Raichur ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿನಿಯರ ಜತೆ ಇಬ್ಬರು ಯುವಕರು ಪತ್ತೆ

By Suvarna News  |  First Published Jul 25, 2022, 10:33 PM IST

ರಾಯಚೂರಿನಿಂದ ಕಾಣೆಯಾಗಿದ್ದ ನಾಲ್ವರು ವಿದ್ಯಾರ್ಥಿನಿಯರು ಪತ್ತೆಯಾಗಿದ್ದಾರೆ. ಆದ್ರೆ, ವಿದ್ಯಾರ್ಥಿನಿಯರ ಜೊತೆ ಇಬ್ಬರು ಯುವಕರು ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. 


ರಾಯಚೂರು, (ಜುಲೈ.25):ಕಾಲೇಜಿಗೆ ಹೋಗಿ ಬರುವುದಾಗಿ ಕಾಣೆಯಾಗಿದ್ದ ನಾಲ್ವರು ವಿದ್ಯಾರ್ಥಿನಿಯರು ಕೊನೆಗೂ ಪತ್ತೆಯಾಗಿದ್ದಾರೆ. ಇಬ್ಬರು ಇಂದು(ಸೋಮವಾರ) ಹುಬ್ಬಳ್ಳಿಯಲ್ಲಿ ಹುಡುಗರ ಜೊತೆಗಿದ್ದಾಗ  ಸಿಕ್ಕಿದ್ರೆ, ಮತ್ತೀಬ್ಬರು ಸಂಜೆ ರಾಯಚೂರಿನ ಸಾಥ್ ಮೇಲ್ ಬಳಿ ಪತ್ತೆಯಾಗಿದ್ದಾರೆ. 

ಜುಲೈ 23ರಂದು ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿನಿಯರು ಸೇಫ್‌ ಆಗಿ ಸಿಕ್ಕಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ರಾಯಚೂರಿಗೆ ವಾಪಸ್ ಆಗಿದ್ರೆ, ಇನ್ನಿಬ್ಬರು ವಿದ್ಯಾರ್ಥಿಗಳು ಹುಡುಗರ ಜೊತೆ ಹುಬ್ಬಳ್ಳಿಯಲ್ಲಿ ಇದ್ದರು. ಇಬ್ಬರು ವಿದ್ಯಾರ್ಥಿನಿಯರನ್ನ ರಾಯಚೂರು ಪೊಲೀಸಸರು ಠಾಣೆಗೆ ಕರೆದು ಎಲ್ಲಿಗೆ ಹೋಗಿದ್ರಿ? ಏಕೆ ಹೋಗಿದ್ರಿ? ಯಾರ ಜೊತೆ ಹೋಗಿದ್ರಿ ಅಂತೆಲ್ಲಾ ವಿಚಾರಣೆ ನಡೆಸಿದ್ದಾರೆ.

Tap to resize

Latest Videos

ಕಾಲೇಜಿಗೆ ಹೋದ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ!

ಇದೇ ಜುಲೈ 23ರಂದು ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಈ ನಾಲ್ವರು ವಿದ್ಯಾರ್ಥಿನಿಯರು ವಾಪಸ್ ಮನೆ ಬಂದಿರಲಿಲ್ಲ. ಈ ಬಗ್ಗೆ ಪೋಷಕರು ರಾಯಚೂರು ಮಹಿಳಾ ಪೊಲೀಸ್‌ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಎರಡು ತಂಡಗಳನ್ನ ರಚನೆ ಮಾಡಿ ಕಾರ್ಯಚರಣೆಗಿಳಿದಿತ್ತು. ರಾಯಚೂರು ನಗರದ ಬಾಲಕಿಯರ ಸರ್ಕಾರಿ ಕಾಲೇಜಿನಲ್ಲಿ ಮೂವರು ದ್ವಿತೀಯ ಪಿಯುಸಿ  ಓದುತ್ತಿದ್ದು, ಮತ್ತೋರ್ವ ವಿದ್ಯಾರ್ಥಿನಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. 

ಟ್ರಿಪ್‌ಗೆ ಹೋಗಿದ್ದ ವಿದ್ಯಾರ್ಥಿನಿಯರು
ಹೌದು.....ಹೌದು...ಹುಬ್ಬಳ್ಳಿಯಲ್ಲಿ ಪತ್ತೆಯಾದ ಇಬ್ಬರು ವಿದ್ಯಾರ್ಥಿನಿಯರ ಜೊತೆ ಇಬ್ಬರು ಹುಡುಗರು ಸಹ ಸಿಕ್ಕಿದ್ದಾರೆ. ಇವರು ಪರಸ್ಪರ ಪ್ರೀತಿಸುತ್ತಿದ್ದು, ಇವರ ಜೊತೆ ಸಾಥ್ ಮೇಲ್‌ನಲ್ಲಿ ಪತ್ತೆಯಾದ ಇಬ್ಬರು ವಿದ್ಯಾರ್ಥಿನಿಯರು ಹೋಗಿದ್ದರು ಎಂದು ತಿಳಿದುಬಂದಿದೆ. ನಾಲ್ವರು ವಿದ್ಯಾರ್ಥಿನಿಯರು ಹಾಗೂ ಇಬ್ಬರು ಹುಡುಗರು ಮಾತಾಡಿಕೊಂಡು ಟ್ರಿಪ್‌ಗೆ ಹೋಗಿದ್ದರು ಎಂದು ತಿಳಿದುಬಂದಿದೆ. ಆದ್ರೆ, ಇಬ್ಬರು ವಿದ್ಯಾರ್ಥಿಗಳು ರಾಯಚೂರಿಗೆ ವಾಪಸ್ ಆಗಿದ್ರೆ, ಇನ್ನಿಬ್ಬರು ವಿದ್ಯಾರ್ಥಿಗಳು ಹುಡುಗರ ಜೊತೆ ಹುಬ್ಬಳ್ಳಿಯಲ್ಲಿ ಇದ್ದರು. ಇದು ಅಚ್ಚರಿಗೆ ಕಾರಣವಾಗಿದೆ.

ಈ ಪ್ರಕರಣ ಕುತೂಹಲ ಮೂಡಿಸಿದ್ದು, ಆರು ಜನರು ವಿಚಾರಣೆಗೊಳಪಡಿಸಿದ ಬಳಿಕ ಎಲ್ಲಾ ಸತ್ಯಾಂಶ ಬಯಲಾಗಲಿದೆ.

ವಿದ್ಯಾರ್ಥಿನಿಯರು ಸರಿಯಾಗಿ ಕಾಲೇಜಿಗೆ ಬರುತ್ತಿರಲಿಲ್ಲ: 
ಪಿಯು ಕಾಲೇಜಿಗೆ ಭೇಟಿ‌ ನೀಡಿದ ಕಾಲೇಜಿನ ಕಾರ್ಯಾಧ್ಯಕ್ಷ ರವಿ ಜಲ್ದಾರ್, ವಿದ್ಯಾರ್ಥಿನಿಯರು ಸರಿಯಾಗಿ ಕಾಲೇಜಿಗೆ ಬರುತ್ತಿರಲಿಲ್ಲ. ಕಳೆದ ನಾಲ್ಕು ದಿನಗಳಿಂದ ಅವರು ಕಾಲೇಜಿಗೆ ಬಂದಿಲ್ಲ ಎಂದು ಹೇಳಿದ್ದಾರೆ. ಕಾಲೇಜಿನ ಪ್ರಾಂಶುಪಾಲರು ಹಾಗೂ ಪೊಲೀಸರ ಜೊತೆಗೆ ಅವರೂ ಚರ್ಚೆ ನಡೆಸಿದ್ದಾರೆ. ಚರ್ಚೆ ಬಳಿಕ ಕಾಲೇಜಿನ ಕಾರ್ಯಾಧ್ಯಕ್ಷ ರವಿ ಜಲ್ದಾರ್ ಈ ಮಾಹಿತಿ ನೀಡಿದ್ದಾರೆ.

click me!