ಸಾಲಗಾರರ ಕಾಟ ತಾಳಲಾರದೆ ಇಡೀ ಕುಟುಂಬ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆಯ ಕೆಜಿ ಕೊಪ್ಪಲು ಬಡಾವಣೆಯಲ್ಲಿ ನಡೆದಿದೆ. ಮಹೇಶ್(35), ಪತ್ನಿ ಭವಾನಿ(28), ಪುತ್ರಿ ಪ್ರೇಕ್ಷಾ(3), ಮಹೇಶ್ ತಂದೆ ಮಹದೇವಪ್ಪ(65), ತಾಯಿ ಸುಮಿತ್ರಾ(55) ನಾಪತ್ತೆಯಾದವರು. ಕೊಪ್ಪಲು ಬಡಾವಣೆ ನಿವಾಸಿಗಳಾಗಿದ್ದಾರೆ. ಕಳೆದ ಎಂಟು ದಿನಗಳಿಂದಲೂ ಯಾರ ಸಂಪರ್ಕಕ್ಕೂ ಸಿಗದ ಕುಟುಂಬ.
ಮೈಸೂರು (ಜ.29): ಸಾಲಗಾರರ ಕಾಟ ತಾಳಲಾರದೆ ಇಡೀ ಕುಟುಂಬ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆಯ ಕೆಜಿ ಕೊಪ್ಪಲು ಬಡಾವಣೆಯಲ್ಲಿ ನಡೆದಿದೆ.
ಮಹೇಶ್(35), ಪತ್ನಿ ಭವಾನಿ(28), ಪುತ್ರಿ ಪ್ರೇಕ್ಷಾ(3), ಮಹೇಶ್ ತಂದೆ ಮಹದೇವಪ್ಪ(65), ತಾಯಿ ಸುಮಿತ್ರಾ(55) ನಾಪತ್ತೆಯಾದವರು. ಕೊಪ್ಪಲು ಬಡಾವಣೆ ನಿವಾಸಿಗಳಾಗಿದ್ದಾರೆ. ಕಳೆದ ಎಂಟು ದಿನಗಳಿಂದಲೂ ಯಾರ ಸಂಪರ್ಕಕ್ಕೂ ಸಿಗದ ಕುಟುಂಬ.
undefined
ಮಾರ್ಕೆಟಿಂಗ್ ಬ್ಯುಸಿನೆಸ್ ಮಾಡುತ್ತಿದ್ದ ಮಹೇಶ್‌ಗೆ ವೀರೇಶ್ ಎಂಬುವವರು ವ್ಯವಹಾರದಲ್ಲಿ ಸಾಥ್ ನೀಡಿದ್ದರು. ಮಹೇಶ್ ಪರಿಚಯ ಹೇಳಿಕೊಂಡು ವೀರೇಶ ಎಂಬುವವನು 30 ರಿಂದ 35 ಲಕ್ಷ ರೂ. ಸಾಲ ಪಡೆದು ಮರುಪಾವತಿ ಮಾಡದೆ ಪರಾರಿಯಾಗಿದ್ದಾನೆ. ಆದರೆ ವೀರೇಶ್‌ಗೆ ಸಾಲ ನೀಡಿದವರು ಸಾಲ ಹಿಂತಿರುಗಿಸುವಂತೆ ಮಹೇಶರ ಮೇಲೆ ಒತ್ತಡ ಹಾಕಿದ್ದಾರೆ. ಸಾಲಗಾರರ ನಿರಂತರ ಮಾನಸಿಕ ಕಿರುಕುಳ, ಬೆದರಿಕೆಗೆ ಕುಟುಂಬ ಸಮೇತ ನಾಪತ್ತೆಯಾಗಿರುವ ಮಹೇಶ್. ನಾಪತ್ತೆಯಾಗುವ ಮುನ್ನ ಸ್ನೇಹಿತನಿಗೆ ವಾಟ್ಸಪ್ ಸಂದೇಶ ಕಳುಹಿಸಿರುವ ಮಹೇಶ್.
ಎಲ್ಲರಿಗೂ ಒಳಿತಾಗಲಿ, ಬಂದಿರೋ ಹಣ ಬಡವರಿಗೆ ಕೊಡ್ತಿನಿ ಎಂದ ಬಿಗ್‌ಬಾಸ್ ರನ್ನರ್ ಅಪ್ ಡ್ರೋನ್ ಪ್ರತಾಪ್
ವಾಟ್ಸಪ್ ಸಂದೇಶದಲ್ಲಿ ಏನಿದೆ?
ನನ್ನ ಉದ್ಯಮದಲ್ಲಿ ಸಾಥ್ ನೀಡಿದ್ದ ವೀರೇಶ್ ಎಂಬುವವನಿಗೆ ಸಾಲ ಪಡೆಯಲು ಮಧ್ಯೆಸ್ಥಿಕೆ ವಹಿಸಿದ್ದೆ 30-35 ಲಕ್ಷ ರೂಪಾಯಿ ಸಾಲ ಪಡೆದು ಪರಾರಿಯಾಗಿರುವ ವೀರೇಶ್ ಇದೀಗ ಸಾಲಗಾರರು ನನಗೆ ನಿರಂತರ ಒತ್ತಡ ಕಿರುಕುಳ ನೀಡುತ್ತಿದ್ದಾರೆ. ನಾವು ಆತ್ಮಹತ್ಯೆ ಮಾಡಿಕೊಳ್ತೇವೆ ಸಾಲಗಾರರು ರಾಕ್ಷಸರಂತೆ ವರ್ತಿಸುತ್ತಿದ್ದಾರೆ. ನಾವು ಕೆರೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ತೇವೆ. ಒಂದು ವೇಳೆ ಮೃತದೇಹ ಸಿಕ್ಕರೆ ಅಂತ್ಯಕ್ರಿಯೆ ಮಾಡಿಕೊಳ್ಳುತ್ತೇವೆ ಆದರೆ ಅವರನ್ನಂತೂ ಬಿಡಬೇಡಿ ಎಂದು ಮಹೇಶ್ ವಾಯ್ಸ್ ಮೆಸೇಜ್ ಮೂಲಕ ತಿಳಿಸಿದ್ದಾನೆ. ರಂಜಿತಾ, ದಿನೇಶ್, ಚಂದ್ರು ಹಾಗೂ ನೇತ್ರ ಎಂಬುವವರ ಹೆಸರು ವಾಯ್ಸ್ ಮೆಸೇಜ್ ನಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ನಾಪತ್ತೆಯಾಗಿರುವ ಬಗ್ಗೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕುಟುಂಬಸ್ಥರ ಶೋಧಕಾರ್ಯಾಚರಣೆ ನಡೆಸಿದ್ದಾರೆ.
ಅನ್ಯರಾಜ್ಯಗಳಿಂದ ಮಾದಕ ದ್ರವ್ಯ ಸಾಗಾಟ; ಡ್ರಗ್ಸ್ ಪತ್ತೆಗೆ ರೈಲುಗಳಲ್ಲಿ ಬಿಗಿ ಪೊಲೀಸ್ ಗಸ್ತು