ಬೆಂಗಳೂರು: ಪೊಲೀಸ್‌ ಹೆಸರಲ್ಲೂ ಮೋಸ, ಮಹಿಳೆಗೆ ಟೋಪಿ ಹಾಕಿದ ಖದೀಮರು

By Kannadaprabha News  |  First Published Jan 23, 2024, 6:31 AM IST

ಭಾರ್ಗವಿ ರಾವ್‌ ಮೋಸ ಹೋಗಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಸಿಇಎನ್‌ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಬ್ಯಾಂಕ್‌ ಖಾತೆಗಳ ಮೂಲಕ ಹಣ ವರ್ಗಾವಣೆ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸಿದ್ದಾರೆ.


ಬೆಂಗಳೂರು(ಜ.23):  ಅಧಿಕ ಲಾಭದಾಸೆ ತೋರಿಸಿ ₹38 ಲಕ್ಷ ವಸೂಲಿ ಮಾಡಿದವರನ್ನು ಹಿಡಿಯುವುದಾಗಿ ಸೈಬರ್ ಕ್ರೈಂ ಪೊಲೀಸರ ಸೋಗಿನಲ್ಲೇ ಮಹಿಳೆಯೊಬ್ಬರಿಗೆ ಚಾಲಾಕಿ ವಂಚಕರು ಟೋಪಿ ಹಾಕಿದ್ದಾರೆ.

ಸ್ಯಾಂಕಿ ರಸ್ತೆಯ ಭಾರ್ಗವಿ ರಾವ್‌ ಮೋಸ ಹೋಗಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಸಿಇಎನ್‌ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಬ್ಯಾಂಕ್‌ ಖಾತೆಗಳ ಮೂಲಕ ಹಣ ವರ್ಗಾವಣೆ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸಿದ್ದಾರೆ.

Tap to resize

Latest Videos

ಬ್ಯಾಂಕ್‌ಗೆ ವಂಚನೆ ಪ್ರಕರಣ; ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಮತ್ತೊಂದು ಸಂಕಷ್ಟ!

ಕೆಲ ದಿನಗಳ ಹಿಂದೆ ಭಾರ್ಗವಿ ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ನಿಮಗೆ ಅರೆಕಾಲಿಕ ಉದ್ಯೋಗ ಕೊಡುವುದಾಗಿ ಹೇಳಿದ್ದಾನೆ. ಇದರಲ್ಲಿ ಸುಲಭವಾಗಿ ಲಕ್ಷ ಲಕ್ಷ ಹಣ ಸಂಪಾದಿಸಬಹುದು ಎಂದಿದ್ದ. ಈ ಮಾತಿಗೆ ಭಾರ್ಗವಿ ಸಮ್ಮತಿಸಿದಾಗ ಅವರಿಗೆ ಟೆಲಿಗ್ರಾಂ ಮೂಲಕ ಲಿಂಕ್ ಕಳುಹಿಸಿದ್ದ. ತಾವು ಕಳುಹಿಸಿದ ಕಂಪನಿಯ ಲಿಂಕ್ ಬಳಸಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದು ಎಂದು ಆಸೆ ತೋರಿಸಿದ್ದ. ಅಂತೆಯೇ ಆರೋಪಿ ಸೂಚಿಸಿದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ₹38.9 ಲಕ್ಷವನ್ನು ಅವರು ಸಂದಾಯ ಮಾಡಿದ್ದರು. ಇದಾದ ಬಳಿಕ ಭಾರ್ಗವಿ ಅವರಿಗೆ ಲಾಭಾಂಶ ನೀಡಿಲ್ಲ. ಹೀಗಿರುವಾಗ ಮತ್ತೆ ಅವರಿಗೆ ಕರೆ ಮಾಡಿದ ಕಿಡಿಗೇಡಿ, ನಾವು ಸೈಬರ್ ಕ್ರೈಂ ಪೊಲೀಸರು ಎಂದು ಪರಿಚಯಿಸಿಕೊಂಡಿದ್ದಾನೆ. ಆಗ ತಾವು ಕಳೆದುಕೊಂಡಿರುವ ಹಣವನ್ನು ಮರಳಿ ಕೊಡಿಸುವುದಾಗಿ ನಂಬಿಸಿ ಭಾರ್ಗವಿ ಅವರಿಂದ ₹40 ಸಾವಿರ ಸುಲಿಗೆ ಮಾಡಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.

click me!