ಯಾದಗಿರಿ: ನಕಲಿ ರಸಗೊಬ್ಬರ ಮಾರಾಟ, ನಾಲ್ವರ ಬಂಧನ

By Kannadaprabha News  |  First Published Jul 21, 2022, 4:01 AM IST

ರೈತರಿಗೆ ಮೋಸದಿಂದ ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳ ಬಂಧನ


ಶಹಾಪುರ(ಜು.21):  ರೈತರಿಗೆ ಮೋಸದಿಂದ ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ.

ಭೀರಲಿಂಗ ನಾಗನಟಗಿ, ಮುತ್ತಪ್ಪ ಪೂಜಾರಿ, ಪರಮಾನಂದ ಕೋಣಸಿರಸಗಿ, ಭೀಮ್‌ಸಿಂಗ್‌ ರಾಠೋಡ್‌ ಬಂಧಿತ ಆರೋಪಿಗಳು. ಪೊಲೀಸ್‌ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಲಾಗಿದೆ. 520 ರಸಗೊಬ್ಬರ ಚೀಲಗಳು, 2 ಆರ್‌ಇವಿಓ ಕಂಪನಿಯ ಚೀಲಗಳನ್ನು ಹೊಲೆಯುವ ಮಶೀನ್‌ಗಳು, ಡಿಎಪಿ ಹೆಸರಿನ 320 ಹೊಸ ಖಾಲಿ ಚೀಲಗಳು ಆರೋಪಿಗಳಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಗೋಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos

undefined

Gadag News: ಅಧಿಕ ಬಡ್ಡಿ, ಸೈಟ್ ಹೆಸರಲ್ಲಿ ಜನರಿಗೆ ಕಲರ್ ಕಲರ್ ಟೋಪಿ ಹಾಕಿದ್ದ ಆರೋಪಿ ಅರೆಸ್ಟ್!

ಹೊಸಗೇರಾ ಗ್ರಾಪಂ ಹತ್ತಿರ ಇರುವ ಸಮುದಾಯ ಭವನದ ಮುಂದೆ ಒಬ್ಬ ವ್ಯಕ್ತಿಯು ರೈತರಿಗೆ ಮೋಸ ಮಾಡುವ ಉದ್ದೆಶದಿಂದ ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿರುವುದು ಖಚಿತ ಮಾಹಿತಿ ಆಧಾರದ ಮೇಲೆ ಜಿಲ್ಲಾ ಎಸ್ಪಿ ಡಾ. ವೇದಮೂರ್ತಿ, ಡಿವೈಎಸ್ಪಿ ಮಂಜುನಾಥ ಟಿ. ಮಾರ್ಗದರ್ಶನದಲ್ಲಿ ಕೃಷಿ ಮತ್ತು ಪೊಲೀಸ್‌ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, 520 ರಸಗೊಬ್ಬರ ಚೀಲಗಳು, 2 ಆರ್‌ಇವಿಓ ಕಂಪನಿಯ ಚೀಲಗಳನ್ನು ಹೊಲೆಯುವ ಮಶೀನ್‌ಗಳು, ಡಿಎಪಿ ಹೆಸರಿನ 320 ಹೊಸ ಖಾಲಿ ಚೀಲಗಳು ಆರೋಪಿತರಿಂದ ವಶಕ್ಕೆ ಪಡೆದು ಬಂಧಿತ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಶಹಾಪುರ ಸಿಪಿಐ ಚೆನ್ನಯ್ಯ ಹಿರೇಮಠ, ಗೋಗಿ ಪಿಎಸ್‌ಐ ಅಯ್ಯಪ್ಪ, ಭೀ.ಗುಡಿ ಪಿಎಸ್‌ಐ ಸಂತೋಷ್‌ ರಾಠೋಡ್‌, ಗೋಗಿ ತನಿಖಾ ಪಿಎಸ್‌ಐ ಸೋಮಲಿಂಗಪ್ಪ, ಸಿಬ್ಬಂದಿಗಳಾದ ಪ್ರೇಮ್‌ಸಿಂಗ್‌, ಶರಣಗೌಡ, ಭೀಮಣ್ಣ, ಬಂದೇನವಾಜ್‌, ನಿಲೇಶ, ಹಣಮಂತ್ರಾಯ, ರವಿಕುಮಾರ, ಶ್ರೀನಿವಾಸ, ವೆಂಕೋಬ, ಮಾನಪ್ಪ (ಭೀ.ಗುಡಿ ಪೊಲೀಸ್‌ ಠಾಣೆ) ಇವರನ್ನು ಎಸ್ಪಿ ಅವರು ಶ್ಲಾಘಿಸಿದ್ದಾರೆ.

ರೈತರು ಇಂತಹ ವ್ಯಕ್ತಿಗಳ ಮೋಸಕ್ಕೆ ಒಳಗಾಗದೆ ಅಧಿಕೃತ ರಸಾಯನಿಕ ಗೊಬ್ಬರ ಮಾರಾಟಗಾರರ ಬಳಿ ರಸಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶಕ ಔಷಧ ಮತ್ತು ಇತರೆ ಅಗತ್ಯಕೃಷಿ ಪರಿಕರಗಳನ್ನು ಖರೀದಿಸಬೇಕು ಅಂತ ಯಾದಗಿರಿ ಜಿಲ್ಲಾ ಎಸ್ಪಿ ಡಾ. ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ. 
 

click me!