ಟ್ಯೂಷನ್‌ಗೆ ಹೋಗಿದ್ದ 12 ವರ್ಷದ ಬಾಲಕ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ನಡೆದಿದೆ. ಪರಿನವ್ (12) ಟ್ಯೂಷನ್ ನಿಂದ ನಾಪತ್ತೆಯಾದ ಬಾಲಕ.
ಬೆಂಗಳೂರು (ಜ.22): ಟ್ಯೂಷನ್‌ಗೆ ಹೋಗಿದ್ದ 12 ವರ್ಷದ ಬಾಲಕ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ನಡೆದಿದೆ.
ಪರಿನವ್ (12) ಟ್ಯೂಷನ್ ನಿಂದ ನಾಪತ್ತೆಯಾದ ಬಾಲಕ. ವಿಜಯನಗರದ ಸುಖೇಶ್ ಹಾಗೂ ನಿವೇದಿತಾ ದಂಪತಿ ಪುತ್ರನಾಗಿರು ಬಾಲಕ. ಗುಂಜೂರಿನ ಡೆನ್ ಅಕಾಡೆಮಿ ಶಾಲೆಯಲ್ಲಿ 6 ನೇ ತರಗತಿ ಓದುತ್ತಿದ್ದ ಬಾಲಕ. ವೈಟ್ ಫೀಲ್ಧ್ ನ ಅಲೆನ್ ಎಂಬ ಟ್ಯೂಷನ್ ಸೆಂಟರ್‌ಗೆ ಹೋಗುತ್ತಿದ್ದ. ನಿನ್ನೆ ಬೆಳಗ್ಗೆ ಎಂದಿನಂತೆ ತಂದೆ ಮಗನನ್ನು ಅಲೆನ್ ಟ್ಯೂಷನ್ ಸೆಂಟರ್‌ಗೆ ಡ್ರಾಪ್ ಮಾಡಿ ಬಂದಿದ್ರು. ಆದರೆ ಮಧ್ಯಾಹ್ನ ಮತ್ತೆ ಪಿಕ್ ಮಾಡೋಕೆ ತಡವಾಗಿದ್ದು, ಅಷ್ಟರಲ್ಲಿ ನಾಪತ್ತೆಯಾಗಿರುವ ಬಾಲಕ. ನಿನ್ನೆ ಮಧ್ಯಾಹ್ನ 12.15 ರ ಸುಮಾರಿಗೆ ನಾಪತ್ತೆಯಾಗಿರುವ ಬಾಲಕ ಇದುವರೆಗೆ ಸುಳಿವು ಸಿಕ್ಕಿಲ್ಲ.
ಗಾಯಗೊಂಡ ವಿಷಪೂರಿತ ಹಾವಿಗೆ ಶಸ್ತ್ರಚಿಕಿತ್ಸೆ; ಬರೊಬ್ಬರಿ 40 ಕ್ಕೂ ಹೆಚ್ಚು ಹೊಲಿಗೆ ಹಾಕಿ ರಕ್ಷಿಸಿದ ವೈದ್ಯರು!
ಸಿಸಿಟಿವಿಯಲ್ಲಿ ಕಾಣಿಸಿಕೊಂಡಿರುವ ಬಾಲಕ:
ಟ್ಯೂಷನ್ ಮುಗಿಸಿಕೊಂಡು ಮಾರತ್ತಳ್ಳಿಯವರೆಗೂ ನಡೆದುಕೊಂಡು ಬಂದಿರುವ ಬಾಲಕ. ನಂತರ ಬಿಎಂಟಿಸಿ ಬಸ್ ಹತ್ತಿರೋದು ಸಿಸಿಟಿವಿ ದಾಖಲಾಗಿದೆ. ಆ ನಂತರ ಬಾಲಕ ಎಲ್ಲೂ ಪತ್ತೆಯಾಗಿಲ್ಲ.
ಘಟನೆ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿದ್ದು, ನಾಪತ್ರೆಯಾಗಿರುವ ಬಾಲಕನಿಗಾಗಿ ವೈಟ್‌ಫಿಲ್ಡ್ ಪೊಲೀಸರಿಂದ ಶೋಧ ಕಾರ್ಯ ಮುಂದುವರಿದಿದೆ.
ರಾಯಚೂರು: ಫೋನ್ ಪೇ ಮಾಡಿಸಿಕೊಂಡು ಲೋಕಾಯುಕ್ತ ಬಲೆಗೆ ಬಿದ್ದ ಜೆಸ್ಕಾಂ ಎಇಇ!