ನಿಲ್ಲದ ಮೇಲಧಿಕಾರಿಗಳ ಕಿರುಕುಳ, ಮುಂದುವರೆದ KSRTC ನೌಕರರ ಆತ್ಮಹತ್ಯೆ

By Suvarna News  |  First Published Sep 27, 2021, 7:44 PM IST

* ಮುಂದುವರೆದ KSRTC ನೌಕರರ ಆತ್ಮಹತ್ಯೆ
* ಮಂಗಳೂರು ವಿಭಾಗದ 3ನೇ ಘಟಕದ ಚಾಲಕ ಕಂ ನಿರ್ವಾಹಕ ನೇಣಿಗೆ ಶರಣು
* ಮೇಲಧಿಕಾರಿಗಳ ಕಿರುಕುಳ ಆರೋಪ


ಮಂಗಳೂರು, (ಸೆ.27): ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು  ಮಂಗಳೂರು ಕೆಎಸ್​ಆರ್​ಟಿಸಿ (KSRTC) ಘಟಕದ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೆಎಸ್​ಆರ್​ಟಿಸಿ ಮಂಗಳೂರು (Mangaluru) ವಿಭಾಗದ 3ನೇ ಘಟಕದ ಚಾಲಕ ಕಂ ನಿರ್ವಾಹಕ ನಿಂಗಪ್ಪ ನೇಣು ಹಾಕಿಕೊಂಡ ನೌಕರ.

Tap to resize

Latest Videos

ಬಾಗಲಕೋಟೆ(Bagalkot) ಜಿಲ್ಲೆಯ ಹುನಗುಂದ ತಾಲೂಕಿನ ರಾಮವಡಗಿ ಗ್ರಾಮದ ನಿಂಗಪ್ಪ ಕೆಎಸ್​ಆರ್​ಟಿಸಿ ಮಂಗಳೂರು ಘಟಕದಲ್ಲಿ ಕರ್ತವ್ಯದಲ್ಲಿದ್ದು, ಮಂಗಳೂರಿನ ಕುಂಟಿಕಾನ ಬಳಿಯ ಬಾಡಿಗೆ ‌ಮನೆಯೊಂದರಲ್ಲಿ ಇಂದು ಸೆ.2) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಮೇಲಧಿಕಾರಿ ಕಿರುಕುಳ; ಆರೋಗ್ಯ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

ಬಸ್ ತೆಗೆಯುವ ವಿಚಾರದಲ್ಲಿ ನಿರ್ಲಕ್ಷ್ಯ ಆರೋಪ ಹೊರಿಸಿ ನಿಂಗಪ್ಪ ಅವರನ್ನು ಕೆಲವು ದಿನಗಳ ಹಿಂದೆ ಅಮಾನತು ಮಾಡಲಾಗಿತ್ತು. ಹೀಗೆ ಅಮಾನತಾದ ಬಳಿಕ ನಿಂಗಪ್ಪ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಅವರು ಸಾಯಲು ಮೇಲಧಿಕಾರಿಗಳ ಕಿರುಕುಳವೇ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಕೆಎಸ್​ಆರ್​​ಟಿಸಿ ಟಿಸಿ ನಂದಕುಮಾರ್, ಡಿಟಿಒ ಕಮಲಾಕರ್ ಹಾಗೂ ಕೆಎಸ್​ಆರ್​​ಟಿಸಿ ಡಿಸಿ ಅರುಣ್ ಕುಮಾರ್ ಅವರ ಕಿರುಕುಳವೇ ಕಾರಣ ಎಂದು  ಕುಟುಂಬಸ್ಥರು ಆರೋಪ ಮಾಡಿದ್ದು, ಉರ್ವ ಪೊಲೀಸ್​ ಠಾಣೆ ಎದುರು ಶವ ಇಟ್ಟು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

click me!