ಸಿಸಿಬಿ ಪೊಲೀಸರ ಭರ್ಜರಿ ದಾಳಿ; ಇವೆಂಟ್ ಮ್ಯಾನೇಜ್‌ಮೆಂಟ್ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿ ಬಂಧನ

By Ravi Janekal  |  First Published Oct 12, 2024, 7:09 PM IST

ಸಿಲಿಕಾನ್ ಸಿಟಿಯಲ್ಲಿ ಈವೆಂಟ್ ಮ್ಯಾನೇಜ್‌ಮೆಂಟ್ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಖತರ್ನಾಕ್ ದಂಪತಿಗಳನ್ನ ಸಿಸಿಬಿ ದಾಳಿ ನಡೆಸಿ ಬಂಧಿಸಿದ್ದಾರೆ.


ಬೆಂಗಳೂರು (ಅ.12): ಸಿಲಿಕಾನ್ ಸಿಟಿಯಲ್ಲಿ ಈವೆಂಟ್ ಮ್ಯಾನೇಜ್‌ಮೆಂಟ್ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಖತರ್ನಾಕ್ ದಂಪತಿಗಳನ್ನ ಸಿಸಿಬಿ ದಾಳಿ ನಡೆಸಿ ಬಂಧಿಸಿದ್ದಾರೆ.

ಪ್ರಕಾಶ್ ಹಾಗೂ ಪಾರಿಜಾತ ಬಂಧಿತ ದಂಪತಿ. ಬೆಂಗಳೂರಿನ ಪಟ್ಟೆಗಾರಪಾಳ್ಯ ನಿವಾಸಿಗಳಾದ ಆರೋಪಿಗಳು. ರಾಕೇಶ್, ಪೂಜಾ ಎಂದು ಹೆಸರು ಬದಲಿಸಿಕೊಂಡು ದಂಧೆಗೆ ಇಳಿದಿದ್ದ ಆರೋಪಿಗಳು. ಉದ್ಯೋಗ ಕೊಡಿಸುವುದಾಗಿ ನಂಬಿಸಿ ಉತ್ತರ ಕರ್ನಾಟಕ ಮೂಲದ ಬಡ ಯುವತಿಯವರಿಗೆ ದುಪ್ಪಟ್ಟು ಹಣದ ಆಮಿಷೆ ತೋರಿಸಿ ನಗರಕ್ಕೆ ಕರೆತರುತ್ತಿದ್ದ ಆರೋಪಿಗಳು, ಬಳಿಕ ಹೊರರಾಜ್ಯದ ಶ್ರೀಮಂತರು, ಉದ್ಯಮಿಗಳು, ಕಾಲೇಜು ಯುವಕರಿಗೆ ಬಡಹೆಣ್ಣುಮಕ್ಕಳನ್ನು ಸಪ್ಲೈ ಮಾಡುತ್ತಿದ್ದ ಆರೋಪಿಗಳು.

Tap to resize

Latest Videos

undefined

ಬೆಂಗಳೂರು: ವೇಶ್ಯಾವಾಟಿಕೆ ದಂಧೆ ಮೇಲೆ ದಾಳಿ, ಇಬ್ಬರು ಬಾಂಗ್ಲಾದೇಶಿ ಬಾಲಕಿಯರ ರಕ್ಷಣೆ

ಹೈಟೆಕ್ ದಂಧೆ: 

ಮದುವೆ  ಈವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ಪ್ರತಿ ವಾರಕ್ಕೊಮ್ಮೆ ಉತ್ತರ ಕರ್ನಾಟಕ ಮೂಲಕ ಬಡ ಹೆಣ್ಣಮಕ್ಕಳನ್ನು ಬೆಂಗಳೂರಿನಿಂದ ತಮಿಳನಾಡಿನ ಪಾಂಡಿಚೇರಿಗೆ ಕರೆದೊಯ್ದು ಐಷಾರಾಮಿ ರೆಸಾರ್ಟ್‌ನಲ್ಲಿಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿ. ರೆಸಾರ್ಟ್‌ನಲ್ಲಿ ಪಾರ್ಟಿ ಆಯೋಜನೆ ಮಾಡಿ ಅಲ್ಲಿಗೆ ಬರುವವರಿಗೆ ತಲಾ 25 ಸಾವಿರದಿಂದ ಐವತ್ತು ಸಾವಿರದವರೆಗೆ ರೇಟ್ ಫಿಕ್ಸ್ ಮಾಡುತ್ತಿದ್ದರು. ಪಾರ್ಟಿಗೆ ಬಂದವರಿಗೆ ಊಟ, ಮದ್ಯ ಸರಬರಾಜು ಮಾಡುವುದು ತಡರಾತ್ರಿಯಾಗುತ್ತಿದ್ದಂತೆ ಯುವತಿಯರನ್ನು ವೇಶ್ಯಾವಾಟಿಕೆಗೆ ತೊಡಗಿಸುತ್ತಿದ್ದರು.

ಉತ್ತರಕನ್ನಡ: ಮುರುಡೇಶ್ವರದ ಹೊಟೇಲ್‌ನಲ್ಲಿ ವೇಶ್ಯಾವಾಟಿಕೆ ದಂಧೆ, ನಾಲ್ವರ ಬಂಧನ

 ಈವೆಂಟ್ ಮ್ಯಾನೇಜ್‌ಮೆಂಟ್ ಹೆಸರಲ್ಲಿ ರಾಜ್ಯದ ಯುವತಿಯರನ್ನು ಹೊರರಾಜ್ಯಕ್ಕೆ ಕರೆದೊಯ್ದು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿರುವ ಬಗ್ಗೆ ಬೆಂಗಳೂರು ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಇಂದು ಬೆಂಗಳೂರಿನಿಂದ ಯುವತಿಯರನ್ನು ತಮಿಳನಾಡಿಗೆ ಕರೆದೊಯ್ಯುವ ವೇಳೆ ದಾಳಿ ನಡೆಸಿದ ಸಿಸಿಬಿ ಪೊಲೀಸರು. ಸದ್ಯ ನಾಲ್ವರು ಯುವತಿರನ್ನು ರಕ್ಷಿಸಿರುವ ಪೊಲೀಸರು. ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ನಗರದಲ್ಲಿ ಇವೆಂಟ್‌ ಮ್ಯಾನೇಜ್‌ಮೆಂಟ್ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ಮಾಡುತ್ತಿರುವ ದೊಡ್ಡ ಜಾಲವೇ ಇರುವ ಸಾಧ್ಯತೆ ಹಿನ್ನೆಲೆ ಎಲ್ಲ ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿರುವ ಪೊಲೀಸರು.

click me!