ಮುರ್ಡೇಶ್ವರದ ಬಸ್ತಿಮಕ್ಕಿಯ ಐ ಲ್ಯಾಂಡ್ ಹೊಟೇಲ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡ ನಾಲ್ವರನ್ನ ಬಂಧಿಸಲಾಗಿದೆ.
ಉತ್ತರಕನ್ನಡ(ಸೆ.01): ಹೊಟೇಲ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿ ನಾಲ್ವರ ಬಂಧಿಸಿದ ಘಟನೆ ಇಂದು(ಭಾನುವಾರ) ಜಿಲ್ಲೆಯ ಮುರ್ಡೇಶ್ವರದಲ್ಲಿ ನಡೆದಿದೆ.
ಮುರ್ಡೇಶ್ವರದ ಬಸ್ತಿಮಕ್ಕಿಯ ಐ ಲ್ಯಾಂಡ್ ಹೊಟೇಲ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡ ನಾಲ್ವರನ್ನ ಬಂಧಿಸಲಾಗಿದೆ.
ಹೊರಗೆ ಪಿಜಿ, ಒಳಗೆ ಮಾಂಸ ದಂಧೆ... ವಾಟ್ಸಪ್‌ನಲ್ಲಿ ಡೀಲ್, ಯುವತಿಯರು ಈ ಜಾಲದಲ್ಲಿ ಸಿಲುಕಿದ್ದೇಗೆ?
ಉತ್ತರಕನ್ನಡ ಜಿಲ್ಲಾ ಎಸ್ಪಿ ನಾರಾಯಣ ಸೂಚನೆ ಮೇರೆಗೆ ಸಿಇಎನ್ ಡಿಎಸ್ಪಿ ಅಶ್ವಿನಿ ನೇತೃತ್ವದಲ್ಲಿ ದಾಳಿ ನಡೆದಿದೆ. ಪೊಲೀಸರು ಹೊಟೇಲ್ ಒಳಗೆ ಹೊಕ್ಕುತ್ತಿದ್ದಂತೇ ಹೊಟೇಲ್ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೇ ವೇಶ್ಯಾವಾಟಿಕೆಗೆ ಬಳಸುತ್ತಿದ್ದ ಮಹಿಳೆಯರ ಜತೆ ಕೆಲವರು ಪರಾರಿಯಾಗಿದ್ದಾರೆ.
ಹೊಟೇಲ್ ನ ಸಿಕ್ರೇಟ್ ರೂಂನಲ್ಲಿ ಜಾಲಾಡಿದಾಗ ದೊಡ್ಡ ಪ್ರಮಾಣದಲ್ಲಿ ಕಾಂಡೋಮ್ ಪ್ಯಾಕೇಟ್, ಗ್ರಾಹಕರ ಲಗೇಜ್ ಪತ್ತೆಯಾಗಿವೆ. ವೇಶ್ಯಾವಾಟಿಕೆ ನಡೆಸ್ತಿದ್ದ ಇಬ್ಬರು ಹೋಟೇಲ್ ಸಿಬ್ಬಂದಿ ಹಾಗೂ ಇಬ್ಬರು ಗ್ರಾಹಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.