ಮದ್ವೆ ಮನೆಗೆ ಹೊರಟಿದ್ದರವರು ಮಸಣಕ್ಕೆ, ಸಂಭ್ರಮ ತುಂಬಿದ್ದ ಮನೆಯಲ್ಲಿ ಸೂತಕದ ಛಾಯೆ!

By Suvarna News  |  First Published May 27, 2022, 4:54 PM IST

* ಮದುವೆ ಮನೆಗೆ ಹೊರಟಿದ್ದರವರು ಮಸಣಕ್ಕೆ
* ಸಂಭ್ರಮ ತುಂಬಿದ್ದ ಮನೆಯಲ್ಲಿ ಸೂತಕದ ಛಾಯೆ
* ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಸ್ಥವನಿಧಿ ಘಾಟ್ ನಲ್ಲಿ ಘಟನೆ


ವರದಿ: ಮುಷ್ತಾಕ್ ಪೀರಜಾದೇ. ಏಷ್ಯಾನೆಟ್ ಸುವರ್ಣನ್ಯೂಸ್

ಚಿಕ್ಕೋಡಿ, (ಮೇ.27):  
ರಾಷ್ಟ್ರೀಯ ಹೆದ್ದಾರಿ ಮೇಲೆ ಬೆಳ್ಳಂಬೆಳಗ್ಗೆಯೇ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದಾನೆ. ಮದುವೆ ಮನೆಗೆ ಖುಷಿಯಿಂದ ಹೊರಟಿದ್ದವರನ್ನು ನಡುದಾರಿಲ್ಲಿಯೇ ಪ್ರಾಣ ಬಿಡುವಂತೆ ಮಾಡಿದ್ದಾನೆ‌. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಸ್ಥವನಿಧಿ ಘಾಟ್ ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವವರು ಸಾವನ್ನಪ್ಪಿದ್ದಾರೆ. 

ನಿಪ್ಪಾಣಿಯ ಬೋರಾಗಾಂವ್ ವಾಡಿಯ ಅದಗೌಡ ಪಾಟೀಲ್, ಪತ್ನಿ ಛಾಯಾ ಪಾಟೀಲ್ ಮಗ ಮಹೇಶ್ ಪಾಟೀಲ್ ಹಾಗೂ ಅದಗೌಡ ತಾಯಿ ಚಪ್ಪಾತಾಯಿ ಪಾಟೀಲ್ ಅಪಘಾತದಲ್ಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ‌. ಕಳೆದ ವರ್ಷವೂ ಸಹ ಇದೇ ಜಾಗದಲ್ಲಿ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ೮ ಜನ ಸಾವನ್ನಪ್ಪಿದ್ದರು. ರಾಷ್ಟ್ರೀಯ ಹೆದ್ದಾರಿ ಸಾವಿನ ಹೆದ್ದಾರಿಯಾಗ್ತಿದೆ. ಹೀಗಾಗಿ ಇಲ್ಲೊಂದು ಪ್ಲೈ ಓವರ್ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ..

Latest Videos

undefined

16 ವರ್ಷದ ಬಾಲಕಿಯನ್ನು ಬಲಿ ಪಡೆದ ಶಾಲಾ ಬಸ್!

ನಿಪ್ಪಾಣಿಯ ಸ್ಥವನಿಧಿ ಘಾಟ್ ಬಳಿ ತಿರುವುಗಳಿರುವುದರಿಂದ ಗೂಡ್ಸ್ ತುಂಬಿಕೊಂಡು ಬರುವ ದೊಡ್ಡ ದೊಡ್ಡ ಲಾರಿಗಳು ನಿಯಂತ್ರಣ ತಪ್ಪುವ ಸಾಧ್ಯತೆಗಳು ಹೆಚ್ಚು. ಇವತ್ತಾಗಿದ್ದು ಅದೇ.. ಬೆಂಗಳೂರಿನ ಕಡೆಯಿಂದ ಪುಣೆ ಕಡೆಗೆ ಹೊರಟಿದ್ದ ಗೂಡ್ಸ್ ತುಂಬಿಕೊಂಡಿದ್ದ ಲಾರಿ ಅದಗೌಡ ಪಾಟೀಲ್ ಹಾಗೂ ಕುಟುಂಬಸ್ಥರಿರುವ ಕಾರಿಗೆ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ.

ಇನ್ನು ಘಟನೆ ನಡೆದ ಸ್ಥಳಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಅಲ್ಲದೆ ಈಗಾಗಲೇ ನಾಲ್ಕು ಪಥದಲ್ಲಿರುವ ಈ ಹೆದ್ದಾರಿಯನ್ನು ೬ ಪಥ ಮಾಡಲು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದು ಪ್ಪೈ ಓವರ್ ಸಹ ನಿರ್ಮಾಣ ಆಗುತ್ತೆ ಇದರಿಂದ ಇಂತಹ ದುರ್ಘಟನೆಗಳು ನಡೆಯೋದು ತಪ್ಪುತ್ತೆ ಅಂದ್ರು.

ಒಟ್ಟಿನಲ್ಲಿ ನಿಪ್ಪಾಣಿಯ ಸ್ಥವನಿಧಿ ಘಾಟ್ ಬಳಿ ಪದೇ ಪದೇ ಅಪಘಾತಗಳು ಸಂಭವಿಸಿದ್ದು.ಅಪಘಾತಗಳಲ್ಲು  ಸಾರ್ವಜನಿಕರು ತಮ್ಮ ಪ್ರಾಣ ತೆರುತ್ತಿದ್ದಾರೆ‌.‌ಹೀಗಾಗಿ ಸರ್ಕಾರ ಆದಷ್ಟು ಬೇಗ 6 ಪಥದ ಹೆದ್ದಾರಿ ಹಾಗೂ ಪ್ಲೈಓವರ್ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

click me!