ಫೇಸ್‌ಬುಕ್‌ನಲ್ಲಿ ಫ್ರೆಂಡ್‌ಶಿಫ್: ಹಾಸನದ ಯುವತಿ ಸುಲಿಗೆ ಮಾಡಿದ್ದು ಲಕ್ಷ-ಲಕ್ಷ ಹಣ

By Govindaraj S  |  First Published Nov 18, 2022, 9:05 AM IST

ಹೈದ್ರಾಬಾದ್‌ನಲ್ಲಿ ಕಟ್ಟಡ ಕಾರ್ಮಿಕರ ಸೂಪರ್ ವೈಸರ್ ಆಗಿದ್ದ ಅವನಿಗೆ 30 ಸಾವಿರ ಸಂಬಳ ಬರುತ್ತಿತ್ತು. ಆತ ಮನಸಾರೆ ಪ್ರೀತಿಸುತ್ತಿದ್ದ ಹುಡುಗಿ ಕೇಂದ್ರ ಸರಕಾರದ ಪರೀಕ್ಷೆಗೆ ತಯಾರಿ ನಡೆಸಿದ್ದರಿಂದ ಡಿಸಿ ಆಗುತ್ತಾಳೆ ಎನ್ನುವ ಕನಸು ಕಂಡಿದ್ದ. ಆದರೆ ಆ ಕನಸು ಬಹುದೊಡ್ಡ ದೋಖಾ ತಂದೊಡ್ಡಿದೆ. 


ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ (ನ.18): ಸಾಮಾಜಿಕ ಜಾಲತಾಣ ಬಂದ ಬಳಿಕ ಯಾರು ಯಾರನ್ನ ಬೇಕಾದ್ರು ಸಲೀಸಾಗಿ ವಂಚಿಸಿ ಬಿಡಬಹುದು. ಹಣ ಗಳಿಕೆಗಾಗಿಯೆ ವಂಚಕರು ಸಾಮಾಜಿಕ ಜಾಲತಾಣಗಳನ್ನ ವ್ಯವಸ್ಥಿತವಾಗಿ ಬಳಸಿಕೊಳ್ತಿದ್ದಾರೆ.‌ ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಂಡು ಬಳಿಕ ಹಣಕ್ಕಾಗಿ ಡಿಮ್ಯಾಂಡ್ ಮಾಡೋದು... ಇಲ್ಲವೆ ವಾಟ್ಸಾಪ್‌ಗೆ ವಿಡಿಯೋ ಕರೆ ಮಾಡಿ ಅಶ್ಲೀಲ ದೃಶ್ಯ ತೋರಿಸಿ ಬಳಿಕ ಅದನ್ನ ಎಡಿಟ್ ಮಾಡಿ ಬ್ಲಾಕ್ ಮಾಡುವುದು. ಫೇಕ್ ಫೇಸ್ಬುಕ್ ಐಡಿಗಳನ್ನ ತಯಾರಿಸಿ ಅದರ ಮೂಲಕ ಹಣ ಪಡೆಯುವಂತಹ ಅನೇಕ ಪ್ರಕರಣಗಳು ನಮ್ಮ ಕಣ್ಮುಂದೆ ಇವೆ. ಇದಕ್ಕು ಮಿಗಿಲಾಗಿ ಫೇಸ್ಬುಕ್‌ಗಳಲ್ಲಿ ಪರಿಚಯವಾಗಿ ಪ್ರೀತಿಯ ನಾಟಕವಾಡಿ ಮೋಸ ಮಾಡೋದು ಇದೆ.

Latest Videos

undefined

ಪ್ರೀತಿಯ ಹೆಸ್ರಲ್ಲಿ ನಡೆಯಿತು ಮಹಾ ದೋಖಾ: ಅವಳು UPSC ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು, ಅವನು ಹೈದ್ರಾಬಾದ್‌ನಲ್ಲಿ ಕಟ್ಟಡ ಕಾರ್ಮಿಕರ ಮೇಲಿನ ಸೂಪರ್ ವೈಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಅವಳು UPSC ಪರೀಕ್ಷೆಗೆ ಚೆನ್ನಾಗಿ ತಯಾರಿ ನಡೆಸಲಿ, DC ಆಗಲಿ ಅಂತ ಹಾರೈಸುತ್ತಿದ್ದ, ಅವಳಿಗೆ ಯಾವುದೇ ಹಣಕಾಸಿನ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದ. ಆದರೆ ಮುಂದೆ ನಡೆದಿದ್ದೆ ಬೇರೆ.

ಅವನು ಹೈದ್ರಾಬಾದ್‌ನಲ್ಲಿ ಕಟ್ಟಡ ಕಾರ್ಮಿಕರ ಸೂಪರ್ ವೈಸರ್: ಹೈದ್ರಾಬಾದ್‌ನಲ್ಲಿ ಕಟ್ಟಡ ಕಾರ್ಮಿಕರ ಸೂಪರ್ ವೈಸರ್ ಆಗಿದ್ದ ಅವನಿಗೆ 30 ಸಾವಿರ ಸಂಬಳ ಬರುತ್ತಿತ್ತು. ಆತ ಮನಸಾರೆ ಪ್ರೀತಿಸುತ್ತಿದ್ದ ಹುಡುಗಿ ಕೇಂದ್ರ ಸರಕಾರದ ಪರೀಕ್ಷೆಗೆ ತಯಾರಿ ನಡೆಸಿದ್ದರಿಂದ ಡಿಸಿ ಆಗುತ್ತಾಳೆ ಎನ್ನುವ ಕನಸು ಕಂಡಿದ್ದ. ಆದರೆ ಆ ಕನಸು ಬಹುದೊಡ್ಡ ದೋಖಾ ತಂದೊಡ್ಡಿದೆ. 

Vijayapura; ಗಿಡಮೂಲಿಕೆ ಹೆಸ್ರಲ್ಲಿ ಮಹಾಮೋಸದ ದಂಧೆ, ವಯಸ್ಸಾದ ಶ್ರೀಮಂತರೇ ಇವ್ರ ಟಾರ್ಗೆಟ್!

ಆನ್ಲೈನಲ್ಲಿ ಪರಿಚಯ ಪ್ರೀತಿ ಹೆಸ್ರಲ್ಲಿ ಹಣ ಪಡೆದು ವಂಚನೆ: ಆನ್ಲೈನ್ ನಲ್ಲಿ ಪರಿಚಯವಾಗಿದ್ದ ಹಾಸನ ಮೂಲದ ಹುಡುಗಿಯನ್ನು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿ ಬಗಲೂರು ಗ್ರಾಮದ ಯುವಕನ ನಡುವೆ ಸಲುಗೆ ಬೆಳೆದಿತ್ತು. ಈ ಸಲುಗೆ ಪ್ರೀತಿಗೆ ತಿರುಗಿತ್ತು. ಇಬ್ಬರೂ ಒಬ್ಬರನೊಬ್ಬರು ನೋಡದೆಯೇ ಮನಸಾರೆ ಪ್ರೀತಿಸುತ್ತಿದ್ದರು. ಅವಳ ಓದಿಗಾಗಿ ಮನೆಯಲ್ಲಿ ಕೂಡಿಟ್ಟಿದ್ದ 5 ಲಕ್ಷ ನಗದು ಹಣ, ಒಂದು ಪ್ಲಾಟ್ ಸೇರಿದಂತೆ ಅವಳ ಓದಿಗಾಗಿ ಎಲ್ಲವನ್ನು ಮಾರಿ ಹಣ ಕಳಿಸುತ್ತಿದ್ದ. ಹೀಗೆ ಹಣಕ್ಕಾಗಿ ಬೇಡಿಕೆ - ಪೀಡಿಸುವುದು ಹೆಚ್ಚಾದಾಗ ಗೊತ್ತಾಗಿದ್ದೆ ನಾನು ಆನ್ಲೈನ್ ವಂಚನೆಗೆ ಒಳಗಾಗಿದ್ದೇನೆ ಎಂದು.

ಅಷ್ಟಕ್ಕು ಆಗಿದ್ದೇನು?: ಖಾಸಗಿ ಉದ್ಯೋಗಿಯಾಗಿರುವ ಬಗಲೂರು ಗ್ರಾಮದ ಅಶೋಕಕುಮಾರ್ (ಹೆಸರು ಬದಲಿಸಲಾಗಿದೆ) ಎಂಬ ಯುವಕ ತನಗೆ ಆಗಿರುವ ಮೋಸದ ಕುರಿತು ದಿನಾಂಕ :15.11.2022 ರಂದು ದೂರು ನೀಡಿದ್ದ, ಅದರಲ್ಲಿ ತನಗಾದ ಮೋಸದ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದ. ಮೋಸ ಹೋಗಿರುವ ಯುವಕ ತನ್ನ ಮೊಬೈಲ್ ಮೂಲಕ ತನ್ನ ಅಕೌಂಟ್‌ನಿಂದ ಫೋನ್ ಪೇ ಮಾಡಿರುವುದಾಗಿ ದೂರು ನೀಡಿದ್ದ. 

ಯುವಕ ನೀಡಿದ ದೂರಿನಲ್ಲಿ ಏನೆಲ್ಲ ಇದೆ: ಮೋಸ ಹೋದ ಯುವಕ ನೀಡಿರುವ ದೂರಿನ ಪ್ರಕಾರ, ಜೂನ್ ತಿಂಗಳ 29ರಂದು ಈ ಯುವಕನಿಗೆ,  Manjula.K.R ಎಂಬ ಪೇಸ್ ಬುಕ್ ಐಡಿಯಿಂದ ಫ್ರೆಂಡ್ ರಿಕ್ವೆಸ್ಟ್‌ ಬಂದಿರುತ್ತದೆ. ಆಗ ಈ ಯುವಕ ರಿಕ್ವೆಸ್ಟ್ ಅನ್ನು Confirm ಮಾಡುತ್ತಾನೆ. ನಂತರ ಮೆಸೆಂಜರ್ ನಲ್ಲಿ  Hi ಅಂತಾ ಮೆಸೇಜ್ ಮಾಡಿ, ಇಬ್ಬರ ನಡುವೆ ಫೇಸ್ ಬುಕ್ ಮೂಲಕ ಸಂಪರ್ಕ್ ಬೆಳೆಯುತ್ತದೆ.  ಇದನ್ನೇ ಉಪಯೋಗಿಸಿಕೊಂಡ  ಆ ಯುವತಿ, ನಮ್ಮ ತಾಯಿಗೆ ಆರೋಗ್ಯ ಸರಿ ಇಲ್ಲ, ಅದಕ್ಕೆ 700/- ರೂ ಫೋನ್ ಪೇ ಮಾಡಿ ಅಂತಾ ಮನವಿ ಮಾಡುತ್ತಾಳೆ. ಇದಕ್ಕೆ ಕರಗಿದ ಆತನ ಹೃದಯ ಫೋನ್ ಪೇ ಮಾಡುವಂತೆ ಮಾಡುತ್ತದೆ. 

ಮುಖವನ್ನೆ ನೋಡದೆ ಕೇಳಿದಷ್ಟು ಹಣ ನೀಡಿದ ಯುವಕ: ಇದನ್ನೇ ಬಂಡವಾಳ ಮಾಡಿಕೊಂಡ ಆ ಯುವತಿ ಪದೇ ಪದೇ ಫೋನ್ ಪೇ ಮಾಡಿ, ಯುಪಿಎಸ್ಸಿ ಪರೀಕ್ಷೆ ಬರೆಯುತ್ತಿದ್ದು ಹಣ ನೀಡುವಂತೆ ಕೇಳುತ್ತಿರುತ್ತಾಳೆ. ಅದನ್ನೇ ನಂಬಿದ ಈ ಯುವಕ ಇಲ್ಲಿಯವರೆಗೆ ಸುಮಾರು 40 ಲಕ್ಷ ರೂಪಾಯಿ ಅವಳಿಗೆ ಕಳಿಸಿದ್ದಾನೆ. ಅದೂ ಕೂಡಾ ಒಂದು ದಿನವೂ ಅವಳ ಮುಖ ನೋಡಿಲ್ಲ, ಕನಿಷ್ಠ ಪಕ್ಷ ಒಂದು ವಿಡಿಯೋ ಕಾಲ್ ಕೂಡಾ ಮಾಡಿಲ್ಲ. ಮುಖವನ್ನೂ ಕೂಡಾ ಒಬ್ಬರನೊಬ್ಬರು ನೋಡಿಲ್ಲ ಎನ್ನುವುದೇ ಆಶ್ಚರ್ಯ.

ಡಿಸಿ ಆದೆ ಎಂದು ಬುರುಡೆ, ಮದುವೆಯಾಗುವ ಭರವಸೆ: ಕೆಲವು ದಿನಗಳ ಬಳಿಕ ಯುವಕನಿಗೆ ಫೋನ್ ಮಾಡಿದ ಮಂಜುಳಾ ತಾನು ಐಎಎಸ್ ಪರೀಕ್ಷೆ ಪಾಸ್ ಮಾಡಿದ್ದು, ಡಿಸಿ ಪೋಸ್ಟ್ ಸಿಗುತ್ತದೆ. ಸಧ್ಯ ಹಾಸನದಲ್ಲಿದ್ದು ನನ್ನನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಅದಕ್ಕೆ ಬೆಂಗಳೂರಿಗೆ ಹೋಗಬೇಕು. ಅಲ್ಲಿ ಖರ್ಚಿಗೆ ಹಣ ಇಲ್ಲ. ಹಣಕಾಸಿನ ಸಹಾಯ ಮಾಡಿದರೆ ಮದುವೆಯಾಗುತ್ತೇನೆ ಎಂದು ಹೇಳಿದ್ದಾಳೆ. ಅದನ್ನೂ ನಂಬಿದ ಮುಗ್ದ ಯುವಕ ಮತ್ತೆ ಹಣ ಹಾಕಿದ್ದಾನೆ.

40 ಲಕ್ಷಕ್ಕೂ ಅಧಿಕ ಹಣ ಪೀಕಿದಳು: ಕೆಲವು ದಿನಗಳ ಬಳಿಕ ಪೇಸ್ಬುಕ್ ಫ್ರೆಂಡ್ ಮಂಜುಳಾ ಮತ್ತಷ್ಟು ಸಲುಗೆಯಿಂದ ನಡೆದುಕೊಂಡಿದ್ದು ಅದನ ನಂಬಿದ ಯುವಕ ತನ್ನ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 40 ಲಕ್ಷ ರೂಪಾಯಿಗಳನ್ನು ಮಂಜುಳಾ ಖಾತೆಗೆ ರವಾನಿಸಿದ್ದಾನೆ. ಅಲ್ಲದೇ, ಫೋನ್ ಪೇ ಹಣ ಸೇರಿ ಒಟ್ಟು 41,26,800 ರೂ. ಮಂಜುಳಾಗೆ ನೀಡಿದ್ದಾನೆ. ಆ ಬಳಿಕ ಮಂಜುಳಾ ಹತ್ತಿರವೇ ತನ್ನ ಖರ್ಚಿಗೆ ಹಣವಿಲ್ಲವೆಂದು ಮರಳಿ 2,21,930 ರ ವಾಪಸ್ ಪಡೆದಿದ್ದಾನೆ. 

ಕೊನೆಗೆ ಸಿಇಎನ್ ಪೊಲೀಸರಿಗೆ ದೂರು ನೀಡಿದ ಯುವಕ: ಮಂಜುಳಾ ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇರಿಸುತ್ತಿದ್ದರಿಂದ ಯುವಕನಿಗೆ ಸಂಶಯ ಬಂದು ತಾನು ಮೋಸ ಹೋಗುತ್ತಿರುವುದಾಗಿ ತಿಳಿದು ಇದೀಗ ಅಂದರೆ ನ.15ರಂದು ಆಕೆಯ ವಿರುದ್ದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

Vijayapura: ಉರುಸ್ ವೇಳೆ ದಲಿತ ಯುವಕನನ್ನ ಕಟ್ಟಿ ಹಾಕಿ ಥಳಿತ: 14 ಜನರ ಬಂಧನ

ಎಸ್ಪಿ ಹೆಚ್ ಡಿ ಆನಂದಕುಮಾರ್ ಹೇಳಿದ್ದಿಷ್ಟು: ಈ ಆನ್ಲೈನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖಾ ತಂಡ ರಚಿಸಲಾಗಿದೆ. ಶೀಘ್ರದಲ್ಲಿಯೇ ಪ್ರಕರಣ ಭೇದಿಸಲಾಗುವುದು, ದೂರುದಾರನಿಗೆ ನ್ಯಾಯ ಒದಗಿಸುತ್ತೇವೆ.

ಯುವತಿಗಾಗಿ ಸಿಇಎನ್ ಪೊಲೀಸರ ಶೋಧ: ಅಮಾಯಕ ಯುವಕನಿಗೆ ಮೋಸ ಮಾಡಿದ ಯುವತಿಗಾಗಿ ಸಿಇಎನ್ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆಕೆಯ ಇರುವಿಕೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಕೆಲ ಸ್ಥಳಗಳಿಗೆ ಪೊಲೀಸ್ ಸಿಬ್ಬಂದಿ ಭೇಟಿ ಆಕೆ ಇರುವ ಜಾಗೆಯನ್ನ ಪತ್ತೆ ಹಚ್ಚಿದ್ದಾರೆ ಎನ್ನುವ ಮಾಹಿತಿಗಳು ಇವೆ.

click me!