
ಸಿದ್ದಾಪುರ(ಅ.16): ಕ್ಷುಲ್ಲಕ ಕಾರಣಕ್ಕೆ ಮದ್ಯದ ನಶೆಯಲ್ಲಿ ಗುಂಡು ಹಾರಿಸಿ ಹೆತ್ತ ತಾಯಿ ಮತ್ತು ತಂಗಿಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ(Uttara Kananda) ಜಿಲ್ಲೆಯ ಸಿದ್ದಾಪುರ(Siddapura) ತಾಲೂಕಿನ ದೊಡ್ಮನೆ ಗ್ರಾಮ ಪಂಚಾಯಿತಿ ಕುಡೆಗೋಡು ಬಳಿ ಸಂಭವಿಸಿದೆ.
ತಾಯಿ ಪಾರ್ವತಿ ನಾರಾಯಣ ಹಸ್ಲರ್ (42) ಮತ್ತು ತಂಗಿ ರಮ್ಯಾ ನಾರಾಯಣ (19) ಎಂಬವರೇ ಕೊಲೆಯಾದವರು(Murder). ಮಂಜುನಾಥ್ (24) ಎಂಬುವವನೇ ಕೊಲೆ ಮಾಡಿದ ಆರೋಪಿ(Accused). ಸದ್ಯ ಸಿದ್ದಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ(Arrest).
ಬೆಂಗ್ಳೂರಲ್ಲಿ ಜೋಡಿ ಕೊಲೆ: ನಗ್ನಸ್ಥಿತಿಯಲ್ಲಿ ಮೃತದೇಹ ಪತ್ತೆ
ಮಂಜುನಾಥ ಹಸ್ಲರ್ ವಿಪರೀತ ಕುಡಿತದ(Alcohol) ಚಟಕ್ಕೆ ಅಂಟಿಕೊಂಡಿದ್ದ. ಕುಡಿದು ಬಂದು ಸಾಂಬಾರ್ ಸರಿಯಾಗಿಲ್ಲ ಎಂದು ಮನೆಯಲ್ಲಿ ಜಗಳವಾಡಿದ್ದಾನೆ. ಕುಡಿದ ಅಮಲಿನಲ್ಲೇ ಜಗಳವಾಡಿ ನಾಡ ಬಂದೂಕಿನಿಂದ ಗುಂಡು ಹಾರಿಸಿ ತಾಯಿ ಮತ್ತು ತಂಗಿಯ ಕೊಲೆ ಮಾಡಿದ್ದಾನೆ. ಈ ವೇಳೆ ಇಬ್ಬರೂ ಸ್ಥಳದಲ್ಲೇ ಪ್ರಾಣಬಿಟ್ಟಿದ್ದು(Death), ಘಟನೆ ನಡೆದ ವೇಳೆ ತಂದೆ ನಾರಾಯಣ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.
ಕುಡುಕ ಆರೋಪಿ ಮಗನ ವಿರುದ್ಧ ತಂದೆ ನಾರಾಯಣ ಹಸ್ಲರ್ ಪೊಲೀಸರಿಗೆ ದೂರು ನೀಡಿದ್ದು, ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧಿಸಿ ಸಿದ್ದಾಪುರ ಪೊಲೀಸ್(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ