ಬಂಧಿತರಿಂದ 8 ಕೇಜಿ 504 ಗ್ರಾಂ ಅಕ್ರಮ ಗಾಂಜಾ ಮತ್ತು ಒಂದು ಕಾರು, ಎಲೆಕ್ಟ್ರಾನಿಕ್ ತೂಕದ ಯಂತ್ರ ವಶ|ಚಿಕ್ಕಮಗಳೂರು ಜಿಲ್ಲೆತ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಬಳಿಯ ಉಡೇವಾ ಬಳಿ ನಡೆದ ಘಟನೆ|
ತರೀಕೆರೆ(ನ.27): ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ 4 ಜನ ಆರೋಪಿಗಳನ್ನು ಬಂಧಿಸಿ, ಇವರಿಂದ 8 ಕೇಜಿ 504 ಗ್ರಾಂ ಅಕ್ರಮ ಗಾಂಜಾ ಮತ್ತು ಒಂದು ಕಾರು, ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಪೋಲಿಸರು ವಶ ಪಡಿಸಿಕೊಂಡ ಘಟನೆ ಬುಧವಾರ ಸಮೀಪದ ಲಿಂಗದಹಳ್ಳಿ ಬಳಿಯ ಉಡೇವಾ ಬಳಿ ನೆಡೆದಿದೆ.
ಜಿಲ್ಲಾ ಪೋಲೀಸ್ ಅಧೀಕ್ಷಕ ಎಂ.ಎಚ್.ಅಕ್ಷಯ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶೃತಿ, ತರೀಕೆರೆ ಡಿವೈಎಸ್‌ಪಿ ರೇಣುಕಪ್ರಸಾದ್, ತರೀಕೆರೆ ವೃತ್ತ ನಿರೀಕ್ಷಕ ಕೆ.ಎಂ. ಯೋಗೇಶ್ ಅವರ ಮಾರ್ಗದರ್ಶನದಂತೆ ಬುಧವಾರ ಚಿಕ್ಕಮಗಳೂರಿನಿಂದ ತರೀಕೆರೆ ಕಡೆಗೆ ಲಿಂಗದಹಳ್ಳಿ ಮಾರ್ಗವಾಗಿ ಕಾರ್‌ನಲ್ಲಿ ಗಾಂಜಾ ಸೊಪ್ಪು ಮಾರಾಟ ಮಾಡಲು ತೆರಳುತ್ತಿರುವ ಮಾಹಿತಿ ಮೇರೆಗೆ ಪತ್ರಾಂಕಿತ ಅಧಿಕಾರಿ, ಪಶು ವೈದ್ಯಾಧಿಕಾರಿ ಬಸವರಾಜ್, ಪಂಚರು ಮತ್ತು ಸಿಬ್ಬಂದಿ ಆನಂದ, ದಿನೇಶ, ಮಂಜುನಾಥ್ ಮತ್ತು ಜೀಪ್ ಚಾಲಕ ಉಮೇಶ್ ಅವರೊಂದಿಗೆ ಉಡೇವಾ ಗ್ರಾಮದ ಬಳಿ ದಾಳಿ ನಡೆಸಿ ಕಾರು ತಪಾಸಣೆ ನಡೆಸಿದ್ಗಾ ಇಬ್ಬರು ಪರಾರಿಯಗಿದ್ದಾರೆ.
ಬಳ್ಳಾರಿ: ಹೊಲದಲ್ಲಿ ಬೆಳೆದಿದ್ದ 1.75 ಲಕ್ಷ ರು. ಮೌಲ್ಯದ ಗಾಂಜಾ ವಶ
ಕಾರಿನಲ್ಲಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿ ನಿಖಿಲ್ ಎಚ್.ಎಂ, ಚಿಕ್ಕಮಗಳೂರು ಕಲ್ದೊಡ್ಡಿಯ ಸಂಜಯ್ ಯಾನೆ ಸಂಜು, ಭದ್ರಾವತಿಯ ದೊಡ್ಡಗೊಪ್ಪೇನಹಳ್ಳಿ ಭರತ್, ಚಿಕ್ಕಮಗಳೂರು ಕಲ್ದೊಡ್ಡಿಯ ದೀಪಕ್ ಅವರನ್ನು ವಿಚಾರಣೆ ಮಾಡಿದಾಗ ಗಾಂಜಾ ಗಿಡದ ಒಣಗಿದ ಬೀಜ, ಹೂ ಮೊಗ್ಗು ಮಿಶ್ರಿತ ಸೊಪ್ಪುಗಳನ್ನು ಮಾರಾಟ ಮಾಡಲು ಹೋಗುತ್ತಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಆರೋಪಿಗಳಿಂದ 8 ಕೇಜಿ 504 ಗ್ರಾಂ ಅಕ್ರಮ ಗಾಂಜಾ, ಕಾರು ಮತ್ತು ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಾಗಿದ್ದು, ತನಿಖೆ ನೆಡೆಯುತ್ತಿದೆ ಎಂದು ಪೋಲೀಸರು ತಿಳಿಸಿದ್ದಾರೆ.