ಕಿಲ್ಲಿಂಗ್‌ ಸ್ಟಾರ್‌ನ ಕರಾಳ ಮುಖ: ರೇಣುಕಾಸ್ವಾಮಿಯ ಅಶ್ಲೀಲ ಮೆಸೇಜ್‌ ಓದ್ತಾ ಓದ್ತಾ ಚಚ್ಚಿದ ದರ್ಶನ್‌..!

By Kannadaprabha News  |  First Published Sep 6, 2024, 6:54 AM IST

ನಾನು ದೊಡ್ಡ ನಟ ಹಾಗೂ ನನಗೆ ಲಕಾಂತರ ಅಭಿಮಾನಿಗಳ ಬಳಗವಿದೆ. ನಾನೇನೇ ಮಾಡಿದರೂ ದಕ್ಕಿಸಿಕೊಳ್ಳುವೆ. ನನ್ನನ್ನು ಯಾರು ಏನೂ ಮಾಡಲು ಸಾಧ್ಯವಿಲ್ಲ ಎಂಬ ಅಹಂಭಾವದಿಂದಲೇ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿ ದರ್ಶನ ಕೊಂದಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. 


ಗಿರೀಶ್ ಮಾದೇನಹಳ್ಳಿ 

ಬೆಂಗಳೂರು(ಸೆ.06):  ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕಳುಹಿಸಿದ್ದ ಅಶ್ಲೀಲ ಸಂದೇಶಗಳನ್ನು ಓದುತ್ತಲೇ 'ಕಾಮಿಷ್ಟ' ಎಂದು ಆಕ್ರೋಶ ವ್ಯಕ್ತಪಡಿಸಿ ಆತನ ಮೇಲೆ ನಟ ದರ್ಶನ್ ಹಲ್ಲೆ ನಡೆಸಿದ್ದರು ಎಂಬ ಮಾಹಿತಿ ಆರೋಪಪಟ್ಟಿಯಲ್ಲಿ ಉಲ್ಲೇಖವಾಗಿದೆ. 

Tap to resize

Latest Videos

ನಾನು ದೊಡ್ಡ ನಟ ಹಾಗೂ ನನಗೆ ಲಕಾಂತರ ಅಭಿಮಾನಿಗಳ ಬಳಗವಿದೆ. ನಾನೇನೇ ಮಾಡಿದರೂ ದಕ್ಕಿಸಿಕೊಳ್ಳುವೆ. ನನ್ನನ್ನು ಯಾರು ಏನೂ ಮಾಡಲು ಸಾಧ್ಯವಿಲ್ಲ ಎಂಬ ಅಹಂಭಾವದಿಂದಲೇ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿ ದರ್ಶನ ಕೊಂದಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದ್ದು ಇದರಲ್ಲಿ ಕೆಲ ಅಂಶಗಳು 'ಕನ್ನಡಪ್ರಭ'ಕ್ಕೆ ಲಭ್ಯವಾಗಿವೆ. ತಮ್ಮ ಪ್ರಿಯತಮೆ ಪವಿತ್ರಾ ಗೌಡಗೆ ಗುಪ್ತಾಂಗದ ಫೋಟೋ ಕಳುಹಿಸಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಅಪಹರಿಸಿ ಪಟ್ಟಣಗೆರೆ ಶೆಡ್ ಗೆ ಸಹಚರರ ಮೂಲಕ ದರ್ಶನ್ ಕರೆತಂದಿದ್ದರು. ಆಗ ಶೆಡ್‌ನಲ್ಲಿ ಮೃತನ ಮೊಬೈಲ್ ಕಸಿದುಕೊಂಡು ಆಶ್ಲೀಲ ಸಂದೇಶಗಳನ್ನು ಓದುತ್ತಲೇ ಮನಬಂದಂತೆ ದರ್ಶನ್ ಚಚ್ಚಿದ್ದರು. ಆತನ ಎದೆ ಹಾಗೂ ಮರ್ಮಾಂಗದ ಮೇಲೆ ದರ್ಶನ್ ಕಾಲಿಟ್ಟು ಕ್ರೌರ್ಯ ಮೆರೆದಿ ದ್ದರು. ದರ್ಶನ್ ಹಲ್ಲೆ ನಡೆಸಿದರಿಂದ ತಾವೂ ಪ್ರೇರಣೆಗೊಂಡ ಅವರ ಸಹಚರರು ಸಹ ರೇಣುಕಾಸ್ವಾಮಿ ಮೇಲೆ ಮುಗಿಬಿದ್ದರು.

ಕೊಲೆ ಉದ್ದೇಶಕ್ಕಾಗಿ ದರ್ಶನ್ ಕಿಡ್ನಾಪ್ ಮಾಡಿಸಿದ್ದ ನಟ ದರ್ಶನ್, ಚಾರ್ಜ್‌ಶೀಟ್‌ನಲ್ಲಿ ಬಹಿರಂಗ!

ಈ ಹೊಡೆತಗಳಿಂದ ಜರ್ಜರಿತನಾಗಿ ರೇಣುಕಾ ಸ್ವಾಮಿ ಕೊನೆಯುಸಿರೆಳೆದಿದ್ದಾನೆ. ರೇಣುಕಾ ಸ್ವಾಮಿಗೆ ನೈಲಾನ್ ಹಗ್ಗ, ಮರದ ರೆಂಬೆಗಳು ಹಾಗೂ ಲಾಠಿಯಿಂದ ಹೊಡೆದು, ಮಗ್ಗರ್ ನಿಂದ ವಿದ್ಯುತ್ ಶಾಕ್ ಕೊಟ್ಟು ಆರೋಪಿಗಳು ಹಿಂಸಿಸಿದರು ಎಂದು ಉಲ್ಲೇಖವಾಗಿದೆ. ಕಾಲಿಗೆ ಬೀಳಿಸಿ ಕ್ಷಮೆ ಕೇಳಿಸಿದ್ದ ದರ್ಶನ್: ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿಯನ್ನು ಕರೆತಂದ ಸಂಗತಿಯನ್ನು ಆರ್.ಆರ್.ನಗರದ ಸ್ಪೋನಿ ಬ್ರೂಕ್ ಪಬ್‌ನಲ್ಲಿ ಪಾರ್ಟಿಯಲ್ಲಿದ್ದ ದರ್ಶನ್‌ಗೆ ಅವರ ಆಪ್ತ ಪವನ್ ತಿಳಿಸುತ್ತಾನೆ. ಅಲ್ಲದೆ ಈಗಾಗಲೇ ಒಂದು ಸುತ್ತು ಆತನಿಗೆ ನಾನು, ರಾಘವೇಂದ್ರ, ನಂದೀಶ್ ಹಾಗೂ ಧನರಾಜ್ ಹೊಡೆದಿದ್ದಾಗಿ ಸಹ ದರ್ಶನ್‌ಗೆ ಪವನ್ ಹೇಳುತ್ತಾನೆ. ಆಗ ತನ್ನ ಪ್ರಿಯತಮೆ ಪವಿತ್ರಾಗೌಡಳಿಗೆ ಕರೆ ಮಾಡುವ ದರ್ಶನ್, ನೀನು ಹೇಳಿದಂತೆ ನಿನಗೆ ಮೆಸೇಜ್ ಮಾಡು ತ್ತಿದ್ದವನನ್ನು ಕರೆತಂದಿದ್ದಾರೆ. ನಾನು ಬಂದು ಪಟ್ಟಣಗೆರೆ ವಿನಯ್ ಶೆಡ್‌ಗೆ ಕರೆದೊ ಯ್ಯುತ್ತೇನೆ ಎಂದು ಹೇಳಿದ್ದರು. ನಂತರ ಮನೆ ಯಿಂದ ಆಕೆಯನ್ನು ಕರೆದುಕೊಂಡು ಶೆಡ್‌ ಗೆ ದರ್ಶನ್ ತೆರಳಿದ್ದರು. ಆಗ ನಿತ್ರಾಣನಾಗಿದ್ದ ರೇಣುಕಾ ಸ್ವಾಮಿ, ದರ್ಶನ್ ಹಾಗೂ ಪವಿತ್ರಾ ಗೌಡಳನ್ನು ನೋಡಿ ಕಣ್ಣೀರಿಟ್ಟು ಕ್ಷಮೆ ಕೋರಿ ದ್ದಾನೆ. ಆದರೆ ಸಿಟ್ಟಾದ ಪವಿತ್ರಾ, 'ನನ್ನ ರೇಟ್ ಕೇಳುತ್ತೀಯಾ? ನನ್ನನ್ನು ಮೇಂಟೇನ್ ಮಾಡುತ್ತೀಯಾ? ವಾಕರಿಕೆ ಬರುವಂತೆ ಪ್ರೈವೇಟ್ ಪಾರ್ಟ್ಸ್ ಫೋಟೋ ಕಳುಹಿ ಸುತ್ತೀಯಾ?' ಎಂದಿದ್ದಾಳೆ. ಈ ಹಂತದಲ್ಲಿ ರೇಣುಕಗೆ ತನ್ನ ಚಪ್ಪಲಿಯಿಂದ ಪವಿತ್ರಾ ಬಾರಿಸಿದ್ದಾಳೆ. ಆಗ ಚಪ್ಪಲಿ ಕಸಿದುಕೊಂಡು ದರ್ಶನ್ ಕೂಡ ಹೊಡೆದಿದ್ದಾರೆ. ಅಲ್ಲದೆ ಆತನ ಎದೆ ಮೇಲೆ ಕಾಲಿಟ್ಟು ಅದುಮಿದ ದರ್ಶನ್, ನನ್ನ ಹೆಂಡ್ತಿಗೆ ನಿನ್ನ ಅಂಗಾಂಗಗಳ ಫೋಟೋ ಕಳುಹಿಸ್ತೀಯಾ ಸೂ... ಮಗನೇ ಎಂದು ನಿಂದಿಸುತ್ತಾರೆ. ಆಗ ತನ್ನ ಸಹಚರ ಪವನ್‌ಗೆ ರೇಣುಕಾಸ್ವಾಮಿ ಬಟ್ಟೆ ಬಿಚ್ಚುವಂತೆ ಹೇಳುವ ದರ್ಶನ್, ಪವಿತ್ರಾಳನ್ನು ವಿನಯ್ ಮೂಲಕ ಮನೆಗೆ ಕಳುಹಿಸುತ್ತಾರೆ. ಬಳಿಕ ರೇಣುಕಾಸ್ವಾಮಿ ಮೊಬೈಲ್ ಕಸಿದು ಕೊಳ್ಳುವಂತೆ ಪ್ರದೂಷ್‌ಗೆ ದರ್ಶನ್ ಹೇಳು ತಾರೆ. ಆಗ ಪವಿತ್ರಾಳಂತೆ ಇನ್‌ಸ್ಟಾಗ್ರಾಂನಲ್ಲಿ ಗೌತಮ್ ಹೆಸರಿನ ಖಾತೆಯಿಂದ ಹಲವು ಸ್ತ್ರೀಯರಿಗೆ ರೇಣುಕಾ ಅಶ್ಲೀಲ ಸಂದೇಶ ಕಳಿಸಿ ದ್ದು ಗೊತ್ತಾಗುತ್ತದೆ. ಆಗ ಮತ್ತಷ್ಟು ಕೆರಳಿದ ದರ್ಶನ್, ಆ ಮೆಸೇಜ್ ಓದುತ್ತಲೇ ಏನೋ 'ಕಾಮಿಷ್ಟ' ಎಂದು ಕಪಾಳ, ಎದೆ, ಮರ್ಮಾಂಗ ಕೈ ಹೊಡೆಯುತ್ತಾರೆ. ಕೊನೆಗೆ ಸಹಚರರು ರೇಣುಕಾನನ್ನು ಭೀಕರ ಹತ್ಯೆ ಮಾಡುತ್ತಾರೆ.

ಗೊತ್ತೆ ಇಲ್ಲದ ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಪತ್ತೆ ಹಚ್ಚಿದ್ದು ಹೇಗೆ? ಸಿನಿಮೀಯ ಕಾರ್ಯಾಚರಣೆ!

ರೇಣುಕಾಸ್ವಾಮಿ ಸತ್ತಾಗ ಶೆಡ್‌ನಲ್ಲೇ ಇದ್ದ ದರ್ಶನ್ 

ಪಟ್ಟಣಗೆರೆಯ ಶೆಡ್‌ ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿ, ಆತ ಮೃತಪಟ್ಟಾಗ ದರ್ಶನ್ ಅಲ್ಲೇ ಇದ್ದರು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಆತ ಸತ್ತ ನಂತರ ತನ್ನ ಸಹಚರರಿಗೆ, 'ಹೆಣ ತಗೊಂಡು ಹೋಗಿ ಎಲ್ಲಾದರೂ ಬಿಸಾಕಿ, ನನ್ನ-ಪವಿತ್ರಾ ಹೆಸರು ಯಾವುದೇ ಕಾರಣಕ್ಕೂ ಹೊರಗೆ ಬರಬಾರದು. ಹಣ ಎಷ್ಟು ಖರ್ಚಾದರೂ ಪರವಾಗಿಲ್ಲ' ಎಂದು ದರ್ಶನ್ ಹೇಳಿದ್ದರು ಎಂದೂ ಚಾಜ್ ್ರಶೀಟ್‌ನಲ್ಲಿ ಇದೆ.

ತಿಂಗಳಿಗೆ ₹10 ಸಾವಿರ ಕೊಡ್ತೀನಿ, ಲಿವ್ ಇನ್‌ಗೆ ಬಾ ಎಂದಿದ್ದ ರೇಣುಕಾ! 

ಬೆಂಗಳೂರು: ನನ್ನ ಜೊತೆ ಲಿವ್ ಇನ್ ರಿಲೇಷನ್ ಗೆ ಬಾ, ಪ್ರತಿ ತಿಂಗಳು 10 ಸಾವಿರ ರು. ಕೊತ್ತೇನೆ ಎಂದು ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಸತತವಾಗಿ ಮೆಸೇಜ್‌ಗಳನ್ನು ಕಳುಹಿಸಿದ್ದ. ಅಲ್ಲದೆ, ತನ್ನ ಮರ್ಮಾಂಗದ ಫೋಟೋ ಹಾಗೂ  ಕಳುಹಿಸುತ್ತಿದ್ದ.ನಿನ್ನ ಪೋಟೋನೋಡಿಕೊಂಡು ಹಸ್ತಮೈಥುನ ಮಾಡಿಕೊಂಡೆ ಎಂದೂ ಹೇಳಿದ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಸಲಾಗಿದೆ.

click me!