ನಾಟಕ ನೋಡಲು ಹೊರಟವರ ಮೇಲೆ ಹರಿದ ಪಲ್ಸರ್ 200cc ಬೈಕ್; ನಾಲ್ವರು ದುರ್ಮರಣ!

By Suvarna News  |  First Published Sep 6, 2024, 9:32 AM IST

ಯುವಕರಿಬ್ಬರ ಬೈಕ್ ವ್ಹೀಲಿಂಗ್ ಹುಚ್ಚಿಗೆ ಅವರೂ ಸೇರಿ ನಾಲ್ವರು ಬಲಿಯಾಗಿರುವ ಭಯಾನಕ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ‌ ನಡೆದಿದೆ. ಘಟನೆಯಲ್ಲಿ ಇನ್ನಿಬ್ಬರ ಸ್ಥಿತಿಯು ಗಂಭೀರವಾಗಿದೆ.


- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಸೆ.06) : ಯುವಕರಿಬ್ಬರ ಬೈಕ್ ವ್ಹೀಲಿಂಗ್ ಹುಚ್ಚಿಗೆ ಅವರೂ ಸೇರಿ ನಾಲ್ವರು ಬಲಿಯಾಗಿರುವ ಭಯಾನಕ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ‌ ನಡೆದಿದೆ. ಘಟನೆಯಲ್ಲಿ ಇನ್ನಿಬ್ಬರ ಸ್ಥಿತಿಯು ಗಂಭೀರವಾಗಿದೆ.

Tap to resize

Latest Videos

undefined

ತಡರಾತ್ರಿ ನಾಲ್ವರು ಯುವಕರ ಬಲಿ ಪಡೆದ ಪಲ್ಸರ್ ಬೈಕ್!

ಇಂಥಹ ವಿದ್ರಾವಕ ಘಟನೆ ಗುರುವಾರ ಮಧ್ಯರಾತ್ರಿ ಕುಂಟೋಜಿ ಗ್ರಾಮದ ಹತ್ತಿರ ಮುದ್ದೇಬಿಹಾಳ-ತಾಳಿಕೋಟೆ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಎಲ್ಲರೂ ಯುವಕರೇ ಇದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಓರ್ವ ಬಾಗಲಕೋಟ ಜಿಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಬೆಳಗಿನ ಜಾವ ಮೃತನಾಗಿದ್ದಾನೆ. ಮೃತರೆಲ್ಲರೂ ಮಲಗಲದಿನ್ನಿ ಗ್ರಾಮದವರು ಎಂದು ಹೇಳಲಾಗಿದೆ.

ವ್ಹೀಲಿಂಗ್ ಹುಚ್ಚು.. ಸಾವರ ಸೇರಿ ಯುವಕ ಸಾವು..!

ಕುಂಟೋಜಿ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ನಡೆಯುತ್ತಿದೆ. ಈ ಜಾತ್ರೆಯ ಅಂಗವಾಗಿ ವಿವಿಧ ಶಕ್ತಿ ಪ್ರದರ್ಶನದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು, ಜೊತೆಗೆ ರಾತ್ರಿ ನಾಟಕ ಪ್ರದರ್ಶನವು ನಡೆಯುತ್ತಿತ್ತು. ನಾಟಕ ನೋಡಲು ಸುತ್ತಲಿನ ಹಳ್ಳಿಗಳ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇವರಲ್ಲಿ ಕೆಲವು ಯುವಕರು ರಸ್ತೆ ಪಕ್ಕದಲ್ಲಿ ಮೂತ್ರ ವಿಸರ್ಜಿಸುವಾಗ ವ್ಹೀಲಿಂಗ್ ಬೈಕ್ ಆಯತಪ್ಪಿ ಇವರೆಲ್ಲರಿಗೂ ವೇಗವಾಗಿ ಬಂದು ಗುದ್ದಿದೆ. ಪರಿಣಾಮ ಬೈಕ್ ಸವಾರರೂ ಸೇರಿ ಮೂವರು ತಲೆಗೆ ಭಾರೀ ಪೆಟ್ಟಾಗಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದರು. ನಾಲ್ವರಿಗೆ ಗಾಯಗಳಾಗಿವೆ.

ರಾಯಚೂರಲ್ಲಿ ಭೀಕರ ಅಪಘಾತ ಪ್ರಕರಣ; ಚಿಕಿತ್ಸೆ ಫಲಿಸದೇ ಇಬ್ಬರು ವಿದ್ಯಾರ್ಥಿಗಳು ದುರ್ಮರಣ!

ನಾಟಕ‌ ನೋಡಲು ಬಂದವರು ಸಾವಿನ ಮನೆಗೆ..!

ಬಸವೇಶ್ವರ ಜಾತ್ರೆ ಅಂಗವಾಗಿ ರಾತ್ರಿ ನಡೆಯುತ್ತಿದ್ದ ನಾಟಕ ನೋಡಲು ಕಿಕ್ಕಿರಿದು ಜನ ಸೇರಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಯುವಕರು ನಾಟಕ ನೋಡಿ ಎಂಜಾಯ್ ಮಾಡಲು ಬಂದಿದ್ದಾರೆ. ಆದ್ರೆ ವ್ಹೀಲಿಂಗ್ ಮಾಡುತ್ತ ಶೋಅಫ್ ಕೊಡ್ತಿದ್ದ ಲಿಂಗರಾಜ್ ಚೌಧರಿ ಸೇರಿ ಇಬ್ಬರು ಯುವಕರು ಜಾತ್ರೆಯಲ್ಲಿ ನಡೆದುಕೊಂಡು ಸಾಗ್ತಿದ್ದ ಯುವಕರ ಗುಂಪಿನ ಮೇಲೆ ಬೈಕ್ ಹರಿಸಿದ್ದಾರೆ.‌. 

ಅದು ಪಲ್ಸರ್ 200cc ಬೈಕ್..!

ಇನ್ನೂ ಈ ವ್ಹೀಲಿಂಗ್ ವೇಳೆ ನಾಲ್ವರ ಬಲಿ ಪಡೆದ ಬೈಕ್ ಪಲ್ಸರ್ 200cc ಎನ್ನಲಾಗಿದೆ. ಅತಿ ವೇಗವಾಗಿ ಸಾಗುತ್ತಿದ್ದ ಬೈಕ್ ಮೇಲೆ ಯುವಕರು ವ್ಹೀಲಿಂಗ್ ಮಾಡಲು ಹೋಗಿ ತಮ್ಮ ಸಾವಿನ ಜೊತೆಗೆ ಇತರೆ ಯುವಕರನ್ನು ಬಲಿ ಪಡೆದಿದ್ದಾರೆ. ರಾತ್ರಿ ಹೊತ್ತಲ್ಲಿ ವ್ಹೀಲಿಂಗ್ ಮಾಡ್ತಿದ್ರು ಅನ್ನೋದೆ ಇಲ್ಲಿ ಅಚ್ಚರಿಯ ವಿಷಯವಾಗಿದೆ. 

ಗಾಯಾಳುಗಳ ರಕ್ಷಣೆ ಮಾಡಿದ ಕವಚ ಸಿಬ್ಬಂದಿ..!

ವಿಷಯ ತಿಳಿದ ಕೂಡಲೇ ಆರೋಗ್ಯ ಕವಚ ಅಂಬ್ಯೂಲೆನ್ಸ್ ಇಎಂಟಿ, ಚಲನಚಿತ್ರ ನಟರೂ ಆಗಿರುವ ಶ್ರೀಶೈಲ ಹೂಗಾರ ಸಿಬ್ಬಂದಿ ಸಮೇತ ಸ್ಥಳಕ್ಕೆ ಧಾವಿಸಿ‌ ಗಾಯಾಳುಗಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿದರು. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದರಿಂದ ಬಾಗಲಕೋಟೆಗೆ ಕರೆದೊಯ್ಯಲಾಗಿತ್ತು. ಅವರಲ್ಲಿ ಒಬ್ಬ ಸಾವನ್ನಪ್ಪಿದ. ಇನ್ನೊಬ್ಬನ ಸ್ಥಿತಿಯೂ ಗಂಭೀರವಾಗಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಕಾನೂನು ಕ್ರಮ ಕೈಕೊಂಡಿದ್ದು ಪ್ರಕರಣ ದಾಖಲಾಗಿದೆ. ಮೃತರಲ್ಲಿ ಇಬ್ಬರನ್ನು ಮಲಗಲದಿನ್ನಿಯ ರಾಯಪ್ಪ ಬಾಗೇವಾಡಿ, ಹಣಮಂತ್ರಾಯ ಕುರುಬಗೌಡ್ರ ಎಂದು ಗುರ್ತಿಸಲಾಗಿದೆ. ಇನ್ನಿಬ್ಬರು ಹೆಸರು ತಕ್ಷಣಕ್ಕೆ ತಿಳಿದುಬಂದಿಲ್ಲ.

click me!