ಸರ್ಕಾರಿ ನೌಕರಿ ಕೊಡಿಸೋದಾಗಿ ಲಕ್ಷ ಲಕ್ಷ ವಂಚನೆ; ಬಗೆದಷ್ಟು ಬಯಲಾಗ್ತಿದೆ ಕಾಂಗ್ರೆಸ್ ನಾಯಕಿ ಕರ್ಮಕಾಂಡ!

By Ravi Janekal  |  First Published Jan 29, 2024, 1:33 PM IST

ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿರುವ ಸಂಧ್ಯಾ ಪವಿತ್ರಾ ನಾಗರಾಜ್.  ಡಿಕೆ ಶಿವಕುಮಾರ, ಸಿಎಂ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ ಸೇರಿದಂತೆ ದೊಡ್ಡ ದೊಡ್ಡ ಗಣ್ಯವ್ಯಕ್ತಿಗಳೊಂದಿಗೆ ನಿಂತು ಫೋಟೊಗೆ ಪೋಸು. ಆದರೆ ಮಾಡೋದೆಲ್ಲ ವಂಚನೆ ಕೆಲಸ. ಸರ್ಕಾರಿ ನೌಕರಿ ಆಸೆ ತೋರಿಸಿ ಮುಗ್ಧ ಜನರಿಂದ ಲಕ್ಷ ಲಕ್ಷ ಪಡೆದು ವಂಚನೆ ಮಾಡಿರೋ ಆರೋಪ ಕೇಳಿಬಂದಿದೆ.


ಬೆಂಗಳೂರು (ಜ.29): ಅವರು ಸರಿ ಇಲ್ಲ, ಇವರು ಸರಿಯಿಲ್ಲ ನಾನೇ ಸಾಚಾ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಬಿಲ್ಡ್‌ಅಪ್ ಕೊಡ್ತಿದ್ದ ಕಾಂಗ್ರೆಸ್ ನಾಯಕಿ ತಾನೇ ವಂಚನೆ ಆರೋಪದಲ್ಲಿ ಸಿಲುಕಿಕೊಂಡಿದ್ದಾರೆ. ಮಾಡೋದು ಅನಾಚಾರ, ಮನೆ ಮುಂದೆ ಬೃಂದಾವನ ಅನ್ನೋ ಹಾಗೆ ಆಗಿದೆ. ದಿನಾ ಬೆಳಗಾದ್ರೆ ಇನ್ನೋಬ್ಬರನ್ನು ಟೀಕಿಸೋದು, ಸಾಧನೆ, ಮಹಿಳಾವಾದ ಮಣ್ಣು ಮಸಿ ಬರೆದು ಬಿಲ್ಡ್‌ಅಪ್ ಕೊಡ್ತಿದ್ದ ಮಹಿಳಾಮಣಿ ಇದೀಗ ಹಲವಾರು ಜನರಿಗೆ ಸರ್ಕಾರಿ ನೌಕರಿ ಆಸೆ ತೋರಿಸಿ ಲಕ್ಷಾಂತರ ಹಣ ಪಡೆದು ವಂಚನೆ ಮಾಡಿರೋ ಕೇಸ್‌ನಲ್ಲಿ ತಗ್ಲಾಕೊಂಡಿರೋ ಸ್ವಯಂಘೋಷಿತ ನಾಯಕಿ.

ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿರುವ ಸಂಧ್ಯಾ ಪವಿತ್ರಾ ನಾಗರಾಜ್.  ಡಿಕೆ ಶಿವಕುಮಾರ, ಸಿಎಂ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ ಸೇರಿದಂತೆ ದೊಡ್ಡ ದೊಡ್ಡ ಗಣ್ಯವ್ಯಕ್ತಿಗಳೊಂದಿಗೆ ನಿಂತು ಫೋಟೊ ತೆಗೆಸಿಕೊಂಡಿರೋ ಸಂಧ್ಯಾ ಪವಿತ್ರಾ ನಾಗರಾಜ. ಫೋಟೊಗಳನ್ನು ನೋಡಿ ಜನರು ಸೆಲೆಬ್ರಿಟಿ ಅಂದುಕೊಂಡು ನಮಗೊಂದು ಕೆಲಸ ಕೊಡಿಸಿ ಅಂತಾ ಕೇಳೋ ಮುಗ್ಧರನ್ನೇ ಬಲೆಗೆ ಹಾಕಿ ವಂಸಿಸುತ್ತಿದ್ದ ಚಾಲಕಿ. ಕೇಳಿದಷ್ಟು ಹಣ ಕೊಟ್ಟರೆ ಸರ್ಕಾರಿ ಕೆಲಸ ಫಿಕ್ಸ್ ಅಂತಾ ಆಮಿಷಾ. ಹೇಗೋ ಸರ್ಕಾರಿ ನೌಕರಿ ಸಿಗುತ್ತಲ್ಲ ಅಂತಾ ನಂಬಿ ಲಕ್ಷ ಲಕ್ಷ ಹಣ ಕೊಡುತ್ತಿದ್ದ ಮುಗ್ಧರಿಗೆ ಪಂಗನಾಮ ಹಾಕುತ್ತಿದ್ದ ಖತರ್ನಾಕ್ ಸಂಧ್ಯಾ. 

Tap to resize

Latest Videos

ಸಾಲಗಾರರ ಕಾಟ ತಾಳಲಾರದೆ ಇಡೀ ಕುಟುಂಬ ನಾಪತ್ತೆ; ವಾರ ಕಳೆದರೂ ಪತ್ತೆಯಾಗಿಲ್ಲ!

ಸರ್ಕಾರಿ ನೌಕರಿ ಕೋಡಿಸೋದಾಗಿ ದೋಖಾ:

ತಾನು ಕಾಂಗ್ರೆಸ್ ದೊಡ್ಡ ನಾಯಕಿ ಅಂತಾ ಪೋಸು ಕೊಟ್ಟು ರೂಪಾ ಎಂಬಾಕೆಯ ತಮ್ಮನಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ಹಣ ಪೀಕಿ ಮೋಸ ಮಾಡಿರೋ ಹಿನ್ನೆಲೆ ಸಂಧ್ಯಾ ಪವಿತ್ರಾ ನಾಗರಾಜ್ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿರುವ ರೂಪಾ ಎಂಬ ಮಹಿಳೆ.

2021ರಲ್ಲಿ ರೂಪಾಗೆ ಭಾನುಪ್ರಕಾಶ್ ಎಂಬುವರು ಪರಿಚಯ ಆಗಿದ್ದಾರೆ. ಈ ವೇಳೆ ರೂಪಾ ತಮ್ಮನಿಗೆ ಸರ್ಕಾರಿ ನೌಕರಿ ಕೆಲಸ ಕೊಡಿಸುವ ಆಮಿಷ ಒಡ್ಡಲಾಗಿದೆ. ಬಳಿಕ ಹರೀಶ್ ಎಂಬುವವರನ್ನು ಪರಿಚಯ ಮಾಡಿಕೊಟ್ಟಿದ್ದ ಭಾನುಪ್ರಕಾಶ. ಸರ್ಕಾರ ನೌಕರಿ ಕೊಡಿಸುವ ಕೆಲಸ ಡೀಲ್ ಕುದರಿಸಿ ಮೊದಲಿಗೆ 3.50 ಲಕ್ಷ, 3.50 ಲಕ್ಷದಂತೆ ಎರಡು ಬಾರಿ ರೂಪಾರಿಂದ ಹಣ ಪಡೆಯಲಾಗಿತ್ತು. ಆದರೆ ಕೆಲಸ ಕೊಡಿಸದ ಹಿನ್ನೆಲೆ ರೂಪಾ ವಿಚಾರಿಸಿದಾಗ ಸಂಧ್ಯಾಗೆ ಹಣ ನೀಡಿರುವುದಾಗಿ ಹೇಳಿದ್ದ ಹರೀಶ್. ಬಳಿಕ ಸಂಧ್ಯಾಳ ಭೇಟಿಯಾಗಿ ವಿಚಾರಿಸಿದಾಗ ಕೆಲಸ ಕೊಡಿಸಲು ಮತ್ತೆ ಹಣಕ್ಕೆ ಬೇಡಿಕೆಯಿಟ್ಟು 7.70 ಲಕ್ಷ ಪಡೆದಿದ್ದ ವಂಚಕಿ ಸಂಧ್ಯಾ. ಹೀಗೆ ರೂಪಾ ಎಂಬುವವರಿಂದ ಒಟ್ಟು  11.20 ಲಕ್ಷ ಹಣ ಪಡೆದಿದ್ದ ಸಂಧ್ಯಾ ನಾಗರಾಜ್ & ಟೀಂ. ಲಕ್ಷಾಂತರ ರೂ. ಹಣ ಪೀಕಿದರೂ ಸರ್ಕಾರಿ ನೌಕರಿ ಕೊಡಿಸದೆ ಗ್ಯಾಂಗ್. ಇದರಿಂದ ತಾನು ವಂಚನೆಗೊಳಗಾಗಿರೋದು ಕನ್ಫರ್ಮ್ ಆಗುತ್ತಿದ್ದಂತೆ ಜಯನಗರ ಠಾಣೆಯಲ್ಲಿ ಮೂವರು ವಂಚಕರ ವಿರುದ್ಧ ದೂರು ನೀಡಿದ್ದ ರೂಪಾ. 

ದೂರು ನೀಡಿದಾಗ ಠಾಣೆಗೆ ಹಾಜರಾಗಿ ಹಣ ವಾಪಸ್ ಕೊಡೋದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದ ಸಂಧ್ಯಾ ಗ್ಯಾಂಗ್. ಆ ಬಳಿಕ ಆಂಟಿಸಿಇಪೆಟರಿ ಬೇಲ್ ತೆಗೆದುಕೊಂಡಿದ್ದ ಸಂಧ್ಯಾ. 2023ರ ನವಂಬರ್ ಒಳಗೆ 7.70 ಲಕ್ಷ ಹಣ ವಾಪಸ್ ನೀಡುವುದಾಗಿ ಮುಚ್ಚಳಿಕೆ ಬರೆದುಕೊಟ್ಟು ಚೆಕ್ ನೀಡಿದ್ದ ಸಂಧ್ಯಾ. ಆದರೆ ಸಂಧ್ಯಾ ನೀಡಿದ್ದ ಚೆಕ್ ತೆಗೆದುಕೊಂಡು ಹೋದಾಗ ಅಲ್ಲೂ ವಂಚನೆ ಮಾಡಿರುವ ಕಳ್ಳಿ. ಬ್ಯಾಂಕ್ ಚೆಕ್ಕೇ ಸರಿಯಿಲ್ಲ ಎಂದ ಬ್ಯಾಂಕ್ ಮ್ಯಾನೇಜರ್. ಈ ಬಗ್ಗೆ ಮತ್ತೆ ಸಂಧ್ಯಾಳನ್ನ ರೂಪಾ ವಿಚಾರಿಸಿದಾಗ ಕೋರ್ಟ್‌ನಲ್ಲಿ ನೋಡಿಕೊಳ್ತಿನಿ ಎಂದು ಅವಾಜ್ ಹಾಕ್ತಿರೋ ಸಂಧ್ಯ ಅಬ್ಬಬ್ಬ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ರೂ ಹಣ ವಾಪಸ್ ಮಾಡದೇ ಕೋರ್ಟ್‌ನಲ್ಲಿ ನೋಡಿಕೊಳ್ತೀನಿ ಅನ್ನೋ ಇವರಳಿಗೆ ಎಷ್ಟು ಧೈರ್ಯ ಅಂತಾ ಅಚ್ಚರಿಯಾಗುತ್ತ ಅಲ್ಲವೇ ಇನ್ನೂ ವಂಚನೆ ಬಗ್ಗೆ ಕತೆ ಕೇಳಿ.

ಬಗೆದಷ್ಟು ಬಯಲಾಗ್ತಿದೆ ಸಂಧ್ಯಾ ನಾಗರಾಜ್ ಮೋಸದ ಜಾಲ!

ಹತ್ತಾರು ಜನರಿಗೆ ಸರ್ಕಾರಿ ನೌಕರಿ ಕೊಡಿಸ್ತೇನೆಂದು ಹಣ ಪೀಕಿರುವ ಕಾಂಗ್ರೆಸ್ ನಾಯಕಿ ಸಂಧ್ಯಾ ನಾಗಾರಾಜ್ ಇದೊಂದೇ ಕೇಸ್ ಅಲ್ಲ, ಬೆಂಗಳೂರು ಮಾತ್ರ ಅಲ್ಲ, ಯಾದಗಿರಿವರೆಗೆ ವಂಚಿಸಿರುವ ಸಂಧ್ಯಾ. 

ಫೇಸ್‌ಬುಕ್‌ನಲ್ಲಿ ಕೆಲಸ ಹುಡುಕುವವರಿಗೆ ಗಾಳ:

ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬರೋರು, ಫೇಸ್‌ಬುಕ್ ನಲ್ಲಿ ಕೆಲಸ ಕೊಡಿಸಿ ಅಂತಾ ಕೇಳ್ತಿದ್ದ ಮುಗ್ಧರಿಗೇ ಸಂಧ್ಯಾ ಗ್ಯಾಂಗ್ ಗಾಳ ಹಾಕಿ ವಂಚಿಸಿದೆ. ರೂಪಾ ಬಳಿಕ ಬೆಂಗಳೂರಿನ ಮತ್ತೊಬ್ಬ ಮಹಿಳೆ ಮೋಸ ಮಾಡಿದ್ದಾಳೆ. ಬೆಂಗಳೂರಿನ ವೀಣಾ ಎಂಬ ಮಹಿಳೆಗೆ ಕೆಲಸ ಕೊಡಿಸುತ್ತೇನೆ ಎಂದು 20 ಲಕ್ಷ ರೂ. ವಸೂಲಿ ಮಾಡಿರುವ ಕಳ್ಳಿ. 2021ರಲ್ಲಿ ಎಂ.ಎಸ್ ಬಿಲ್ಡಿಂಗ್ ನಲ್ಲಿ ಕೆಲಸ ಕೊಡಿಸುವುದಾಗಿ 20 ಲಕ್ಷ ಪಡೆದಿದ್ದ ಸಂಧ್ಯಾ. ಆದರೆ ಹಣ ಪಡೆದು 3 ವರ್ಷ ಆದರೂ ಕೆಲಸ ಕೊಡಿಸಲಿಲ್ಲ ಹಣವನ್ನೂ  ವಾಪಸ್ ನೀಡಿಲ್ಲ. ಈ ಬಗ್ಗೆ ಜ.25ರಂದು ಜ್ಞಾನ ಭಾರತಿ ಪೊಲೀಸ್ ಠಾಣೆಗೆ ದೂರು ನೀಡಿರುವ ವೀಣಾ. ಆದರೆ ಸಂಧ್ಯಾ ಪವಿತ್ರಾ ನಾಗರಾಜ್ ವಿರುದ್ಧ ಎಫ್‌ಐಆರ್ ಮಾಡದೇ ಕೇವಲ ಎನ್‌ಸಿಆರ್ ಮಾಡಿರುವ ಪೊಲೀಸರು.

ಯಾದಗಿರಿ ಬಡ ಯುವಕನಿಗೆ ವಂಚನೆ:

ಇನ್ನು ಯಾದಗಿರಿ ಯುವಕನಿಗೂ ಇದೇ ರೀತಿ ಲಕ್ಷಾಂತರ ರೂ. ವಂಚಿಸಿರೋ ಸಂಧ್ಯಾ ನಾಗರಾಜ್. ಸರ್ಕಾರಿ ಕೆಲಸ ಕೊಡಿಸೋದಾಗಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ. ಹಣವನ್ನೂ ವಾಪಸ್ ಕೊಡದೇ, ಕೆಲಸವೂ ಕೊಡಿಸದೇ ಮೋಸ. ಮೋಸದಿಂದಾಗಿ ಸದ್ಯ ಹಾಸಿಗೆ ಹಿಡಿದಿರುವ ಯಾದಗಿರಿ ಯುವಕ ಚಂದ್ರು. ಕೆಲಸ ಕೊಡಿಸಿದ್ರೂ ಪರವಾ ಇಲ್ಲ. ಕೊಟ್ಟ ಹಣ ಮರಳಿಸುವಂತೆ ಗೋಳಿಡುತ್ತಿರುವ ಬಡ ಯುವಕ. ಕುಟುಂಬ ಕಷ್ಟದಲ್ಲೂ ಇದ್ದು. ಆಸ್ಪತ್ರೆ ಖರ್ಚಿಗೆ ಹಣ ಬೇಕಿದೆ ಎಂದು ಅಂಗಲಾಚುತ್ತಿರುವ ಯುವಕ. ಆದರೂ ಕರುಣೆ ತೋರಿಸದೇ ಯುವಕನಿಗೆ ಬೆದರಿಕೆ ಹಾಕುತ್ತಿರುವ ಸಂಧ್ಯಾ ನಾಗರಾಜ್. ಇದೇ ರೀತಿ ಅದೆಷ್ಟು ಜನರಿಗೆ ಮೋಸ ಮಾಡಿ ಲಕ್ಷಾಂತರ ರೂ. ಲೂಟಿ ಹೊಡೆದು ಸೇಫ್ ಆಗಿರೋ ಸಂಧ್ಯಾ. ದಿನ ಬೆಳಗಾದ್ರೆ ಮೋಟಿವೇಷನ್ ಮೆಸೇಜ್, ಗಣ್ಯವ್ಯಕ್ತಿಗಳ ಜೊತೆಗಿನ ಫೋಟೊ ಹಾಕೊಂಡು ತಾನೆಷ್ಟು ಸಾಚಾ ಅಂತಾ ಬಿಲ್ಡಪ್ ಕೊಡೋದು ಮಾತ್ರ ಯಾವುದೇ ನಾಚಿಕೆ ಮುಂದುವರಿಸಿರುವ ಸಂಧ್ಯಾ ಪವಿತ್ರಾ ನಾಗರಾಜ.

ರೀಲ್​ ಬಿಟ್ಟ ವಿವಾದದ ಬೆನ್ನಲ್ಲೇ ಮತ್ತೊಂದು ಆರೋಪದಲ್ಲಿ ಪ್ರತಾಪ್! ಡ್ರೋನ್​ ನೀಡ್ತೇನೆಂದು 35 ಲಕ್ಷ ಟೋಪಿ?

ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುತ್ತಾರೋ? ಅಥವಾ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡ ನಾಯಕಿ ಮೇಲೆ ಕೇಸ್ ದಾಖಲಿಸದೆ ಮುಚ್ಚಿಹಾಕುತ್ತಾರೋ ಕಾದು ನೋಡಬೇಕು.

click me!