ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ: ಮುರುಘಾಶ್ರೀ ವಿರುದ್ದ ಮತ್ತೊಂದು ಕೇಸ್

By Suvarna News  |  First Published Oct 19, 2022, 5:28 PM IST

Murugha Shree Row: ಈಗಾಗಲೇ ಪೋಕ್ಸೊ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶರಣರ ವಿರುದ್ಧ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ ಅಡಿ ದೂರು ದಾಖಲಾಗಿದೆ.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಅ. 19): ಈಗಾಗಲೇ ಪೋಕ್ಸೊ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶರಣರ (Murugha Shree) ವಿರುದ್ಧ ಇಂದು ಮತ್ತೊಂದು ದೂರು ದಾಖಲಾಗಿದೆ.  ಮುರುಘಾ ಶರಣರ ವಿರುದ್ಧ ದಾಖಲಾದ ಪ್ರಕರಣಗಳ ಸಂಬಂಧ ಅವರು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮಠದ ಆವರಣದಲ್ಲಿ ಇಬ್ಬರು ಬಾಲಕಿಯರು ಪತ್ತೆಯಾದ ಪ್ರಕರಣದಿಂದ ಇಂದು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮಠದಲ್ಲಿ ನಾಲ್ಕುವರೆ ವರ್ಷದ ಓರ್ವ ಬಾಲಕಿ, ಹದಿನಾರು ವರ್ಷದ ಓರ್ವ ಬಾಲಕಿ ಪತ್ತೆಯಾಗಿದ್ದರು. 

Latest Videos

undefined

ಮಡಿಲು ಯೋಜನೆಗೆ ಮಾಹಿತಿ ನೀಡದೆ ಅಕ್ರಮ ಎಸಗಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ಘಟಕಕ್ಕೂ ಮಾಹಿತಿ ನೀಡಿಲ್ಲ ಎಂದು ಮಕ್ಕಳ ರಕ್ಷಣಾ ಘಟಕದಿಂದ ಮುರುಘಾಶ್ರೀ ಕಾರ್ಯದರ್ಶಿ ಪರಮಶಿವಯ್ಯ ವಿರುದ್ಧ ದೂರು ದಾಖಲಾಗಿದೆ. ಆಗಸ್ಟ್ 26ರಂದು ಮಠದ ಆವರಣದಲ್ಲಿದ್ದ ಹಾಸ್ಟೆಲ್ ನಿಂದ ಮಕ್ಕಳನ್ನು ಶಿಫ್ಟ್ ಮಾಡುವಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಈ ಮೊದಲೇ ಮಧುಕುಮಾರ್ ಎಂಬುವವರು ದೂರು ಸಹ ನೀಡಿದ್ದರು. 

2ನೇ ಪೋಕ್ಸೋ ಕೇಸಲ್ಲಿ ಮುರುಘಾಶ್ರೀಗೆ ಸಂಕಷ್ಟ: ಮೈಸೂರಿಗೆ ತೆರಳಿ ಇಬ್ಬರು ಸಂತ್ರಸ್ತರ ಹೇಳಿಕೆ ದಾಖಲಿಸಿದ ಪೊಲೀಸರು

ಅಕ್ರಮ ಕೂಟ ಕಟ್ಟಿಕೊಂಡು ಜೈಲಿನಿಂದಲೇ ಮುರುಘಾಶ್ರೀ ಆಡಳಿತ?:  ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುಕುಮಾರ್ ಸಿಎಂ ಅವರಿಗೂ ಪತ್ರ ಬರೆದಿದ್ದಾರೆ.  ಜೊತೆಗೆ ಮಧುಕುಮಾರ್ ಎಂಬುವವರು ಸಿಎಂಗೂ ಈ ಪ್ರಕರಣದ ಸಂಬಂಧ ಪತ್ರ ಬರೆದಿದ್ದಾರೆ. ಅದಕ್ಕೆ ಮಠದ ಸಲಹಾ ಮಂಡಳಿ ಸದಸ್ಯರು ಖಾರವಾಗಿ ಉತ್ತರಿಸಿದ್ದಾರೆ.  ಮಠದ ಎಸ್ ಜೆ ಎಂ ವಿದ್ಯಾಪೀಠದ ಕಾರ್ಯದರ್ಶಿಯಾಗಿ ನಿವೃತ್ತ ನ್ಯಾ. ಎಸ್ ಬಿ ವಸ್ತ್ರದಮಠ್, ಮಠದ ಪೂಜಾ ಕೈಂಕರ್ಯಕ್ಕೆ ಬಸವಪ್ರಭು ಶ್ರೀ ನೇಮಕ ಅಕ್ರಮ. ಈ ಅಕ್ರಮ ಕೂಟ ಕಟ್ಟಿಕೊಂಡು ಜೈಲಿನಿಂದಲೇ ಮುರುಘಾಶ್ರೀ ಆಡಳಿತ ನಡೆದಿದೆ. ಇನ್ನು ಮಠದ ಆಸ್ತಿ ಮಾರಾಟ ಮಾಡಿ ಅಧಿಕಾರ ದುರ್ಬಳಕೆಯಾಗಿದೆ. ಮಠಕ್ಕೆ ಆಡಳಿತಾಧಿಕಾರಿ ನೇಮಿಸಲು ಕ್ರಮ ಕೈಗೊಳ್ಳಲು ಮನವಿ ಮಾಡಿ ಪತ್ರ ಬರೆಯಲಾಗಿದೆ. 

ಇನ್ನು ಈ ಪತ್ರ ಹಾಗೂ ಅದರಲ್ಲಿನ ಆರೋಪಗಳಿಗೆ ಉತ್ತರಿಸಿರುವ ಮುರುಘಾಮಠದ ನಿರ್ದೇಶಕ ಆನಂದಪ್ಪ ಈ ಆರೋಪ ಮಾಡಿರುವವರು ನನ್ನೆದುರು ಬಂದು ಮಾತನಾಡಲಿ. ಅವರು ಯಾರ ಜೊತೆಗೆ ಸೇರಿ ಈ ಆರೋಪಗಳನ್ನು ಮಾಡಿದ್ದಾರೆ ಎಂಬುದು ಗೊತ್ತಿದೆ. ಪೂಜಾ ಕೈಂಕರ್ಯದ ಉಸ್ತುವಾರಿ ಹಾಗೂ ಕಾರ್ಯದರ್ಶಿ ವಸ್ತ್ರದಮಠ್ ಅವರ ಆಯ್ಕೆ ಕಾನೂನಿನ ಪ್ರಕಾರವೇ ನಡೆದಿದೆ ಎಂದರು. 

ಮುರುಘಾ ಶರಣರ ಪೋಕ್ಸೊ ಪ್ರಕರಣ ದಿನೇ ದಿನೇ ಬೆಳೆದು ಸರಣಿಯಾಗುತ್ತಿದೆ. ಆರೋಪಗಳ ಸರಮಾಲೆಯು ಹೆಚ್ಚಾಗುತ್ತಿದೆ. ಇನ್ನು ಮಠದ ಉನ್ನತ ಮಂಡಳಿಯ ಸದಸ್ಯರು ಈ ಆರೋಪಗಳನ್ನು ನಿರಾಕರಿಸಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು, ಸಲ್ಲಿಸುತ್ತೇವೆ ಎಂದಿದ್ದಾರೆ. 

click me!