KSRTCಯಲ್ಲಿ ಕೆಲಸ ಆಮಿಷ: 100ಕ್ಕೂ ಅಧಿಕ ಮಂದಿಗೆ ವಂಚನೆ

Kannadaprabha News   | Asianet News
Published : Oct 17, 2021, 07:43 AM IST
KSRTCಯಲ್ಲಿ ಕೆಲಸ ಆಮಿಷ: 100ಕ್ಕೂ ಅಧಿಕ ಮಂದಿಗೆ ವಂಚನೆ

ಸಾರಾಂಶ

*   ಬಸ್‌ ಚಾಲಕನಿಂದ ಕೃತ್ಯ *   ಆತನ ಬ್ಯಾಂಕ್‌ ಖಾತೆಯಲ್ಲಿ 2.5 ಕೋಟಿ ಪತ್ತೆ *   ವಂಚಿಸುವುದನ್ನೇ ಉದ್ಯೋಗ ಮಾಡಿಕೊಂಡ ಅರೋಪಿ ಮಂಜುನಾಥ್‌ 

ಬೆಂಗಳೂರು(ಅ.17): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಸಂಚಾರಿ ನಿರೀಕ್ಷರ ಹುದ್ದೆ ಕೊಡಿಸುವುದಾಗಿ ನಂಬಿಸಿ ನೂರಾರು ಮಂದಿ​ಯಿಂದ ಕೋಟ್ಯಂತರ ರುಪಾಯಿ ಪಡೆದು ವಂಚಿ​ಸಿರುವ(Fraud) ಆರೋಪದಡಿ ಕೆಎ​ಸ್‌​ಆ​ರ್‌​ಟಿಸಿ(KSRTC) ಚಾಲಕ ಸೇರಿ ಇಬ್ಬರು ಆರೋ​ಪಿ​ಗ​ಳನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿಯ(Ballari) ಹಗರಿಬೊಮ್ಮನಹಳ್ಳಿ ಮೂಲ​ದ ಮಂಜುನಾಥ್‌ ಬಿಲ್ಲಾ ನಾಯ​ಕ್‌ (45) ಹಾಗೂ ಆತನ ಸ್ನೇಹಿತ ಅನಿಲ್‌ (41) ಬಂಧಿತರು(Arrest). ಆರೋ​ಪಿ​ಗಳು(Accused) ಸುಮಾರು ನೂರಕ್ಕೂ ಅಧಿಕ ಮಂದಿಯಿಂದ ಕೋಟ್ಯಂತರ ರುಪಾಯಿ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ. ಆರೋಪಿಗಳ ಖಾತೆಯಲ್ಲಿದ್ದ ಸುಮಾರು 2.5 ಕೋಟಿ ಇರು​ವುದು ಪತ್ತೆ​ಯಾ​ಗಿದೆ ಎಂದು ಪೊಲೀಸರು(Police) ಹೇಳಿದ್ದಾರೆ.

ಶಂಕರ್ ಬಿದರಿಗೆ ಸೈಬರ್ ವಂಚಕರ ಗಾಳ.. 89 ಸಾವಿರ ಕಳಕೊಂಡ ನಿವೃತ್ತ ಅಧಿಕಾರಿ

ಆರೋಪಿ ಮಂಜು​ನಾಥ್‌ ಬಿಲ್ಲಾ ನಾಯಕ್‌ ಕೆಎಸ್‌ಆ​ರ್‌​ಟಿಸಿ ಚಾಲ​ಕ​ನಾ​ಗಿದ್ದು(Driver), ತನ್ನ ಸ್ನೇಹಿ​ತರನ್ನು ಮಧ್ಯ​ವ​ರ್ತಿ​ಗ​ಳ​ನ್ನಾಗಿ ಮಾಡಿ​ಕೊಂಡು ದಂಧೆ ನಡೆ​ಸು​ತ್ತಿದ್ದ. ಇತ್ತೀ​ಚೆಗೆ ಬಾಗ​ಲ​ಕೋಟೆ(Bagalkot) ಜಿಲ್ಲೆಯ ವಿ.ಎ​ಸ್‌.​ಅ​ರ​ಗಿ​ಶೆಟ್ಟಿ ಎಂಬ​ವ​ರಿಗೆ ಟ್ರಾಫಿಕ್‌ ಇನ್‌​ಸ್ಪೆ​ಕ್ಟರ್‌(Traffic Ipector) ಹುದ್ದೆ ಕೊಡಿ​ಸು​ವು​ದಾಗಿ 11 ಲಕ್ಷ ಪಡೆದು ವಂಚಿ​ಸಿ​ದ್ದರು. ಈ ಸಂಬಂಧ ಅರಗಿಶೆಟ್ಟಿ ಎಂಬುವರು ಕೊಟ್ಟ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.

ಮಂಜುನಾಥ್‌ ವಂಚಿಸುವುದನ್ನೇ ಉದ್ಯೋಗ(Job) ಮಾಡಿಕೊಂಡಿದ್ದಾನೆ. ಅದ​ಕ್ಕಾಗಿ ಕಾರೊಂದನ್ನು ಖರೀದಿಸಿ ಅದಕ್ಕೆ ಕರ್ನಾಟಕ ಸರ್ಕಾ​ರದ(Government Of Karnataka) ನಾಮ​ಫ​ಲಕ ಹಾಕಿ​ಕೊಂಡು ಉತ್ತರ ಕರ್ನಾ​ಟ​ಕ​ದಲ್ಲಿ(North Karnataka) ತನ್ನ ಸ್ನೇಹಿ​ತ​ರ ಜತೆ ಸುತ್ತಾ​ಡು​ತ್ತಿ​ದ್ದ. ಈ ವೇಳೆ ಮತ್ತು ಕರ್ತ​ವ್ಯದ ವೇಳೆ​ಯಲ್ಲಿ ಪರಿ​ಚ​ಯ​ವಾ​ಗುವ ಸಾರ್ವ​ಜ​ನಿ​ಕ​ರನ್ನು ಗುರಿ​ಯಾ​ಗಿ​ಸಿ​ಕೊಂಡು ಕೆಎಸ್‌ಆರ್‌ಟಿಸಿಯಲ್ಲಿ ಟ್ರಾಫಿಕ್‌ ಇನ್‌ಸ್ಪೆಕ್ಟರ್‌ ಉದ್ಯೋಗ ಕೊಡಿಸುವುದಾಗಿ ನಂಬಿಸುತ್ತಿದ್ದ. ಬಳಿಕ ಅವರಿಂದ ಹಣ ವಸೂಲಿ ಮಾಡಿಕೊಂಡು ನಾಪತ್ತೆಯಾಗುತ್ತಿದ್ದ. ಬಂದ ಹಣದಲ್ಲಿ ಮೋಜು ಮಾಡುತ್ತಿದ್ದ. ಬಂದ ಹಣದಲ್ಲಿ ಮಧ್ಯವರ್ತಿಯಾಗಿದ್ದ(Mediator) ಅನಿಲ್‌ಗೆ ಇಂತಿಷ್ಟು ಎಂದು ಹಣ ನೀಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!