ದ ಎಂದು ಬಜಪೆ ಪೋಲೀಸರು ಮಾಹಿತಿ ನೀಡಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಇವರ ಸುತ್ತಾಟಕ್ಕೆ ಬ್ರೇಕ್ ಹಾಕಿದ್ದು, ಈ ಜೋಡಿ ಮಂಗಳೂರಿಗೆ ಹೋಗುತ್ತೀತ್ತೇ ಅಥವಾ ಮಂಗಳೂರಿನಿಂದ ಬಿಹಾರಕ್ಕೆ ಹೋಗುವ ಯೋಜನೆಯನ್ನು ಹಮ್ಮಿಕೊಂಡಿತ್ತೇ ಎಂದು ವಿಚಾರಣೆ ಬಳಿಕ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ಶಿವಮೊಗ್ಗ(ಮಾ. 17)  ಅನ್ಯ ಕೋಮಿನ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದವಳು ದುರಂತ ಅಂತ್ಯ ಕಂಡಿದ್ದಾಳೆ. ಹೆರಿಗೆಯಾದ ಐದೇ ದಿನಕ್ಕೆ ಸಾವಿನ ಮನೆ  (Death) ಸೇರಿದ್ದಾಳೆ. 

ಪರಸ್ಪರ ಪ್ರೀತಿಸಿ (Love) ಅಂತರ್ ಧರ್ಮೀಯ ವಿವಾಹವಾಗಿದ್ದ ಗೃಹಿಣಿಯೋರ್ವಳು ಶಿವಮೊಗ್ಗ ಸೊರಬದಲ್ಲಿ ಹೆರಿಗೆಯಾದ ಐದೇ ದಿನದಲ್ಲಿ ಮೃತಪಟ್ಟಿದ್ದಾಳೆ.  ಭೂಮಿಕಾ ಅಲಿಯಾಸ್ ಮುಸ್ಕಾನ್  ಭಾನು(19)  ದುರಂತ ಅಂತ್ಯ ಕಂಡಿದ್ದಾಳೆ. ಭೂಮಿಕಾ ಸಾವಿಗೆ ಲವ್ ಜಿಹಾದ್ (Love Jihad)ಕಾರಣ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. 

2 ವರ್ಷದ ಹಿಂದೆ ಆಯನೂರಿನಿಂದ ಸೊರಬದಲ್ಲಿರುವ (Soraba) ಅಜ್ಜಿ ಮನೆಗೆ ಯುವತಿ ತೆರಳಿದ್ದಳು.  ದ್ವಿತೀಯ ಪಿಯುಸಿ ಓದುತ್ತಿದ್ದ ವೇಳೆ ಸಮೀರ್ ಜತೆ ಪ್ರೀತಿಗೆ ಬಿದ್ದಿದ್ದಾಳೆ. ಇಬ್ಬರು ಮದುವೆಯಾಗಿದ್ದು  ಭೂಮಿಕಾಳ ಹೆಸರನ್ನು ಮುಸ್ಕಾನ್ ಭಾನು ಎಂದು ಬದಲಾಯಿಸಲಾಗಿದೆ.

ವೆಲ್ಡಿಂಗ್ ಕೆಲಸ ಮಾಡಿ ಕೊಂಡಿದ್ದ ಸಮೀರ್ ಗರ್ಭಿಣಿಯಾದ ಮುಸ್ಕಾನ್ ಭಾನುವನ್ನ ಚೆನ್ನಾಗಿ ನೋಡಿಕೊಂಡಿಲ್ಲದ ಕಾರಣ ಅಕೆ ಸಾವನ್ನಪ್ಪಿರುವುದಾಗಿ ಕುಟುಂಬ ಆರೋಪಿಸಿದೆ.  ಮುಸ್ಕಾನ್ ಬಾನು ಸಮೀರ್ ಜೊತೆಗಿನ ಮದುವೆ ರಿಜಿಸ್ಟಾರ್‌ ಮಾಡಿಸಲು ಮುಂದಾದ ಮುಸ್ಕಾನ್ ಬಾನು ಯಾನೆ ಭೂಮಿಕಳ  ಕುಟುಂಬ ಪ್ರಯತ್ನ ಮಾಡಿದರೂ ಅದು ಕೊನೆಗೂ ಸಾಧ್ಯವಾಗಿಲ್ಲ.

ಭೂಮಿಕಳನ್ನ ಡೆಲಿವರಿ ಮರುದಿನವೇ ಮಣಿಪಾಲಿಗೆ ಸೇರಿಸಲಾಗಿದ್ದು ಅಲ್ಲಿ ಅಸ್ವಸ್ಥಳಾಗಿದ್ದಾಳೆ. ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಭೂಮಿಕಾಳ ಮನೆಯವರಿಗೆ ಅಂತರ್ಜಾತಿಯ ಕಾರಣ ಮುಟ್ಟಲೂ ಬಿಟ್ಟಿಲ್ಲ ಎಂದು ಆಕೆಯ ಕುಟುಂಬ ಆರೊಪಿಸಿದೆ . ಭೂಮಿಕಾ ಮೃತಪಟ್ಟಿರುವ ವಿಷಯವನ್ನು ಸಮೀರ್ ಭೂಮಿಕಾ ಕುಟುಂಬಸ್ಥರಿಗೆ ತಿಳಿಸದೇ ಮುಚ್ಚಿಟ್ಟಿದ್ದ ಎಂಬ ಆರೋಪವೂ ಬಂದಿದೆ. 

ಗದಗದಿಂದ ವರದಿಯಾದ ಲವ್ ಜಿಹಾದ್ ಪ್ರಕರಣ:  ನನ್ನ ಮದುವೆ ಹಿಂದೆ ‘ಲವ್‌ ಜಿಹಾದ್‌’ ಉದ್ದೇಶ ಅಡಗಿತ್ತು. ಅತ್ಯಾಚಾರದ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡಿ ಮದುವೆಯಾದ. ಬುರ್ಕಾ, ಹಿಜಾಬ್‌ ಹಾಕಬೇಕು, ಮಾಂಸ ತಿನ್ನಬೇಕು, ನಮಾಜ್‌ ಮಾಡುವಂತೆ ಒತ್ತಾಯಿಸುತ್ತಿದ್ದ ಎಂದು ಪತಿ ಇಜಾಜ್‌ನಿಂದ 23 ಬಾರಿ ಮಚ್ಚಿನಿಂದ ಹಲ್ಲೆಗೆ ಒಳಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪೂರ್ವ ಪುರಾಣಿಕ್‌ ಅಲಿಯಾಸ್‌ ಅರ್ಫಾಬಾನು ತನ್ನ ಗಂಡನ ವಿರುದ್ಧ  ಗಂಭೀರ ಆರೋಪ ಮಾಡಿದ್ದರು.

ಕಾಲೇಜಿಗೆ ಆಗಾಗ ಇಜಾಜ್‌ ಆಟೋದಲ್ಲಿ ಹೋಗುತ್ತಿದ್ದೆ. ಒಂದು ದಿನ ಆತ ನನ್ನ ಮೇಲೆ ಅತ್ಯಾಚಾರ ಎಸಗಿದ. ಅದನ್ನು ವಿಡಿಯೋ ಮಾಡಿಟ್ಟುಕೊಂಡು ತಾಯಿ, ಕುಟುಂಬಸ್ಥರಿಗೆ ವಿಡಿಯೋ ತೋರಿಸುವುದಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಆರಂಭಿಸಿದ್ದ. ಅನಿವಾರ್ಯವಾಗಿ ಮದುವೆಯಾದೆ. ಆ ಬಳಿಕ ತನ್ನ ಮತ್ತೊಂದು ಮುಖ ತೋರಿಸಲು ಆರಂಭಿಸಿದ. ಮತಾಂತರ ಮಾಡಿಸಿದ, ಆತನ ಜನರಿರುವ ಓಣಿಗೆ ಕರೆದೊಯ್ದು ಅವರ ಸಂಸ್ಕೃತಿ ಪಾಲಿಸುವಂತೆ, ಮಾಂಸ ಸೇವಿಸುವಂತೆ, ಬುರ್ಕಾ, ಹಿಜಾಬ್‌ ಧರಿಸುವಂತೆ ಒತ್ತಾಯಿಸುತ್ತಿದ್ದ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!