Latest Videos

ಪುತ್ತೂರಿನಲ್ಲಿ ನಕಲಿ ದಾಖಲೆ ಸೃಷ್ಟಿಯ ವಂಚನೆ ಜಾಲ ಪತ್ತೆ!

By Kannadaprabha NewsFirst Published Jul 11, 2023, 10:41 PM IST
Highlights

ಸರ್ಕಾರಿ ದಾಖಲೆಗಳ ನಕಲಿ ಸೃಷ್ಟಿಜಾಲವೊಂದು ಪತ್ತೆಯಾಗಿದ್ದು, ಪುತ್ತೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ನಕಲಿ ದಾಖಲೆ ಮತ್ತು ಮೊಹರುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಮಂಗಳವಾರ ನಡೆದಿದೆ.

ಪುತ್ತೂರು (ಜು.11): ಸರ್ಕಾರಿ ದಾಖಲೆಗಳ ನಕಲಿ ಸೃಷ್ಟಿಜಾಲವೊಂದು ಪತ್ತೆಯಾಗಿದ್ದು, ಪುತ್ತೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ನಕಲಿ ದಾಖಲೆ ಮತ್ತು ಮೊಹರುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಮಂಗಳವಾರ ನಡೆದಿದೆ.

ಪುತ್ತೂರು ನಗರದ ಪಡೀಲ್‌ ಎಂಬಲ್ಲಿನ ವಿಶ್ವನಾಥ ಎಂಬವರಿಗೆ ಸೇರಿದ ಇಲೆಕ್ಟ್ರಿಕಲ್ಸ್‌ ಮತ್ತು ಫ್ಲಂಬಿಂಗ್‌ ಸೆಂಟರ್‌ನಲ್ಲಿ ಈ ಅಕ್ರಮ ಜಾಲವನ್ನು ಪತ್ತೆ ಹಚ್ಚಲಾಗಿದೆ. ವಿಶ್ವನಾಥ ಅವರು ಅನುಮತಿ ಪಡೆದ ಗುತ್ತಿಗೆದಾರರಾಗಿದ್ದು, ಮೆಸ್ಕಾಂ ಗುತ್ತಿಗೆ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದರು. ವಿದ್ಯುತ್‌ ಸಂಪರ್ಕ ಪಡೆಯಲು ಪಂಚಾಯತ್‌ ಮತ್ತು ನಗರಸಭೆಯ ನಿರಪೇಕ್ಷಣಾ ಪತ್ರ(ಎನ್‌ಒಸಿ) ನೀಡಬೇಕಾಗಿದೆ. ವಿದ್ಯುತ್‌ ಗುತ್ತಿಗೆ ಕಾಮಗಾರಿ ನಿರ್ವಹಿಸುತ್ತಿದ್ದ ಈ ಅಂಗಡಿಯಲ್ಲಿ ಪುತ್ತೂರು ನಗರಸಭೆ, ಕಡಬ ತಾಲೂಕು ಪಂಚಾಯತ್‌, ಪುತ್ತೂರು ತಾಲೂಕಿನ ಎಲ್ಲ ಗ್ರಾಪಂಗಳ ಮೊಹರು, ಸುಳ್ಯ ಮತ್ತು ಬಂಟ್ವಾಳ ತಾಲೂಕುಗಳ ವಿವಿಧ ಗ್ರಾಮ ಪಂಚಾಯಿತಿಗಳ ಮೊಹರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಹಾಲಕ್ಷ್ಮಿ ಪತಿ ರವೀಂದರ್​ ವಿರುದ್ಧ ದಾಖಲಾಯ್ತು ವಂಚನೆ ಕೇಸ್​! ಏನಿದು ಪ್ರಕರಣ?

ದಾಖಲೆ ಪತ್ರಗಳಿಗೆ ನಕಲಿ ಸಹಿ ಹಾಕಿ, ಅದಕ್ಕೆ ನಕಲಿ ಮೊಹರುಗಳನ್ನು ಬಳಸುತ್ತಿರುವುದಾಗಿ ಆರೋಪ ವ್ಯಕ್ತವಾಗಿದೆ. ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿಇ ಕಾರ್ಯನಿರ್ವಹಣಾಧಿಕಾರಿ ನವಿನ್‌ ಭಂಡಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ ನಕಲಿ ದಾಖಲೆ ಮತ್ತು ಮೊಹರುಗಳನ್ನು ವಶಕ್ಕೆ ಪಡೆದುಕೊಂಡಿದೆ.

click me!