
ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಡ್ಯ(ಎ.3): ಗ್ರಾಹಕರಿಂದ ಕಡಿಮೆ ಹಣಕ್ಕೆ ಚಿನ್ನ ಅಡವಿಟ್ಟುಕೊಂಡು ಬೇರೆಡೆ ಹೆಚ್ಚಿನ ಹಣಕ್ಕೆ ಗಿರವಿ ಇಡುತ್ತಿದ್ದ ಖತರ್ನಾಕ್ ಕಳ್ಳನನ್ನ ಮಂಡ್ಯದ ಮದ್ದೂರು ಪೊಲೀಸರು ಬಂಧಿಸಿದ್ದಾರೆ. ಮದ್ದೂರಿನ ಐಐಎಫ್ಎಲ್ ಫೈನಾನ್ಸ್ ಕಂಪನಿಯ ಮ್ಯಾನೇಜರ್ ಆಗಿದ್ದ ಶಿವಶಂಕರ್ ಬಂಧಿತ ಆರೋಪಿಯಾಗಿದ್ದಾನೆ. ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವೇಳೆ ಕಂಪನಿಗೆ ವಂಚಿಸಿದ್ದ ಶಿವಶಂಕರ್ 2 ಕೆಜಿ 958 ಗ್ರಾಂ ಚಿನ್ನ, 12.38 ಲಕ್ಷ ದುರುಪಯೋಗ ಮಾಡಿಕೊಂಡು ನಾಪತ್ತೆಯಾಗಿದ್ದನು.
1.03 ಕೋಟಿ ಮೌಲ್ಯದ 1 ಕೆಜಿ 943 ಗ್ರಾಂ ಚಿನ್ನ, ಬುಲೆಟ್ ಬೈಕ್ ವಶ:
ಬರೋಬರಿ 10 ತಿಂಗಳಿಂದ ತಲೆ ಮರೆಸಿಕೊಂಡಿದ್ದ ಶಿವಶಂಕರ್. ಗ್ರಾಹಕರಿಂದ ಚಿನ್ನಾಭರಣ ಗಿರವಿ ಇಡಿಸಿಕೊಂಡು ಬೇರೆಡೆ ಹೆಚ್ಚಿನ ಹಣಕ್ಕೆ ಗಿರವಿ ಇಡುತ್ತಿದ್ದನು. ಮಣಪುರಂ ಗೋಲ್ಡ್, ಮತ್ತೂಟ್ ಫೈನಾನ್ಸ್, ಕೋಸಮಟ್ಟಂ ಫೈನಾನ್ಸ್ ಹಾಗೂ ಜ್ಯೂವೆಲರಿ ಅಂಗಡಿಗಳಲ್ಲಿ ಗಿರವಿ ಇಟ್ಟು ಹೆಚ್ಚಿನ ಹಣ ಪಡೆದುಕೊಳ್ಳುತ್ತಿದ್ದನು. ಈ ವಿಚಾರ ಕಂಪನಿಯ ಮೇಲಾಧಿಕಾರಿಗಳಿಗೆ ಗೊತ್ತಾಗುತ್ತಿದ್ದಂತೆ ಎಸ್ಕೇಪ್ ಆಗಿದ್ದ ವಂಚಕನ ವಿರುದ್ಧ 2021 ಜೂನ್ 6 ರಂದು ಹಣ ದುರುಪಯೋಗ, 14 ರಂದು ಚಿನ್ನ ದುರುಪಯೋಗದ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅಮೆರಿಕದಿಂದ ನಭಕ್ಕೆ ಹಾರಿದ ಖಾಸಗಿ ಶಕುಂತಲಾ ಉಪಗ್ರಹ, ಕನ್ನಡಿಗನ ಸಾಧನೆ!
ಹಣ ಇದ್ದಾಗ ಗೋವಾ, ಕೇರಳದಲ್ಲಿ ವಾಸ್ತವ್ಯ, ಹಣ ಖಾಲಿಯಾಗ್ತಿದ್ದಂತೆ ಟೀ ಮಾರಾಟ: ಕೆಜಿಗಟ್ಟಲೇ ಚಿನ್ನ, ಲಕ್ಷಾಂತರ ರೂಪಾಯಿ ಹಣದ ಜೊತೆ ಎಸ್ಕೇಪ್ ಆಗಿದ್ದ ಆರೋಪಿ ಶಿವಶಂಕರ್ ಕುಟುಂಬದವರ ಸಂಪರ್ಕಕ್ಕೂ ಬಾರದೇ ತಲೆಮರೆಸಿಕೊಂಡಿದ್ದನು. ಕೆಲವು ತಿಂಗಳುಗಳ ಕಾಲ ತನ್ನ ಬಳಿ ಇದ್ದ ಹಣದಲ್ಲಿ ಗೋವಾ, ಕೇರಳ, ಮಹಾರಾಷ್ಟ್ರ ಸುತ್ತಾಡಿ ಮಜಾಮಾಡಿದ್ದ ಆರೋಪಿ ಹಣ ಖಾಲಿ ಆಗ್ತಿದ್ದಂತೆ ಜೀವನೋಪಾಯಕ್ಕಾಗಿ ಹಾಸನ ಜಿಲ್ಲೆಯ ಟೀ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದನು.
Udupi ಚಿನ್ನ ಕದ್ದ 24ಗಂಟೆಯೊಳಗೆ ಕಂಬಿಯೊಳಗೆ ಕಪಿಸೂರ್ಯ!
ಆರೋಪಿ ಪತ್ತೆಯಾಗದಿದ್ದಾಗ ಮೃತಪಟ್ಟಿರುವ ಬಗ್ಗೆ ಖಾಕಿ ಶಂಕೆ: ಕೋಟಿಗಟ್ಟಲೇ ವಂಚಿಸಿ ಫೈನಾನ್ಸ್ ಕಂಪನಿ ಮ್ಯಾನೇಜರ್ ನಾಪತ್ತೆ ಆಗಿದ್ದ ಪ್ರಕರಣ ಖಾಕಿ ಪಡೆಗೆ ಅತ್ಯಂತ ಸವಾಲು ಎನಿಸಿತ್ತು. ಕಂಪನಿ ಅಧಿಕಾರಿಗಳು ನೀಡಿದ್ದ ದೂರು ಆಧರಿಸಿ ತನಿಖೆ ಆರಂಭಿಸಿದ್ದ ಪೊಲೀಸರಿಗೆ 10 ತಿಂಗಳು ಕಳೆದರು ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ಮಧ್ಯೆ ಆರೋಪಿ ಪತ್ನಿಯೂ ಕೂಡ ತನ್ನ ಗಂಡ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದರು. ಕುಟುಂಬಸ್ಥರು, ಸ್ನೇಹಿತರಿಗೂ ಒಂದು ಕಾಲ್ ಮಾಡದೇ ತಲೆಮರೆಸಿಕೊಂಡಿದ್ದ ಆರೋಪಿ. ಯಾರ ಸಂಪರ್ಕಕ್ಕೂ ಸಿಗದೆ ಇದ್ದಾಗ ಆತ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದ್ರೆ ಛಲ ಬಿಡದೇ ತನಿಖೆ ಮುಂದುವರಿಸಿದ ಮದ್ದೂರು ಪೋಲೀಸರು ಪ್ರಕರಣ ಭೇದಿಸಿದ್ದರು. ಖಚಿತ ಮಾಹಿತಿ ಮೇರೆಗೆ ಹುಲಿಯೂರು ದುರ್ಗದ ಬಸ್ ನಿಲ್ದಾಣ ಸಮೀಪ ಆರೋಪಿ ಶಿವಕುಮಾರ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ