ಮಂಗಳೂರು: ‘ಮೋದಿ ಹಣ’ ಕೊಡಿಸುವ ನೆಪದಲ್ಲಿ ಉಪ್ಪಿನಂಗಡಿಯಲ್ಲಿ ವಂಚನೆ..!

Published : Aug 11, 2023, 03:00 AM IST
ಮಂಗಳೂರು: ‘ಮೋದಿ ಹಣ’ ಕೊಡಿಸುವ ನೆಪದಲ್ಲಿ ಉಪ್ಪಿನಂಗಡಿಯಲ್ಲಿ ವಂಚನೆ..!

ಸಾರಾಂಶ

ಮೋದಿಯವರು ಕೊರೊನಾ ಸಮಯದಲ್ಲಿ ಕಳಿಸಿಕೊಟ್ಟ ಹಣ ಬ್ಯಾಂಕಿನಲ್ಲಿ ಕೊಳೆಯುತ್ತಿದೆ. ಅದನ್ನು ಯಾರ ಖಾತೆಗೂ ಜಮೆ ಮಾಡಬಹುದು. ನೀವು ಆಧಾರ್‌ ಪ್ರತಿ ಹಾಗೂ ಬ್ಯಾಂಕ್‌ ಪುಸ್ತಕದ ಪ್ರತಿ ನೀಡಿ, ನಿಮ್ಮ ಖಾತೆಗೆ ಹಣ ಜಮೆ ಮಾಡುತ್ತೇನೆ. ಅದಕ್ಕಾಗಿ ನೀವು ನನಗೆ ಕೇವಲ 7000 ರು. ನೀಡಿದರೆ ಸಾಕು ಎಂದು ನಂಬಿಸಿದ್ದಾನೆ. 

ಉಪ್ಪಿನಂಗಡಿ(ಆ.11):  ‘ಮೋದಿ ಹಣ ಬಂದಿದೆ’ ಎಂದು ನಂಬಿಸಿ ಅಮಾಯಕರಿಂದ 7 ಸಾವಿರ ರು. ಹಣ ಎಗರಿಸುತ್ತಿರುವ ಪ್ರಕರಣ ಉಪ್ಪಿನಂಗಡಿ ಪರಿಸರದಲ್ಲಿ ಬೆಳಕಿಗೆ ಬಂದಿದೆ. ಎಲ್ಲ ಪ್ರಕರಣದಲ್ಲಿಯೂ ವಂಚಕ ಕಬಳಿಸುತ್ತಿದ್ದ ಮೊತ್ತ 7 ಸಾವಿರ ರು. ಮಾತ್ರ ಆಗಿರುವುದು ವಿಶೇಷ.

ವ್ಯಕ್ತಿಯೊಬ್ಬರು ಆಗ ತಾನೆ ಉಪ್ಪಿನಂಗಡಿಯ ಅಡಕೆ ಅಂಗಡಿಯಲ್ಲಿ ಮಾರಾಟ ಮಾಡಿ, ಹಣದೊಂದಿಗೆ ಹಿಂತಿರುತ್ತಿದ್ದರು. ಆ ವೇಳೆ ಬೈಕಿನಲ್ಲಿ ಬಂದ ಯುವಕನೋರ್ವ, ತಾನು ಅವರ ಪುತ್ರಿಯ ಸಹಪಾಠಿ, ಕೆನರಾ ಬ್ಯಾಂಕ್‌ ಉದ್ಯೋಗಿ. ಮೋದಿಯವರು ಕೊರೊನಾ ಸಮಯದಲ್ಲಿ ಕಳಿಸಿಕೊಟ್ಟ ಹಣ ಬ್ಯಾಂಕಿನಲ್ಲಿ ಕೊಳೆಯುತ್ತಿದೆ. ಅದನ್ನು ಯಾರ ಖಾತೆಗೂ ಜಮೆ ಮಾಡಬಹುದು. ನೀವು ಆಧಾರ್‌ ಪ್ರತಿ ಹಾಗೂ ಬ್ಯಾಂಕ್‌ ಪುಸ್ತಕದ ಪ್ರತಿ ನೀಡಿ, ನಿಮ್ಮ ಖಾತೆಗೆ ಹಣ ಜಮೆ ಮಾಡುತ್ತೇನೆ. ಅದಕ್ಕಾಗಿ ನೀವು ನನಗೆ ಕೇವಲ 7000 ರು. ನೀಡಿದರೆ ಸಾಕು ಎಂದು ನಂಬಿಸಿದ್ದಾನೆ. ಅವರು ಅಡಕೆ ಮಾರಾಟದಿಂದ ಬಂದಿರುವ ಹಣದಿಂದ 7000 ರು. ಆತನಿಗಿತ್ತು, ಪಾಸು ಪುಸ್ತಕದ ಜೆರಾಕ್ಸ್‌ ತರಲು ಹೋದರು.

Mangaluru: ನೈತಿಕ ಪೊಲೀಸ್‌ಗಿರಿ: ಗುಂಪಿನಿಂದ ಅಂಗಡಿ ಮಾಲೀಕನಿಗೆ ಹಲ್ಲೆ

ಜೆರಾಕ್ಸ್‌ ಪ್ರತಿಯೊಂದಿಗೆ ಹಿಂತಿರುಗಿದಾಗ ಬೈಕಿನೊಂದಿಗೆ ಯುವಕನೂ ನಾಪತ್ತೆಯಾಗಿದ್ದ. ಕಂಗೆಟ್ಟಅವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪೇಟೆಯೊಳಗಿನ ಸಿಸಿ ಕೆಮರಾದಲ್ಲಿನ ದೃಶ್ಯಾವಳಿ ಬಳಸಿ ವಂಚಕನ ಪತ್ತೆಗೆ ಶ್ರಮಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ನಗರದಲ್ಲಿ 16 ಅಕ್ರಮ ಬಾಂಗ್ಲಾದೇಶದ ನಿವಾಸಿಗಳ ಬಂಧನ
ಶಿವಮೊಗ್ಗ ಲವ್ ಮ್ಯಾರೇಜ್: 2ನೇ ಮದುವೆಗೆ ಒಪ್ಪದ ಮೊದಲ ಹೆಂಡತಿಯನ್ನ ಯಮಲೋಕಕ್ಕೆ ಕಳಿಸಿದ ಗೋಪಿ!