ಅವರೆಲ್ಲರೂ ಹಬ್ಬದ ದಿನ ಟ್ರಿಪ್ಪಿಗೆ ಹೋಗಿದ್ರು, ಪ್ರಕೃತಿ ಸೌಂದರ್ಯದ ಜೊತೆಗೆ ಅಯ್ಯನ ಕೆರೆಯಲ್ಲಿ ಈಜಿ ,ಬಿಯರ್ ಕುಡಿಯುಲು ಬಾರ್ ಗೆ ಹೋಗಿದ್ದಾರೆ. ಎಣ್ಣೆ ತೆಗೆದುಕೊಂಡು ವಾಪಸ್ ಬರುವುದು ಬಿಟ್ಟು ಬಡಪಾಯಿಯ ಜೀವವನ್ನೇ ತೆಗೆದಿದ್ದಾರೆ.
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಎ.3): ಚಿಲ್ಲರೆ ಹಣಕ್ಕಾಗಿ ಮದ್ಯವ್ಯಸನಿಗಳು (drunkers) ಬಾರ್ (Bar) ಕ್ಯಾಶಿಯರ್ ( cashier) ಜೊತೆ ಜಗಳವಾಡಿ ಆತನನ್ನ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು (Kadur) ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ. ಮೃತನನ್ನ 28 ವರ್ಷದ ಯಶ್‍ಪಾಲ್ ಎಂದು ಗುರುತಿಸಲಾಗಿದೆ.
undefined
ಯುಗಾದಿ ಹಬ್ಬದ ದಿನವಾದ ಶನಿವಾರ ಸಂಜೆ ಆರು ಗಂಟೆಗೆ ಆರು ಜನ ಯುವಕರು ಸಖರಾಯಪಟ್ಟಣ ಸಮೀಪದ ಪ್ರವಾಸಿತಾಣ ಅಯ್ಯನಕೆರೆಗೆ ಹೋಗಿದ್ದರು. ಅಲ್ಲಿಂದ ಬಂದವರು ಮದ್ಯದ ಖರೀದಿಗೆ ಸಖರಾಯಪಟ್ಟಣದ ಬಾರ್‌ಗೆ ಬಂದಿದ್ದರು. ಬಿಯರ್ ಖರೀದಿಸಿದ ಬಳಿಕ ಚಿಲ್ಲರೆ ಹಣಕ್ಕಾಗಿ ಬಾರಿನ ಮತ್ತೊಬ್ಬ ಕ್ಯಾಶೀಯರ್ ಲಕ್ಷ್ಮಿಶ್ ಎಂಬುವನ ಜೊತೆ ಮಾತಿನ ಚಕಮಕಿ ನಡೆಸಿದ್ದರು. ಹತ್ತು ರೂಪಾಯಿ ಚಿಲ್ಲರೆ ಹಣಕ್ಕಾಗಿ ಗಲಾಟೆ ಮಾಡಿದ್ದರು ಎಂದು ಹೇಳಲಾಗಿದೆ.
Hubballi Smart City ದೇಶದ ಮೊದಲ ಗ್ರೀನ್ ಮೋಬಿಲಿಟಿ ಕಾರಿಡಾರ್ ಶೀಘ್ರ ಸಂಚಾರಕ್ಕೆ ಮುಕ್ತ!
ಈ ವೇಳೆ, ಬಾರ್ ಮುಂದೆ ಇದ್ದ ಬೈಕನ್ನ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಗಲಾಟೆ ಮಾಡಿದ್ದರೆ. ಬೈಕ್‍ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿರುವುದನ್ನ ಕಂಡು ಯಶ್‍ಪಾಲ್ ಆಕ್ಷೇಪಿಸಿದ್ದಾರೆ. ಜನ ಓಡಾಡಲು ತೊಂದರೆಯಾಗುತ್ತೆ. ಪೊಲೀಸರು ಬಂದರೆ ಬೈಯುತ್ತಾರೆ, ಗಾಡಿಗಳನ್ನ ತೆಗೆಯಿರಿ ಎಂದಿದ್ದಾನೆ. ಆಗ ಆರು ಜನರೂ ಸೇರಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಮುಷ್ಠಿಯಲ್ಲಿ ಎದೆ, ಹೊಟ್ಟೆ ಹಾಗೂ ಮುಖಕ್ಕೆ ಬಲವಾಗಿ ಹೊಡೆದು ಹೋಗಿದ್ದಾರೆ.
ಕೆಲಸ ಮುಗಿಸಿ ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಹೋದ ಯಶ್‍ಪಾಲ್ ತೀವ್ರ ಎದೆ ನೋವು ಎಂದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಗರೆ ಬಳಿ ಸಾವನ್ನಪ್ಪಿದ್ದಾರೆ. ಮೃತ ಯಶ್‍ಪಾಲ್ ಮನೆಯವರು ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶ್ರೀಗಳ ಪಕ್ಕ ಕುರ್ಚಿಯಲ್ಲಿ ಕೂರಲು ಒಪ್ಪದೆ ಕೆಳಗೆ ಕುಳಿತ ರಾಜವಂಶಸ್ಥ ಯದುವೀರ್!
ಕುಟುಂಬಕ್ಕೆ ಆಧಾರವಾಗಿದ್ದ ಯಶ್ ಪಾಲ್ : ಮಗನನ್ನ ಕಳೆದುಕೊಂಡು ತಾಯಿಯ ಆಸರೆಗೆ ಯಾರೂ ಇಲ್ಲ. ಬಡಕುಟುಂಬದ ಯಶ್‍ಪಾಲ್ ಏಳೆಂಟು ವರ್ಷಗಳಿಂದ ಬಾರ್‌ನಲ್ಲಿ ಕ್ಯಾಶಿಯರ್ ಆಗಿ ತಾಯಿಯನ್ನ ನೋಡಿಕೊಳ್ಳುತ್ತಿದ್ದ. ಮನೆಗೆ ಅವನೇ ಆಧಾರಸ್ತಂಭವಾಗಿದ್ದ. ತಾಯಿ-ಮಗ ಇಬ್ಬರೇ ವಾಸವಿದ್ದು, ಇದೀಗ ಮಗನನ್ನ ಕಳೆದುಕೊಂಡು ತಾಯಿಯ ಆಸರೆಗೆ ಯಾರೂ ಇಲ್ಲದಂತಾಗಿದೆ.
ಪ್ರಕರಣ ದಾಖಲಿಸಿಕೊಂಡ ಸಖರಾಯಪಟ್ಟಣ ಪೊಲೀಸರು ಯಶ್‍ಪಾಲ್ ಮೇಲೆ ಹಲ್ಲೆ ಮಾಡಿದ ಚಿಕ್ಕಮಗಳೂರಿನ ನರಿಗುಡ್ಡನಹಳ್ಳಿ ರಘು, ಹೌಸಿಂಗ್ ಬೋರ್ಡ್ ಪ್ರಕಾಶ್, ಕಲ್ಯಾಣ ನಗರದ ಯಶೀಶ್, ತರೀಕೆರೆಯ ಶ್ರೀಧರ್, ಮಂಜುನಾಥ್, ಬೀರೂರು-ಅಜ್ಜಂಪುರ ರಸ್ತೆಯ ಸಂಜಯ್ ಎಂಬ ಆರು ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.