
ಬೆಂಗಳೂರು (ಜು. 31): ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಟ್ರ್ಯಾಪ್ ಮಾಡಿ ವಿಕೃತಿ ಮೆರೆದು ದೋಚುತಿದ್ದ ಗ್ಯಾಂಗನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು (Mahalakshmi Layout) ಬಂಧಿಸಿದ್ದಾರೆ. ಮಂಗಳ, ರವಿ, ಶಿವಕುಮಾರ, ಶ್ರೀನಿವಾಸ್ ಬಂಧಿತ ಅರೋಪಿಗಳು. ಮಂಗಳ ಮತ್ತು ರವಿ ಇಬ್ಬರೂ ಗಂಡ ಹೆಂಡತಿ. ಡಿವೋರ್ಸ್ ಆಗಿರೋರು ಅಥವಾ ವಿಧವೆಯರನ್ನು ಹುಡುಕುತ್ತಿದ್ದ ಆರೋಪಿಗಳು ಪರಿಚಯ ಮಾಡಿಕೊಳ್ಳತಿದ್ದರು.
ಬಂಧಿತ ಮಹಿಳೆ ಅವರನ್ನ ಪರಿಚಯ ಮಾಡಿಕೊಂಡು ನಂಬಿಕೆ ಗಳಿಸಿಕೊಳ್ಳುತಿದ್ದಳು. ಬಳಿಕ ಫೋನ್ ಮಾಡಿ ಮೀಟ್ ಮಾಡೋಕೆ ಕರೆಯುತ್ತಿದ್ದಳು. ಮೀಟ್ ಮಾಡಲು ಬಂದ ಮಹಿಳೆಯರನ್ನು ಆರೋಪಿಗಳು ಕಾರು ಹತ್ತಿಸಿಕೊಂಡು ಕಿಡ್ನಾಪ್ ಮಾಡಿ ನಿರ್ಜನ ಪ್ರದೇಶದಕ್ಕೆ ಕರೆದುಕೊಂಡು ಹೋಗುತಿದ್ದರು.
ಬೆತ್ತಲೆ ವಿಡಿಯೋ ಮಾಡಿ ಬ್ಲಾಕ್ ಮೇಲ್: ಬಳಿಕ ನಿರ್ಜನ ಪ್ರದೇಶದಲ್ಲಿ ಕಿಡ್ನಾಪ್ ಮಾಡಿದ್ದ ಮಹಿಳೆಗೆ ಬಟ್ಟೆ ಬಿಚ್ಚಲು ಒತ್ತಾಯಿಸುತಿದ್ದರು. ಒಪ್ಪದೆ ಇದ್ದಾಗ ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸುತಿದ್ದರು. ನಂತರ ನಗ್ನ ವಿಡಿಯೋ ಮಾಡಿ ಮೊಬೈಲ್‌ನಲ್ಲಿ ಇಟ್ಟುಕೊಳ್ತಿದ್ದ ಆರೋಪಿಗಳು ಮಹಿಳೆಯರನ್ನು ಬ್ಲಾಕ್ ಮೇಲ್ ಮಾಡುತಿದ್ದರು.
ಸಾಲ ಕಟ್ಟದ್ದಕ್ಕೆ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ, ಮೂವರ ಬಂಧನ
ಬ್ಲಾಕ್‌ಮೇಲ್ ಮಾಡಿ ಮಹಿಳೆಯರ ಬಳಿ ಹಣ ಹಾಕಿಸಿಕೊಳ್ಳತಿದ್ದರು. ಇದೇ ರೀತಿ ಆರೋಪಿಗಳು ಮಹಾಲಕ್ಷ್ಮಿ ಲೇಔಟಿನ ಮಹಿಳೆಯೋರ್ವರಿಂದ ಒಂದು ಚಿನ್ನದ ಚೈನ್, ಕಿವಿ ಓಲೆ , ಉಂಗುರ ಕಿತ್ತುಕೊಂಡಿದ್ದರು. ಅಲ್ಲದೇ ಬ್ಲಾಕ್ ಮೇಲ್ ಮಾಡಿ 84 ಸಾವಿರ ಹಾಕಿಸಿಕೊಂಡಿದ್ದರು.
ಮಹಿಳೆಗೆ ಮತ್ತೆ ಮತ್ತೆ ಇದೇ ರೀತಿ ಆರೋಪಿಗಳು ಕಿರುಕುಳ ನೀಡುವುದನ್ನು ಮುಂದುವರೆಸಿದ್ದರು. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ಮಹಿಳೆ ದೂರು ನೀಡಿದ್ದರು. ಪ್ರಕರಣ ಸಂಬಂಧ ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ