ಪತ್ನಿ ವಿಜಯಲಕ್ಷ್ಮೀ ಊಟ ತರ್ತಾಳೆಂದು ಜೈಲೂಟ ಬಿಟ್ಟು ಕುಳಿತ ನಟ ದರ್ಶನ್!

By Sathish Kumar KH  |  First Published Sep 5, 2024, 3:04 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್, ಜೈಲಿನ ಊಟವನ್ನು ತ್ಯಜಿಸಿ ಪತ್ನಿ ವಿಜಲಕ್ಷ್ಮಿ ತರುವ ಮನೆಯ ವಿಶೇಷ ಊಟಕ್ಕಾಗಿ ಕಾಯುತ್ತಿದ್ದಾರೆ.


ಬಳ್ಳಾರಿ (ಸೆ.05): ರೇಣುಕಾಸ್ವಾಮಿ ಕೊಲೆಗೈದ ಆರೋಪದಲ್ಲಿ ಸೆಂಟ್ರಯಲ್ ಜೈಲು ಸೇರಿದ ವಿಚಾರಣಾಧೀನ ಕೈದಿ ನಟ ದರ್ಶನ್ ಜೈಲಿನಲ್ಲಿ (Actor Darshan In Ballari Central Jail) ಕೊಡುವ ಊಟವನ್ನು ಬಿಟ್ಟು ತನಗಾಗಿ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ವಿಶೇಷ ಊಟ ಕೊಡಲು ಬರುತ್ತಾಳೆಂದು ಕಾದು ಕುಳಿತಿದ್ದಾನೆ.

ಹೌದು, ನಟ ದರ್ಶನ್ ಕೊಲೆ ಮಾಡಿದ ಆರೋಪದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು (Bengaluru Parappana Agrahara Jail) ಸೇರಿದ್ದರೂ ಜೈಲಧಿಕಾರಿಗಳು ಹಾಗೂ ಅಲ್ಲಿದ್ದ ನಟೋರಿಯಸ್ ರೌಡಿಗಳೊಂದಿಗೆ ಸೇರಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದನು. ಆದರೆ, ಜೈಲಿನಲ್ಲಿದ್ದರೂ ಬುದ್ಧಿ ಕಲಿಯದೇ ತಾನಿರುವ ನರಕಸದೃಶ ಜೈಲನ್ನೇ ಸ್ವರ್ಗ ಮಾಡಿಕೊಂಡಿದ್ದರಿಂದ ಆತನನ್ನು ಬಳ್ಳಾರಿಯ ಸೆಂಟ್ರಲ್ ಜೈಲಿಗೆ ರವಾನಿಸಲಾಗಿತ್ತು. ಈಗ ಬಳ್ಳಾರಿ ಸೆಂಟ್ರಲ್ ಜೈಲಿನ ಊಟ ಸರಿಹೋಗದೇ ಪರದಾಡುತ್ತಿದ್ದಾನೆ. ಅತಿಯಾಸ ಬಿಸಿಲಿನ ಝಳಕ್ಕೆ ನಲುಗಿ ಹೋಗಿದ್ದು, ಬೆಳಗ್ಗಿನ ನಿತ್ಯ ಕರ್ಮಗಳನ್ನು ಮುಗಿಸಲೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಸರ್ಜಿಕಲ್ ಚೇರ್ ಅನ್ನು ಜೈಲಿಗೆ ತರಿಸಿಕೊಂಡಿದ್ದಾನೆ.

Tap to resize

Latest Videos

ಟೆರರಿಸ್ಟ್ ಆಗುತ್ತೇನೆ, ದರ್ಶನ್ ಪಕ್ಕದ ಸೆಲ್ ಗೆ ಹಾಕಿ ಎಂದವನು ಸರ್ಕಾರಿ ಕಾರಿಗೆ ಬೆಂಕಿ ಹಚ್ಚಿದ!

ಇದೀಗ ತನ್ನನ್ನು ಭೇಟಿ ಮಾಡಲು ತನ್ನ ಹೆಂಡತಿ ಬರುತ್ತಾಳೆ. ತನಗಾಗಿ ವಿಶೇಷ ಊಟವನ್ನು ತರುತ್ತಾಳೆ ಎಂದು ಜೈಲಿನ ಊಟವನ್ನು ಮಾಡಿದೇ ಹೆಂಡತಿ ತರುವ ಮನೆ ಊಟಕ್ಕಾಗಿ ಕಾದು ಕುಳಿತಿದ್ದಾನೆ. ಸಿನಿಮಾದಲ್ಲಿ ನಟನೆ ಮಾಡುತ್ತಾ ಕೋಟ್ಯಂತರ ರೂ. ಆದಾಯ ಗಳಿಸುತ್ತಾ ಪ್ರತಿನಿತ್ಯ ಮದ್ಯ, ಮಾಂಸ ಸೇರಿ ಮೃಷ್ಟಾನ್ನ ಭೋಜನ ಸವಿಯುತ್ತಿದ್ದ ದರ್ಶನ್‌ಗೆ ಜೈಲಿನ ಊಟ ಹಿಡಿಸದೇ ಪರದಾಡುತ್ತಿದ್ದಾನೆ. ಇದೀಗ ಮಧ್ಯಹ್ನದ ಊಟ ಬಿಟ್ಟು, ಪತ್ನಿ ಬರುವೆಕೆಗಾಗಿ ಕಾದು ಕುಳಿತಿದ್ದಾನೆ.

ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದ ಒಂದು ವಾರದಲ್ಲಿ ಗಂಡ ದರ್ಶನ್‌ನನ್ನು ನೋಡಲು ಹೋಗಿದ್ದ ಪತ್ನಿ ವಿಜಯಲಕ್ಷ್ಮಿ ಸಾಕಷ್ಟು ಡ್ರೈ ಪ್ರೂಟ್ಸ್, ತಿಂಡಿ ತಂದಿದ್ದರು. ಇದೀಗ ಪುನಃ ನನ್ನ ಹೆಂಡತಿ ಇದೇ ತರಹ ರುಚಿಯಾದ ಅಡುಗೆ ಮಾಡಿಕೊಂಡು, ತರಹೇವಾರಿ ತಿಂಡಿ ಮಾಡಿಕೊಂಡು ಬರುತ್ತಾಳೆ ಎಂದು ಜೈಲಿನ ಊಟ ಬಿಟ್ಟು ಕಾದು ಕುಳಿತಿದ್ದಾನೆ. ಬಳ್ಳಾರಿ ಜೈಲಿನಲ್ಲಿ ಮಧ್ಯಾಹ್ನದ ಊಟಕ್ಕಾಗಿ 11.30ಕ್ಕೆ ದರ್ಶನ್‌ಗೆ ಚಪಾತಿ, ಅನ್ನ ಸಾಂಬಾರ್ ಕೊಡಲಾಗಿತ್ತು. ಆದರೆ, ಜೈಲಿನ ಊಟವನ್ನು ತಿನ್ನಲೇ ಹೆಂಡತಿ ತರುವ ಊಟಕ್ಕೆ ಎದುರು ನೋಡುತ್ತಿದ್ದಾರೆ. ಆದರೆ, ಸಂಜೆ 4.30ಕ್ಕೆ ಆತನ ಪತ್ನಿ ವಿಜಯಲಕ್ಷ್ಮಿ ಜೈಲಿನೊಳಗೆ ಭೇಟಿ ಮಾಡಲು ಹೋಗಲಿದ್ದು, ಅಲ್ಲಿವರೆಗೂ ಉಪವಾಸ ಇರುವುದಾಗಿ ತೀರ್ಮಾನಿಸಿದ್ದಾನೆ.

ಜೈಲೊಳಗೆ ನೋಡಲು ಬಿಡೋದಾದ್ರೇ ಮದುವೆ ಆಗೋದಕ್ಕೂ ರೆಡಿ ಎಂದ ದರ್ಶನ್ ಫ್ಯಾನ್ ಲಕ್ಷ್ಮಿ!

ವಿಜಯಲಕ್ಷ್ಮಿ ಭೇಟಿಗೆ ಅನುಮತಿ ಪಡೆದ ದರ್ಶನ್ ಸಂಬಂಧಿ: ನಟ ದರ್ಶನ್‌ನಲ್ಲಿ ಭೇಟಿಯಾಗಲು ಆತನ ಪತ್ನಿ ವಿಜಯಲಕ್ಷ್ಮಿ ಹೋಗುವುದಕ್ಕೆ ಅನುಮತಿ ಪಡೆದುಕೊಳ್ಳುವ ನಿಮಿತ್ತ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಂಗಿಯ ಗಂಡ ಸುಶಾಂತ್ ನಾಯ್ಡು ಜೈಲಿನ ಅಧಿಕಾರಿಗಳನ್ನು ಭೇಟಿ ಮಾಡಿ ಬಂದಿದ್ದಾರೆ. ಜೈಲಿಗೆ ಬಂದು ವಿಜಯಲಕ್ಷ್ಮಿ ಬರುವ ಬಗ್ಗೆ ಅವಕಾಶ ಕೇಳಿ ಹೋಗಿದ್ದಾರೆ. ಇನ್ನು ಅವಕಾಶಕ್ಕೆ ಸಂಬಂಧಿಸಿದಂತೆ ಲೇಟರ್ ಕೊಟ್ಟು ಹೋಗಿದ್ದು, ಸಂಜೆ 4.30 ರಿಂದ 5.30ರ ನಡುವೆ 30 ನಿಮಿಗಳ ಕಾಲ ಭೇಟಿ ಮಾಡಲು ಅವಕಾಶ ನೀಡುತ್ತಾರೆ. ದರ್ಶನ್ ಜೊತೆ ಅರ್ಧ ಗಂಟೆ ಮಾತನಾಡೋದಕ್ಕೆ ಅವಕಾಶವಿದ್ದು, ಈ ವೇಳೆ ಜಾರ್ಜ್‌ಶೀಲ್ ಸಲ್ಲಿಕೆಯಲ್ಲಿ ತನ್ನ ಮೇಲೆ ಸಲ್ಲಿಕೆಯಾಗಿರುವ ಸಾಕ್ಷಿಗಳು ಹಾಗೂ ಜಾಮೀನು ಪಡೆಯುವ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಬಹುದು.

click me!